Advertisement

ಮಳೆ ಕೊರತೆಯಿಂದಾದ ಸಮಸ್ಯೆ ನಿವಾರಿಸಿ

01:42 PM Jul 04, 2017 | Team Udayavani |

ದಾವಣಗೆರೆ: ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆ, ಮುಂದೆ ಮಳೆ ಬಾರದೇ ಇದ್ದರೆ ಕೈಗೊಳ್ಳಬೇಕಾದ ಕ್ರಮ ಕುರಿತು ಸೋಮವಾರ ನಡೆದ ಜಿಪಂ ತ್ತೈ ಮಾಸಿಕ ಕೆಡಿಪಿ ಸಭೆಯಲ್ಲಿ ದೀರ್ಘ‌ ಚರ್ಚೆ ನಡೆಯಿತು.

Advertisement

ಮೇವು ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಿ, ಬೆಳೆ ನಷ್ಟದ ಕುರಿತು ತಕ್ಷಣ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಾಸಕರು ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ,  ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಆಗುತ್ತಿರುವ ಸಮಸ್ಯೆ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೃಷಿ ಇಲಾಖೆ ಚರ್ಚೆ ವೇಳೆ ಜಂಟಿ ನಿರ್ದೇಶಕ ವಿ. ಸದಾಶಿವ, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಮೆ ಮಳೆ ಆಗಿದೆ. ಇದುವರೆಗೆ ಶೇ.22ರಷ್ಟು ಅಂದರೆ 72,000 ಹೆಕೇrರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲೂ ಸುಮಾರು 7 ಸಾವಿರ ಹೆಕೇrರ್‌ ಪ್ರದೇಶದಲ್ಲಿ ಬಿತ್ತಿದ ಬೀಜ ಮೊಳಕೆ ಒಡೆದಿಲ್ಲ. ಅಲ್ಲದೆ, ಮೊಳಕೆ ಒಡೆದ ಬೆಳೆ ಒಣಗುವ ಹಂತಕ್ಕೆ ಬಂದಿದೆ ಎಂದರು.

ಇನ್ನು ತೋಟಗಾರಿಕೆ ಇಲಾಖೆ ಕುರಿತ ಚರ್ಚೆ ವೇಳೆ ಸಚಿವ ಮಲ್ಲಿಕಾರ್ಜುನ್‌, ಜಿಲ್ಲೆಯ ತೋಟಗಾರಿಕೆ ಬೆಳೆ ನಷ್ಟ ಕುರಿತು ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಕಳುಹಿಸಿ. ಅಡಕೆ, ತೆಂಗು ಸಾಕಷ್ಟು ಒಣಗಿ ಹೋಗಿದೆ. ಈ ಕುರಿತು ವಿಸ್ತೃತ ವರದಿ ಸಲ್ಲಿಸಿ ಎಂದಾಗ, ಶಾಸಕರಾದ ವಡ್ನಾಳ್‌ ರಾಜಣ್ಣ, ಡಿ.ಜಿ. ಶಾಂತನಗೌಡ, ಕೆ. ಶಿವಮೂರ್ತಿ ನಾಯ್ಕ ಸಹ ದನಿಗೂಡಿಸಿದರು. 
ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಸರ್ಕಾರದಿಂದ ಆದೇಶ ಬರುವ ಮುನ್ನವೇ ನಾವು ಸಮೀಕ್ಷೆ ಆರಂಭಿಸಿದ್ದೆವು. ಇದೀಗ ಬಹುತೇಕ ಮುಕ್ತಾಯ ಆಗಿದೆ. ಶೀಘ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 783 ಹೆಕೇrರ್‌ ಪ್ರದೇಶದಲ್ಲಿ ತೆಂಗು ಇದ್ದು ಈ ಪೈಕಿ 37000 ಗಿಡ ನಾಶವಾಗಿವೆ. ಅಡಕೆ 2000 ಹೆಕೇrರ್‌ ಬೆಳೆ ಸಂಪೂರ್ಣ ಒಣಗಿ ಹೋಗಿದೆ ಎಂದರು.
ಆಗ ಮಲ್ಲಿಕಾರ್ಜುನ್‌, ಕಂದಾಯ ಇಲಾಖೆ ಜೊತೆ ಸೇರಿಕೊಂಡು ಸರ್ವೇ ಮಾಡಿ ಎಂದು, ತೋಟಗಾರಿಕೆ ವಿಮೆ ಮಾಡಿಸಲು ದಿನಾಂಕ ವಿಸ್ತರಣೆ ಆಗಿದೆ. ಆದರೆ, ತೆಂಗು ಸೇರಿಲ್ಲ. ರೈತರಿಗೆ ಮಾಹಿತಿ ನೀಡಿ ಎಂದರು.

Advertisement

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ, ಟ್ಯಾಂಕರ್‌ ಮೂಲಕ ನೀರು ಪೂರೈಸುವವರಿಗೆ ಹಾಗೂ ವಿಫಲವಾದ ಬೋರ್‌ವೆಲ್‌ ಬಾಕಿ ನೀಡಿಲ್ಲ. ಚನ್ನಗಿರಿ ತಾಲ್ಲೂಕು ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರು. ಇದಕ್ಕೆ ದನಿಗೂಡಿಸಿದ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ, ನೀರಿನ ಸಮಸ್ಯೆ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿ ಎಂದರು.
ಆಗ, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ನೀರಿನ ಸಮಸ್ಯೆ ಎಲ್ಲೂ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಬಾಕಿ ಇರುವ ಅನುದಾನ ಕೊಡಿಸಲು ಕ್ರಮ ವಹಿಸಿದ್ದಾಗಿ  ತಿಳಿಸಿದರು.

ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಇಲಾಖೆ ಉಪ ನಿರ್ದೇಶಕ ಜಯಣ್ಣ ಮಾತನಾಡಿ, ಸದ್ಯ ಜಿಲ್ಲೆಯಲ್ಲಿ 6ರಿಂದ 8 ವಾರಕ್ಕೆ ಆಗುವಷ್ಟು ಮೇವಿದೆ. ಈ ಹಿಂದಿನ ಮುಂಗಾರಿನಲ್ಲಿದ್ದ ಮೇವನ್ನೇ ಈಗಲೂ
ಬಳಸಲಾಗುತ್ತಿದೆ. ಮುಂದೆ ಮೇವಿನ ಕೊರತೆ ಎದುರಾಗಲಿದೆ ಎಂದರು. ಸಚಿವ ಮಲ್ಲಿಕಾರ್ಜುನ್‌ ಇದಕ್ಕೆ ಪ್ರತಿಯಾಗಿ ಮಾತನಾಡಿ, ಹಿರಿಯೂರಿನಲ್ಲಿ ಕೆರೆಯ ಅಂಗಳದಲ್ಲಿ ಬೆಳೆದಂತೆ ಮೇವು ಬೆಳೆದು ಜನರಿಗೆ ಕೊಡಿ ಎಂದರು.

ಜಿಪಂ ಅಧ್ಯಕ್ಷ ಉಮಾ ಎಂ.ಪಿ. ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ, ನಟರಾಜ್‌. ವಾಗೀಶ್‌, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋದ
ಎಸ್‌. ವಂಟಿಗೋಡಿ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎರಡೂವರೆ ತಾಸು ವಿಳಂಬ….
ತ್ತೈಮಾಸಿಕ ಕೆಡಿಪಿ ಸಭೆಗೆ ಆಗಮಿಸಿದ್ದ ಶಾಸಕರಾದ ವಡ್ನಾಳ್‌ ರಾಜಣ್ಣ, ಶಿವಮೂರ್ತಿ ನಾಯ್ಕ, ಶಾಂತನಗೌಡ, ಅಧಿಕಾರಿಗಳು ಮೂರು ತಾಸುಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್‌ ಗಾಗಿ ಕಾದರು. ಮಧ್ಯಾಹ್ನ 12.15ಕ್ಕೆ ನಿಗದಿಯಾಗಿದ್ದ ಸಭೆ ಮಧ್ಯಾಹ್ನ 2.50ಕ್ಕೆ ಆರಂಭವಾಯಿತು.

ವಿಎಗಳ ಪ್ರತಿಭಟನೆ: ಬಿಪಿಎಲ್‌ ಕಾರ್ಡ್‌ ವಿತರಣೆಗೆ ಸಮಸ್ಯೆ
ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಶಾಸಕ ರಾಜಣ್ಣ ಬಿಪಿಎಲ್‌ ಕಾರ್ಡ್‌ ಮನೆ ಬಾಗಿಲಿಗೆ ಕೊಡಲಾಗುವುದು ಎಂಬುದಾಗಿ ಹೇಳಿ, ಈಗ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದಾಗ, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಆಹಾರ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್‌, ಜಿಲ್ಲೆಯಲ್ಲಿ ಒಟ್ಟು 46 ಸಾವಿರ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಬಂದಿವೆ. ಆದರೆ, ಗ್ರಾಮ ಲೆಕ್ಕಿಗರ ಪ್ರತಿಭಟನೆಯಿಂದ ಕಾರ್ಡ್‌ ವಿತರಣೆ ವಿಳಂಬ ಆಗುತ್ತಿದೆ. 6ರಂದು ಸಭೆ ಸೇರಿ ತೀರ್ಮಾನ ಕೈಗೊಳ್ಳುವ ಕುರಿತು ಹೇಳಿದ್ದಾರೆ ಎಂದರು. 

ಕೇಂದ್ರ ಅನುಮತಿ ನೀಡಲ್ಲ
ಜಿಲ್ಲೆಯಲ್ಲಿ ಸರ್ವ ಶಿಕ್ಷ ಅಭಿಯಾನದಿಂದ ಯಾವುದೇ ಅನುದಾನ ಬರುತ್ತಿಲ್ಲ. ಇದರಿಂದ ಹೊಸ ಶಾಲಾ ಕಟ್ಟಡ ಆಗುತ್ತಿಲ್ಲ ಎಂಬುದಾಗಿ ಚನ್ನಗಿರಿ ಶಾಸಕ ವಡ್ನಾಳ್‌ ರಾಜಣ್ಣ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಸಭೆ ಗಮನ ಸೆಳೆದರು. ಜತೆಗೆ ಮತ್ತೋರ್ವ ಶಾಸಕ ಶಿವಮೂರ್ತಿ ನಾಯ್ಕ, ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ ಕಟ್ಟಡ ಕಟ್ಟುತ್ತಿರುವಾಗ, ಶಾಲಾ ಕಟ್ಟಡ ಕಟ್ಟಲು ಯಾಕಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ರಮೇಶ್‌, ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದೆವು. ಆದರೆ, ರಾಜ್ಯ ಸರ್ಕಾರ ಇದಕ್ಕೆ ಕೇಂದ್ರ ಅನುಮತಿ ನೀಡುವುದಿಲ್ಲ ಎಂದು ಉತ್ತರ ಬಂದಿದೆ ಎಂದು ತಿಳಿಸಿದರು.

ತಾಂಡಾಗಳಿಗೆ ನ್ಯಾಯಬೆಲೆ ಅಂಗಡಿ ಕೊಡಿ
ಆಹಾರ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ, ನನ್ನ ಕ್ಷೇತ್ರದಲ್ಲಿನ 46 ಕಂದಾಯವಲ್ಲದ ಗ್ರಾಮಗಳಿಗೆ ನ್ಯಾಯಬೆಲೆ ಅಂಗಡಿ ತೆರೆಯಲು ಕೇಳಿಕೊಂಡಿದ್ದೆ. ಆದರೆ, ತೆರೆದಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಡಿಸಿ ರಮೇಶ್‌, ಸರ್ಕಾರ ವಿಧಿಸಿರುವ ಷರತ್ತುಗಳ ಪ್ರಕಾರ ಸಂಘ, ಸಂಸ್ಥೆಗಳಿಗೆ ಮಾತ್ರ ನ್ಯಾಯ ಬೆಲೆ ಅಂಗಡಿ ಲೈಸೆನ್ಸ್‌ ನೀಡಲು ತಿಳಿಸಿದ್ದಾರೆ. ಆದರೆ, ಯಾರೂ ಮುಂದೆ ಬಂದಿಲ್ಲ ಎಂದರು. ಆಗ ಶಾಸಕರು, ಏನಾದರೂ ಮಾಡಿ, ಅಂಗಡಿ ಕೊಡಿ ಎಂದರು. ಆಗ ಸಚಿವ ಮಲ್ಲಿಕಾರ್ಜುನ್‌, ಶಾಸಕರ ವಿದ್ಯಾಸಂಸ್ಥೆಯ ಹೆಸರಲ್ಲೇ ಕೊಡಿ ಎಂದು ತಮಾಷೆ ಮಾಡಿದರು.

ಸಭೆಯಲ್ಲಿ ಕೇಳಿ ಬಂದಿದ್ದು
ಜಿಲ್ಲೆಯ ಹರಿಹರ, ಜಗಳೂರು ಜಿಲ್ಲೆಯ ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಡೆಂಘಿ ಹಾವಳಿ ಇದೆ. ತಾಲ್ಲೂಕಿನಲ್ಲಿ ಡೆಂಘಿ ಹಾವಳಿ ಇದೆ. ಜಿಲ್ಲೆಯಲ್ಲಿ ಒಟ್ಟು 116 ಡೆಂಗಿ ಜಿಲ್ಲೆಯಲ್ಲಿ ಒಟ್ಟು 116 ಡೆಂಗಿ ಪ್ರಕರಣಗಳು ಕಂಡು ಬಂದಿವೆ. ಯಾವುದೇ ಪ್ರಕರಣಗಳು ಕಂಡು ಬಂದಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಡಿಎಚ್‌ಒ ಸಾವು ಸಂಭವಿಸಿಲ್ಲ ಎಂದು ಡಿಎಚ್‌ಒ
ತ್ರಿಪುರಾಂಭ ತಿಳಿಸಿದರು. ತ್ರಿಪುರಾಂಭ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಜಿಲ್ಲಾಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ವಿಭಾಗ ಆರಂಭಿಸಲು 25 ಕೋಟಿ ರೂ. ವಿಭಾಗ ಆರಂಭಿಸಲು 25 ಕೋಟಿ ರೂ. ಅನುದಾನ ಬಂದಿದೆ. ಶೀಘ್ರ ಕಾಮಗಾರಿ ಅನುದಾನ ಬಂದಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಸ್ಪತ್ರೆ ಆರಂಭಿಸಲಾಗುವುದು ಎಂದು ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ| ನೀಲಾಂಬಿಕೆ ಸಭೆಗೆ ಮಾಹಿತಿ ಅಧೀಕ್ಷಕಿ ಡಾ| ನೀಲಾಂಬಿಕೆ ಸಭೆಗೆ ಮಾಹಿತಿ ನೀಡಿದರು. ನೀಡಿದರು.

ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 5 ದಿನ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು, 2 ದಿನ ಮೊಟ್ಟೆ ಕೊಡಲು ಸರ್ಕಾರ ಹಾಲು, 2 ದಿನ ಮೊಟ್ಟೆ ಕೊಡಲು ಸರ್ಕಾರ ಸೂಚಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಸೂಚಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ
ವಿಜಯಕುಮಾರ್‌ ತಿಳಿಸಿದರು. ವಿಜಯಕುಮಾರ್‌ ತಿಳಿಸಿದರು.

ಸೇರ್ಪಡೆ ಮತ್ತು ಮಾರ್ಪಾಟು ಸೇರ್ಪಡೆ ಮತ್ತು ಮಾರ್ಪಾಟು ಯೋಜನೆಯಡಿ ಜಿಲ್ಲೆಯ ಶಾಲಾ ಕೊಠಡಿ ಯೋಜನೆಯಡಿ ಜಿಲ್ಲೆಯ ಶಾಲಾ ಕೊಠಡಿ ದುರಸ್ತಿ, ನಿರ್ಮಾಣಕ್ಕೆ ನೀಡಲಾದ 36 ದುರಸ್ತಿ, ನಿರ್ಮಾಣಕ್ಕೆ ನೀಡಲಾದ 36
ಲಕ್ಷ ರೂ. ಯಾವುದಕ್ಕೂ ಸಾಲಲ್ಲ, ಹೆಚ್ಚಿಗೆ ಲಕ್ಷ ರೂ. ಯಾವುದಕ್ಕೂ ಸಾಲಲ್ಲ, ಹೆಚ್ಚಿಗೆ ಮಾಡಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಮಾಡಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ವಾಗೀಶ್‌ ಸಚಿವರಿಗೆ ಮನವಿ ಮಾಡಿದರು. ವಾಗೀಶ್‌ ಸಚಿವರಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next