ಸುದ್ದಿಗಾರರ ಜತೆ ಮಾತನಾಡಿ, ಎಲ್ಲರ ನಿರೀಕ್ಷೆಯೂ ರಾಮ ಮಂದಿರ ನಿರ್ಮಾಣ ವಾಗಲಿ ಎಂಬುದಿದೆ. ತೀರ್ಪು ಬಂದ ನಂತರ ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಮಾಡಬೇಕು.
Advertisement
ಎಲ್ಲರೂ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಬೇಕು. ಮುಸಲ್ಮಾನರು ಕೂಡ ತೀರ್ಪು ಏನೇ ಬಂದರೂ ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಯಾವುದೇ ಗಲಭೆ ನಡೆಯುವುದಿಲ್ಲ. ರಾಮ ಜನ್ಮಭೂಮಿಯಲ್ಲಿಯೇ ಮಂದಿರ ನಿರ್ಮಾಣ ಮಾಡಬೇಕು. ಮಸೀದಿ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸ್ವಲ್ಪ ದೂರದಲ್ಲಿ ನಿರ್ಮಾಣವಾಗಲಿ. ಯಾವುದೇ ಹಿಂಸೆ, ಘರ್ಷಣೆಗೆ ಅವಕಾಶವಾಗಬಾರದು ಎಂದರು.