Advertisement
2,300 ಮೀ. ಹಂತದ ತನಕ ಅವಿನಾಶ್ ಸಾಬಲೆ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಅನಂತರ ಅವರ ವೇಗ ಕಡಿಮೆಯಾಗುತ್ತ ಹೋಯಿತು. ಮುಖ್ಯವಾಗಿ ಕೊನೆಯ ಲ್ಯಾಪ್‌ನಲ್ಲಿ ಅವಿನಾಶ್ ಪ್ರಯತ್ನ ಏನೂ ಸಾಲಲಿಲ್ಲ. ತಮ್ಮ ರಾಷ್ಟ್ರೀಯ ದಾಖಲೆಗೂ (8:11.20) ಕಳಪೆ ಪ್ರದರ್ಶನ ನೀಡಿದರು. ಹೀಟ್ಸ್ ನಲ್ಲಿ ಮೊದಲ 5 ಸ್ಥಾನ ಪಡೆದವರಿಗಷ್ಟೇ ಫೈನಲ್ ಅರ್ಹತೆ ಲಭಿಸುತ್ತದೆ.
20 ಕಿ.ಮೀ. ರೇಸ್‌ವಾಕ್‌ನಲ್ಲೂ ಭಾರತಕ್ಕೆ ನಿರಾ ಸೆಯೇ ಗತಿಯಾಯಿತು. ವಿಕಾಸ್ ಸಿಂಗ್ 28ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು (1 ಗಂಟೆ, 21 ನಿಮಿಷ, 58 ಸೆಕೆಂಡ್ಸ್). ಪರಮ್‌ಜೀತ್ ಸಿಂಗ್ ಮತ್ತು ಆಕಾಶ್‌ದೀಪ್ ಸಿಂಗ್ ಕ್ರಮವಾಗಿ 35ನೇ ಹಾಗೂ 47ನೇ ಸ್ಥಾನಿಯಾದರು. ಇವರಲ್ಲಿ ಆಕಾಶ್‌ದೀಪ್ ನಿರ್ವಹಣೆ ಅತ್ಯಂತ ನಿರಾಶಾದಾಯಕವಾಗಿತ್ತು. ಕಾರಣ, ಇವರು ರಾಷ್ಟ್ರೀಯ ದಾಖಲೆ ಹೊಂದಿ ದ್ದರು. ಒಟ್ಟು 50 ಮಂದಿ ಸ್ಪರ್ಧಿಗಳು ರೇಸ್‌ವಾಕ್‌ನಲ್ಲಿ ಪಾಲ್ಗೊಂಡಿದ್ದರು. ಇಬ್ಬರು ರೇಸ್ ಪೂರ್ತಿಗೊಳಿಸಲಿಲ್ಲ.
Related Articles
ವನಿತಾ ಲಾಂಗ್‌ಜಂಪ್‌ನಲ್ಲಿ ಶೈಲಿ ಸಿಂಗ್ ಕೂಡ ನಿರಾಸೆ ಮೂಡಿಸಿದರು. “ಬಿ’ ವಿಭಾಗದ ಅರ್ಹತಾ ಸುತ್ತಿನಲ್ಲಿ ಅವರು 14ನೇ ಸ್ಥಾನಿಯಾದರು. ಒಟ್ಟು 18 ಮಂದಿ ಕಣದಲ್ಲಿದ್ದರು. 6.40 ಮೀಟರ್ ಶೈಲಿ ಅವರ ಗರಿಷ್ಠ ದೂರವಾಗಿತ್ತು. ಇದು ಅವರ 6.76 ಮೀಟರ್‌ಗಳ ವೈಯಕ್ತಿಕ ದಾಖಲೆಗಿಂತಲೂ ಕಡಿಮೆ ದೂರವಾಗಿತ್ತು.
Advertisement