Advertisement

ಪುಣೆ ಗೀತಾ ಭಾಸ್ಕರ ಶೆಟ್ಟಿ ಅವರಿಗೆ ಪುಣೆ ಮನಪಾ ಪುರಸ್ಕಾರ

01:41 PM Jan 31, 2018 | Team Udayavani |

ಪುಣೆ: ಭ್ರಷ್ಟಾಚಾರ ನಿಗ್ರಹ ಮತ್ತು ಅಪರಾಧ ನಿಯಂತ್ರಣ  ಸಮಿತಿಯ  ಸಾಮಾಜಿಕ ಸಂರಕ್ಷಣಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ  ಪುಣೆಯ ಸಮಾಜ ಸೇವಕಿ ಗೀತಾ ಭಾಸ್ಕರ್‌ ಶೆಟ್ಟಿ ಅವರನ್ನು ವಿವಿಧ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜ. 26ರ ಗಣರಾಜ್ಯೋತ್ಸವದಂದು ಪುಣೆ ಮಹಾನಗರಪಾಲಿಕೆಯ ವತಿಯಿಂದ ಸಮ್ಮಾನಿಸಲಾಯಿತು.

Advertisement

ಕ್ರೀಡೆ, ಶೈಕ್ಷಣಿಕ, ವೈದ್ಯಕೀಯ, ನೃತ್ಯ, ಉದ್ಯಮ, ಸಾಹಿತ್ಯ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪುಣೆಯಲ್ಲಿನ ಆಯ್ದ ನಾಗರಿಕರನ್ನು ಗುರುತಿಸಿ ಪ್ರತೀವರ್ಷ ಗಣರಾಜ್ಯೋತ್ಸವದ ದಿನದಂದು  ಮಹಾನಗರಪಾಲಿಕೆ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಜ. 26 ರಂದು ಶಿವಾಜಿ ನಗರದಲ್ಲಿರುವ ಮಹಾನಗರಪಾಲಿಕೆಯ  ಶ್ರೀ ಛತ್ರಪತಿ ಮಹಾರಾಜ್‌ ಸಭಾಗೃಹ ಮನಪಾ ಭವನ ಇಲ್ಲಿ ನಡೆದ ಸಮಾರಂಭದಲ್ಲಿ ಪುಣೆಯ ಮೇಯರ್‌ ಮುಕ್ತಾ ತಿಲಕ್‌ ಅವರು ಸಮ್ಮಾನಿಸಿದರು.

ಪುಣೆಯಲ್ಲಿ ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯರಾಗಿ ತೊಡಗಿಸಿಕೊಂಡಿರುವ ಗೀತಾ ಶೆಟ್ಟಿ ಅವರು ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ, ಅಂತಾರಾಷ್ಟ್ರೀಯ ಮಾನವಾಧಿಕಾರ ಅಸೋಸಿಯೇಟ್ಸ್‌ ಪುಣೆ ನಗರದ ಮಹಿಳಾ ಕಾರ್ಯಾಧ್ಯಕ್ಷೆಯಾಗಿ, ರಾಷ್ಟ್ರೀಯ ಮಾನವಾಧಿಕಾರ ಸಂಘಟನೆಯ ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ, ಪುಣೆ ಮಹಾನಗರಪಾಲಿಕೆಯ ಶಾಲಾ ಸಮಿತಿಯ ಸದಸ್ಯೆಯಾಗಿ, ಪೊಲೀಸ್‌ ವಿಭಾಗದ ದಕ್ಷತಾ ಸಮಿತಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿ¨ªಾರೆ.

ಇವರ ಸಮಾಜಸೇವೆಯನ್ನು ಗುರುತಿಸಿ 2011 ರಲ್ಲಿ ಪುಣೆ ಮಹಾನಗರಪಾಲಿಕೆ ವತಿಯಿಂದ ಮೇಯರ್‌  ಸಿಂಗ್‌ ರಾಜ್‌ ಪಾಲ್‌ ಅವರಿಂದ ಗೌರವ, 2010 ರಲ್ಲಿ ಮಹಾರಾಷ್ಟ್ರದ   ಮಾಜಿ ಮುಖ್ಯಮಂತ್ರಿ  ಪೃಥ್ವಿರಾಜ್‌ ಚವಾಣ್‌  ಅವರಿಂದ ಗೌರವ, 2016 ರಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಯಂತಿ ನಿಮಿತ್ತ ಸತ್ಕಾರ, ಪುಣೆ ತುಳುಕೂಟ ಹಾಗೂ ಪುಣೆ ಬಂಟರ ಸಂಘದಿಂದಲೂ ಪುರಸ್ಕೃತರಾಗಿರುತ್ತಾರೆ.  ಇವರು ಮೂಲತ: ಸಿರಿಬಾಗಿಲು ನಾರಾಯಣ  ಶೆಟ್ಟಿ ಮತ್ತು ಕುತ್ತಾರುಗುತ್ತು ರಾಜೀವಿ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು ಪುಣೆಯ ಹೊಟೇಲ್‌ ಉದ್ಯಮಿಯಾದ ವಾಲ್ಪಾಡಿ ಭಾಸ್ಕರ್‌ ಶೆಟ್ಟಿ ಅವರ ಪತ್ನಿ.         

ವರದಿ:ಕಿರಣ್‌ ಬಿ.ರೈ ಕರ್ನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next