Advertisement
ಸರ್ಕಾರದ ವತಿಯಿಂದ ನಡೆದ ಕಾಮಾಕ್ಷಿದೇವಿ ಸಮೇತ ಪ್ರಸನ್ನ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರ ಥೋತ್ಸ ವಕ್ಕೆ ಶಾಸಕ ಎಚ್.ನಾಗೇಶ್, ಎ.ಸಿ.ಸೋಮಶೇಖರ್‌ಸಮ್ಮುಖದಲ್ಲಿ ತಹಶೀಲ್ದಾರ್ ರಾಜಶೇಖರ್ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
Related Articles
Advertisement
ಜಾನುವಾರುಗಳ ಜಾತ್ರೆ: ಪ್ರಸಿದ್ಧಿಯಾದ ಆವಣಿ ಜಾತ್ರೆಗೆ 10-15 ದಿನ ಕರ್ನಾಟಕ, ಹಾವೇರಿ,ಗಂಗಾವತಿ, ಆಂಧ್ರದ ಬೆಜವಾಡಾ, ಕಡಪ, ಕರೂ°ಲ್,ಒಂಗೋಲ್, ನಲ್ಲೂರು, ತಮಿಳುನಾಡು, ಒರಿಸ್ಸಾಹಾಗೂ ಗೋವಾ ರಾಜ್ಯಗಳಿಂದ ರಾಸುಗಳನ್ನು ಖರೀದಿಸಲು ವ್ಯಾಪಾರಿಗಳು ಆಗಮಿಸಿದ್ದರು.
ಹೊರ ರಾಜ್ಯಗಳ ಸ್ಪರ್ಧೆಗೆ ಆವಣಿ ಎತ್ತುಗಳು: ಕಳೆದ ವರ್ಷಕ್ಕಿಂತಲೂ ಈ ಬಾರಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾಕಷ್ಟು ಜಾನುವಾರುಗಳು ಹೆಚ್ಚಾಗಿ ಜಮಾವಣೆಗೊಂಡಿದ್ದು, ಆಂಧ್ರದ ನಲ್ಲೂರು, ಕಡಪ, ಕರೂಲು, ಗುಂಟೂರು, ರಾಜಮಂಡ್ರಿ, ಒಂಗೋಲ್, ಬೈರೆಡ್ಡಿಪಲ್ಲಿ, ಚಿತ್ತೂರು, ತಮಿಳುನಾಡಿನ ಹೊಸೂರು ಕಡೆಗಳಿಂದ ಬಂದಿರುವ ಮಾರಾಟಗಾರರು ಎತ್ತಿನಗಾಡಿ ಓಟದ ಸ್ಪರ್ಧೆಗೆ ಅಗತ್ಯವಿರುವ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವುಳ್ಳ ಹಲವಾರು ಜೊತೆ ಎತ್ತುಗಳನ್ನು ಕೊಂಡು ಲಾರಿಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದರು.
ಸೆಲ್ಫಿ ತಾಣ: ದೇವರ ದರ್ಶನಕ್ಕೆ ಬರುವ ಭಕ್ತರು ಪ್ರಮುಖವಾಗಿ ಯುವಕ/ಯವತಿಯರಿಗೆ ಆವಣಿ ಶ್ರೀರಾಮಲಿಂಗೇಶ್ವರ ದೇಗುಲ, ಸೀತಾಪಾರ್ವತಿ ಬೆಟ್ಟ,ಪಂಚಲಿಂಗಗಳು ಚಾರಣಾ ಪ್ರದೇಶವಾಗಿರುವುದರಿಂದಸದಾ ಅವುಗಳನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಬೆಟ್ಟದ ಕಲ್ಲುಬಂಡೆಗಳ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.
ರಥೋತ್ಸವದಲ್ಲಿ ಪಾಲ್ಗೊಂಡ ಪ್ರಮುಖರು: ಸಂಸದ ಮುನಿಸ್ವಾಮಿ, ಸಹಾಯಕ ಕಮೀಷನರ್ ಸೋಮಶೇಖರ್, ಮಾಜಿ ಶಾಸಕ ಜಿ.ಮಂಜುನಾಥ್, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಜಿಪಂ ಸದಸ್ಯ ಕೃಷ್ಣಪ್ಪ, ತಾಪಂ ಸದಸ್ಯ ರವಿಕುಮಾರ್, ಯುವ ನಾಯಕ ಕಲ್ಲುಪಲ್ಲಿ ಪ್ರಕಾಶ್, ರಾಜಸ್ವ ನಿರೀಕ್ಷಕ ಸುಬ್ರಹ್ಮಣ್ಯಂ, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಸಿ. ಚಲುವಸ್ವಾಮಿ, ಹೋಬಳಿಯ ಎಲ್ಲಾ ಗ್ರಾಮ ಲೆಕ್ಕಿಗರು,ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಲಕ್ಷಾಂತರ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಳ್ಳತನ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ :
ಕಾನೂನು ಸುವ್ಯವಸ್ಥೆಗಾಗಿ ಡಿವೈಎಸ್‌ಪಿ ಕೆ.ಸಿ.ಗಿರಿ, ಸಿಪಿಐ ಗೋಪಾಲ್‌ನಾಯಕ್, ಪಿಎಸ್‌ಐಗಳಾದ ಪ್ರದೀಪ್ ಸಿಂಗ್ ಮತ್ತು ಶ್ರೀನಿವಾಸ್, ವರಲಕ್ಷ್ಮಮ್ಮ ಮತ್ತು ಚೌಡಪ್ಪ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಜಾತ್ರೆಯಲ್ಲಿ ಮತ್ತು ಬೆಟ್ಟದ ಮೇಲಿನ ದೇಗುಲಕ್ಕೆ ತೆರಳುವ ಭಕ್ತರ ರಕ್ಷಣೆಗಾಗಿ ಪೊಲೀಸ್ ತಂಡಗಳನ್ನು ರಚಿಸಿ ಕಳವು ಪ್ರಕರಣ ನಡೆಯದಂತೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಲ್ಲದೇ 350 ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಿದ್ದರು.
ಒಣ ಹುಲ್ಲು, ಜೋಳದ ಮೇವು ಮಾರಾಟ :
ಜಾನುವಾರುಗಳೊಂದಿಗೆ ತಕ್ಕಮಟ್ಟಿಗೆ ಮೇವನ್ನು ತಂದರೂ ಒಂದೆರಡು ದಿನಗಳಲ್ಲಿ ಎತ್ತುಗಳುಮಾರಾಟವಾಗದೇ ಇದ್ದಾಗ ಮೇವಿನ ಸಮಸ್ಯೆಉಂಟಾಗದೇ ಇರದು. ಅದಕ್ಕಾಗಿ ತಾವು ಪ್ರತಿವರ್ಷದಂತೆ ಈ ಬಾರಿ ಒಣ ಹುಲ್ಲನ್ನು ತಂದುಮಾರಾಟ ಮಾಡಲಾಗುತ್ತಿದೆ ಎಂದು ವಿಕೋಟೆ ರೈತನಾರಾಯಣಸ್ವಾಮಿ ತಿಳಿಸಿದರು. ಜಾತ್ರೆಯಲ್ಲಿಮಾರಾಟಕ್ಕೆ ಬಂದಿದ್ದ ಕೋಲಾರ ತಾಲೂಕು ತಂಬಿಹಳ್ಳಿ ಮುನಿಯಪ್ಪ ಕುಟುಂಬಸ್ಥರು ಜಾನುವಾರುಗಳನ್ನುಮೆರವಣಿಗೆ ಮಾಡಿದರು.
ಶಾಸಕರ ಅಭಿಮಾನಿ ಬಳಗದಿಂದ ಶುಲ್ಕ ಪಾವತಿ :
ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಆರಂಭಿ ಸಿದ್ದು, ಒಂದು ಜೊತೆ ಎತ್ತಿನ ಬೆಲೆ ಕನಿಷ್ಠ 1 ಲಕ್ಷದಿಂದ 2.75 ಲಕ್ಷ ವರೆಗೆ ಮಾರಾಟವಾಗುತ್ತಿದೆ.ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳು ಮತ್ತು ಅಂಗಡಿಗಳ ಶುಲ್ಕ ವಸೂಲಿಗಾಗಿ ಸರ್ಕಾರದಿಂದ ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿಅಂಗಡಿಗಳ ಶುಲ್ಕವನ್ನು ಶಾಸಕ ಎಚ್.ನಾಗೇಶ್ ಅಭಿಮಾನಿ ಬಳಗದಿಂದ ಪಾವತಿಸಿದ್ದರು. ಜಾತ್ರೆಯಲ್ಲಿ ಎತ್ತು,ಗಾಡಿಗಳ ಶುಲ್ಕವನ್ನು ಆವಣಿ ಗ್ರಾಪಂ ಸದಸ್ಯೆ ಜಿ.ಲಕ್ಷ್ಮೀಪ್ರಿಯ ಪಾವತಿಸಿ ಶುಲ್ಕಮುಕ್ತ ಜಾತ್ರೆಯಾಗಿ ಮಾಡಿರುತ್ತಾರೆ. ಜಾತ್ರೆಗೆಆಗಮಿಸುವ ಎಲ್ಲಾ ರಸ್ತೆಗಳಲ್ಲೂ ಗ್ರಾಮಸ್ಥರುಹಲವಾರು ಕಡೆ ಪಾನಕ, ಮಜ್ಜಿಗೆ ವಿತರಿಸುತ್ತಾ ಮಾನವೀಯತೆ ಮೆರೆದಿದ್ದರು.