Advertisement
ಹಾವು ಪ್ರಕೃತಿಯ ಭಾಗ ‘ಹಾವು’ಗಳು ವಿಷಯುಕ್ತವಾಗಿರಲಿ ಅಥವಾ ಇಲ್ಲದಿರಲಿ ಅವು ನಮ್ಮ ಪ್ರಕೃತಿಯ ಒಂದು ಭಾಗ. ಅವಿಲ್ಲದೇ ನಮ್ಮ ಜೀವನವೂ ಇಲ್ಲ ಎನ್ನುವಂತೆ ಪ್ರಾಕೃತಿಕ ಸಮತೋಲನಕ್ಕಾಗಿ ಸರೀಸೃಪಗಳೂ ಅತ್ಯವಶ್ಯಕವಾಗಿವೆ. ಪರಿಸರದಲ್ಲಿ ಕಂಡುಬರುವ ಎಲ್ಲ ಜೀವಿಗಳೂ ಒಂದಕ್ಕೊಂದು ಹೊಂದಾಣಿಕೆಯಿಂದಲೇ ಜೀವಿಸಬೇಕಾಗಿದೆ.
ಉರಗ ತಜ್ಞ ಗುರುರಾಜ ಸನಿಲ್ ಅವರ ಪ್ರಕಾರ ಈ ಕಾಲದಲ್ಲಿ ಸಹಜವಾಗಿಯೇ ಹಾವುಗಳು ಕಂಡುಬರುತ್ತವೆ. ಇನ್ನು ಒಂದೆರಡು ತಿಂಗಳುಗಳಲ್ಲಿ ಹಾವುಗಳು ಆಹಾರಾನ್ವೇಷಣೆಯಲ್ಲಿ ತೊಡಗುತ್ತವೆ. ಅಕ್ಟೋಬರ್ ನವಂಬರ್ ತಿಂಗಳುಗಳವರೆಗೆ ಹಾವುಗಳು ಆಹಾರ ಅನ್ವೇಷಣೆಯಲ್ಲಿ ತೊಡಗುತ್ತವೆ. ಕೊಬ್ಬಿನ ಅಂಶವನ್ನು ತಮ್ಮ ದೇಹದಲ್ಲಿ ಸರಿದೂಗಿಸಿಕೊಳ್ಳುವ ಇವುಗಳು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಯಾವುದೇ ಆಹಾರವನ್ನು ಸೇವಿಸದೇ ಸಂತಾನೋತ್ಪತ್ತಿಯಲ್ಲಿ ತೊಡಗಿರುತ್ತವೆ. ಮುಂದಿನ ಜೂನ್ ತಿಂಗಳವರೆಗೂ ಹಾವುಗಳು ನಮ್ಮ ನಡುವೆ ಸುತ್ತಾಡಿಕೊಂಡಿರುತ್ತವೆ ಎನ್ನುವುದು ಅವರ ಅಭಿಪ್ರಾಯ. ಮನುಷ್ಯರ ಇರುವಿಕೆ ಗ್ರಹಿಸುತ್ತವೆ
ಹಾವುಗಳು ತಿರುಗಾಡಿಕೊಂಡಿದ್ದರೂ ಅವುಗಳಿಗೆ ಮನುಷ್ಯರ ಇರುವಿಕೆ ಅರಿಯುವ ಶಕ್ತಿಯಿದೆ. ಹಾಗಾಗಿ ಮಕ್ಕಳು ಒಂದೆಡೆ ಸೇರಿ ಆಟವಾಡಿಕೊಂಡಿದ್ದಾಗ ನಮಗೆ ತಿಳಿದೋ, ತಿಳಿಯದೆಯೋ ಅವು ಮರೆಯಾಗಿ ಬಿಡುತ್ತವೆ. ಅವು ಮಾನವರನ್ನು ಪೀಡಿಸಲು ಬರುವುದಿಲ್ಲ. ಬದಲಾಗಿ ತಮ್ಮಷ್ಟಕ್ಕೇ ತಾವಿರುವ ಜಾಗವನ್ನು ಬದಲಾಯಿಸಿಕೊಳ್ಳುತ್ತವೆ ಎನ್ನುವುದನ್ನು ಗುರುರಾಜ ಸನಿಲ್ ತಿಳಿಸುತ್ತಾರೆ.
Related Articles
ಹಾವುಗಳು ಒಂದು ವೇಳೆ ಕಚ್ಚಿದರೂ ಅದಕ್ಕೆ 3 – 4 ನಿಮಿಷಗಳ ಒಳಗಾಗಿ ಪ್ರಥಮ ಚಿಕಿತ್ಸೆ ಅಗತ್ಯ. ಹಾವು ಕಚ್ಚಿದ ದೇಹದ ಭಾಗದ ಮೇಲ್ಬದಿಯಲ್ಲಿ ‘ಕಟ್ಟು’ಗಳನ್ನು ಹಾಕಿಕೊಂಡು ವಿಷ ದೇಹವನ್ನು ವ್ಯಾಪಿಸದಂತೆ ಮುಂಜಾಗ್ರತೆಯನ್ನು ವಹಿಸಿ ಹಾವು ಕಚ್ಚಿದವರನ್ನು ನಡೆಸದೇ ಎತ್ತಿಕೊಂಡು ಅಥವಾ ವಾಹನಗಳಲ್ಲಿ ಕುಳ್ಳಿರಿಸಿ ತತ್ ಕ್ಷಣ ಸಮೀಪದ ಪಟ್ಟಣಗಳಲ್ಲಿನ ಆಸ್ಪತ್ರೆಗೆ ಧಾವಿಸಬೇಕಿದೆ. ದೇಶದ ಎಲ್ಲಾ ಅಲೋಪತಿಕ್ ಆಸ್ಪತ್ರೆಗಳಲ್ಲಿ ನಾಗರಹಾವು, ಕನ್ನಡಿ ಹಾವು, ಕಡಂಬಳ ಮತ್ತು ಮೃದು ಚರ್ಮದ ವೈಪರ್‌ಗಳಂತಹ ವಿಷಯುಕ್ತ ಹಾವುಗಳಿಗೆ ಶಮನಕಾರಿ ಔಷಧಗಳು ಸದಾ ಲಭ್ಯವಿರುತ್ತವೆ.
Advertisement
— ಆರಾಮ