Advertisement

INDvsSA; ಮೊದಲ ಪಂದ್ಯ ಸೋತ ಬಳಿಕ ವೇಗಿಯನ್ನು ಕರೆಸಿಕೊಂಡ ಟೀಂ ಇಂಡಿಯಾ

12:25 PM Dec 29, 2023 | Team Udayavani |

ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದೆ. ಸೆಂಚುರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ದ.ಆಫ್ರಿಕಾ ಬೌಲಿಂಗ್ ದಾಳಿಗೆ ನಲುಗಿದ ರೋಹಿತ್ ಪಡೆಯು ಇನ್ನಿಂಗ್ಸ್ ಮತ್ತು 32 ರನ್ ಅಂತರದ ಸೋಲು ಕಂಡಿದೆ.

Advertisement

ಭಾರತವು ಮೊದಲ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡವು ಬರೋಬ್ಬರಿ 408 ರನ್ ಪೇರಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 131 ರನ್ ಗಳಿಗೆ ಆಲೌಟಾಗಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಅವರು ಬೌಲರ್ ಗಳ ಪ್ರಯತ್ನದ ಕೊರತೆಯ ಬಗ್ಗೆ ಹೇಳಿದ್ದರು. ಜಸ್ಪ್ರೀತ್ ಬುಮ್ರಾಗೆ ಬೆಂಬಲ ನೀಡುವಲ್ಲಿ ವೇಗಿಗಳು ವಿಫಲರಾದರು ಎಂದಿದ್ದರು.

ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡವು ವೇಗಿ ಆವೇಶ್ ಖಾನ್ ಅವರನ್ನು ಕರೆಸಿಕೊಂಡಿದೆ. ಮೊಹಮ್ಮದ್ ಶಮಿ ಅವರ ಬದಲಿಯಾಗಿ ಆವೇಶ್ ಖಾನ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 3ರಂದು ಆರಂಭವಾಗಲಿದೆ. ಇದು ಕೇಪ್ ಟೌನ್ ನಲ್ಲಿ ನಡೆಯಲಿದೆ.

Advertisement

ಭಾರತ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉ.ನಾ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿ.ಕೀ), ಅಭಿಮನ್ಯು ಈಶ್ವರನ್, ಅವೇಶ್ ಖಾನ್

Advertisement

Udayavani is now on Telegram. Click here to join our channel and stay updated with the latest news.

Next