ನವದೆಹಲಿ: ದೇಶ ವಿರೋಧಿ ಚಟುವಟಿಕೆಗಳ ಆರಂಭಕ್ಕೆ ಜೈಲುಗಳು ಕೇಂದ್ರ ಬಿಂದುವಾಗುವುದು ಬೇಡ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
ಈ ಬಗ್ಗೆ ಆದೇಶ ರವಾನೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಆಗಾಗ ಜೈಲುಗಳಲ್ಲಿ ತಪಾಸಣೆ, ಶೋಧ ಕಾರ್ಯಾಚರಣೆ ನಡೆಸುವಂತೆಯೂ ಆದೇಶ ನೀಡಲಾಗಿದೆ. ಇದರ ಜತೆಗೆ ಕಾರಾಗೃಹಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆಯೂ ಆ ಆದೇಶದಲ್ಲಿ ಸೂಚಿಸಲಾಗಿದೆ.
ಜೈಲಿನಲ್ಲಿ ಶಿಕ್ಷೆ ಪಡೆಯುತ್ತಿರುವವರು ತಮ್ಮ ಅಪರಾಧಿಕ ಹಿನ್ನೆಲೆ ಮರೆತು, ಉತ್ತಮ ನಾಗರಿಕರಾಗಿ ಬಾಳುವೆ ನಡೆಸುವ ಬಗ್ಗೆ ಮಾನಸಿಕ ದೃಢತೆ ಹೆಚ್ಚಿಸುವ ಬಗ್ಗೆ ತರಬೇತಿ ನೀಡಬೇಕು. ಜೀವನದಲ್ಲಿ ಧನಾತ್ಮಕ ಧೋರಣೆ ಹೊಂದುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ತರಬೇತಿ ಪಡೆದವರಿಂದ ಜೈಲಿನಲ್ಲಿ ಇರುವರಿಗೆ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಗೃಹ ಸಚಿವಾಲಯ ಸೂಚಿಸಿದೆ.
ಇದನ್ನೂ ಓದಿ:ಬಿಟ್ ಕಾಯಿನ್: ತನಿಖೆ ಚುರುಕಾದ್ರೆ ಸಿಎಂ ಬದಲಾವಣೆ; ಪ್ರಿಯಾಂಕ್ ಖರ್ಗೆ
ಇದರ ಜತೆಗೆ ಜೈಲಿನ ವಿವಿಧ ಹಂತದ ಅಧಿಕಾರಿಗಳಿಗೂ ಅಪರಾಧಿಗಳ ಜತೆಗೆ ಹೇಗೆ ಇರಬೇಕು ಎಂಬ ಬಗ್ಗೆ ತರಬೇತಿಯನ್ನೂ ನೀಡುವ ಬಗ್ಗೆಯೂ ಸಲಹೆ ನೀಡಲಾಗಿದೆ.