ಅಹ್ಮದಾಬಾದ್: ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನ ಐಸಿಸಿ ಟಿ20 ವಿಶ್ವಕಪ್ ಗೆದ್ದ ಅಂಡರ್-19 ಭಾರತೀಯ ವನಿತಾ ಕ್ರಿಕೆಟ್ ತಂಡದ ಸದಸ್ಯರನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಮ್ಮಾನಿಸಿದ್ದಾರೆ.
ಈ ಸಾಧನೆಯು ಅನೇಕ ಹುಡುಗಿಯರನ್ನು ಕ್ರಿಕೆಟ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಉತ್ತೇಜಿಸಲಿದೆ ಎಂದವರು ಹೇಳಿದರು.
ಅದ್ಭುತ ಸಾಧನೆಗಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಇಡೀ ರಾಷ್ಟ್ರವು ಮುಂಬರುವ ವರ್ಷಗಳಲ್ಲಿ ವಿಶ್ವಕಪ್ ಗೆದ್ದ ಸಾಧನೆಯನ್ನು ಆಚರಿಸುತ್ತದೆ. ನನ್ನ ಮಟ್ಟಿಗೆ ನನ್ನ ಕ್ರಿಕೆಟ್ ಕನಸುಗಳು 1983ರಲ್ಲಿ ಪ್ರಾರಂಭವಾಯಿತು ಆದರೆ ಈ ವಿಶ್ವಕಪ್ ಗೆಲ್ಲುವ ಮೂಲಕ ನೀವು ಅನೇಕ ಕನಸುಗಳಿಗೆ ಜನ್ಮ ನೀಡಿದ್ದೀರಿ. ಇದು ಅಮೋಘ ಪ್ರದರ್ಶನವಾಗಿದೆ’ ಎಂದು ಸಚಿನ್ ಅವರು ಭಾರತ-ನ್ಯೂಜಿಲ್ಯಾಂಡ್ ನಡುವಣ ಪಂದ್ಯ ಆರಂಭಕ್ಕಿಂತ ಮೊದಲು ನಡೆದ ಅಭಿನಂದನ ಸಮಾರಂಭದಲ್ಲಿ ಹೇಳಿದರು.
ಮಹಿಳಾ ಪ್ರೀಮಿಯರ್ ಲೀಗ್ ಆರಂಭವು ದೊಡ್ಡ ವಿಷಯವಾಗಲಿದೆ. ನಾನು ಪುರುಷರು ಮತ್ತು ಮಹಿಳೆಯರಿಗೆ ಸಮಾನತೆಯನ್ನು ನಂಬುತ್ತೇನೆ. ಕ್ರೀಡೆಯಲ್ಲಿ ಮಾತ್ರವಲ್ಲ. ಎಲ್ಲ ವಿಷಯಗಳಲ್ಲೂ ಸಮಾನ ಅವಕಾಶಗಳು ಇರಬೇಕು” ಎಂದು ಅವರು ದೇಶದಲ್ಲಿ ವನಿತಾ ಕ್ರಿಕೆಟ್ ಬೆಳವಣಿಗೆಗೆ ಬಿಸಿಸಿಐ ಅತ್ಯುತ್ತಮವಾಗಿ ಶ್ರಮ ವಹಿಸುತ್ತಿದೆ ಎಂದರು.