ಜೈಪುರ: ಅನ್ಯ ಧರ್ಮೀಯರ ನಂಬಿಕೆಗಳನ್ನು ಪ್ರಶ್ನಿಸಬಾರದು ಎಂಬ ಕಾನೂನೇ ತಪ್ಪು, ಅದು ಬ್ರಿಟಿಷರ ಕಾಲದಲ್ಲಿ ರಚನೆಯಾಗಿದೆ. ಅದನ್ನು ಮೊದಲು ರದ್ದು ಪಡಿಸಬೇಕೆಂದು ಕನ್ನಡದ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್. ಭೈರಪ್ಪ ಆಗ್ರಹಿಸಿದರು.
ಗುರುವಾರ ಇಲ್ಲಿ ಶುರುವಾದ ದೇಶದ ಅತ್ಯಂತ ಖ್ಯಾತ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಭೈರಪ್ಪ ಮಾತನಾಡಿದರು. ಹಲವು ವಿವಾದಾತ್ಮಕ ಸಂಗತಿಗಳನ್ನು ತಮ್ಮ ಮಾತಿನ ವೇಳೆ ಪ್ರಸ್ತಾಪಿಸಿದರು.
ಇನ್ನೊಬ್ಬರ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಬಾರದೆಂಬ ಬ್ರಿಟಿಷ್ ಕಾನೂನಿನಿಂದ ಸಲ್ಮಾನ್ ರಷಿªà ಬರೆದ ಸಟಾನಿಕ್ ವರ್ಸಸ್ (ಕುರಾನಿನ ಹಲವು ಆಚರಣೆಗಳನ್ನು ಪ್ರಶ್ನಿಸುವ ಪುಸ್ತಕ) ಎಂಬ ಪುಸ್ತಕ ನಿಷೇಧಕ್ಕೊಳಗಾಯಿತು. ಹಾಗೆಯೇ ಎ.ಕೆ.ರಾಮಾನುಜನ್ ಅವರ ಎಸ್ಸೇ ಆನ್ ಥ್ರಿà ಹಂಡ್ರೆಡ್ ರಾಮಾಯಣಾಸ್ ಅನ್ನು ದೆಹಲಿ ವಿಶ್ವವಿದ್ಯಾಲಯ ತನ್ನ ಇತಿಹಾಸ ಪಠ್ಯದಿಂದ ಕೈಬಿಟ್ಟಿತು. ಯಾವುದೇ ಧರ್ಮದ ಬಗ್ಗೆ ಜನರು ಬರೀ ಭಾವನಾತ್ಮಕವಾಗಿಯಲ್ಲದೇ ತರ್ಕಬದ್ಧವಾಗಿ ಮಾತನಾಡಿದರೆ ಅದಕ್ಕೆ ಅವಕಾಶ ನೀಡಬೇಕು. ಇದಕ್ಕೆ ಅವಕಾಶ ನೀಡದ ಬ್ರಿಟಿಷ್ ಕಾನೂನನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಸತಿ ಪದ್ಧತಿ ಇಸ್ಲಾಂ ದಾಳಿಯ ಫಲ: ಭಾರತದಲ್ಲಿ ಸತಿ ಪದ್ಧತಿ (ಪತಿಯ ಚಿತೆಗೆ ಬಿದ್ದು ಸಾಯುವುದು) ಚಾಲ್ತಿಗೆ ಬರಲು ಇಸ್ಲಾಂ ದಾಳಿಯೇ ಕಾರಣ. ದಾಳಿಕೋರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪತ್ನಿಯರು ಇಂತಹ ಕ್ರಮಗಳನ್ನು ಅನುಸರಿಸಿದರು. ಭಾರತದ ಸಂಸ್ಕೃತಿಯಲ್ಲಿ ಸತಿಗೆ ಸ್ಥಾನವಿಲ್ಲ. ಪುರಾಣದಲ್ಲೂ ದಾಕ್ಷಾಯಿಣಿ ತನ್ನ ಪತಿಯ ಚಿತೆಗೆ ಬಿದ್ದು ಸಾಯಲಿಲ್ಲ. ಬದಲಿಗೆ ದಕ್ಷ ನಡೆಸಿಕೊಂಡ ರೀತಿಯನ್ನು ಪ್ರತಿಭಟಿಸಿ ಬೆಂಕಿಗೆ ಬಿದ್ದು ತನ್ನ ಪ್ರಾಣ ಕಳೆದುಕೊಂಡಳು ಎಂದು ವಿಶ್ಲೇಷಿಸಿದರು. ಇದೇ ವೇಳೆ ಪುರುಷರ ಮನೋಭಾವದಲ್ಲೂ ಬದಲಾವಣೆಯಾಗಬೇಕಿದೆ ಎಂದು ಪ್ರತಿಪಾದಿಸಿದರು.
ಬಡತನದ ಆಧಾರಿತ ಮೀಸಲಾತಿ ಬೇಕು: ಜಾತಿ ಆಧಾರಿತ ಮೀಸಲಾತಿ ತಪ್ಪು. ಇದರಿಂದ ಪ್ರತಿ ವಿದ್ಯಾರ್ಥಿಗಳಲ್ಲೂ ಜಾತಿ ಪ್ರಜ್ಞೆ ಬೆಳೆಯುತ್ತದೆ. ಅದರ ಬದಲು ಬಡತನ ಆಧಾರಿತ ಮೀಸಲಾತಿ ನೀಡಬೇಕು ಎಂದರು.
“ಉತ್ತರಕಾಂಡ’ ಸೀತೆಯ ದೃಷ್ಟಿಯಿಂದ ರೂಪಿಸಿದ್ದು
ಕನ್ನಡದ ಮತ್ತೂಬ್ಬ ಸಾಹಿತಿ ವಿವೇಕ್ ಶಾನ್‌ಭಾಗ್‌ರೊಂದಿಗೆ ಮಾತುಕತೆ ನಡೆಸಿದ ವೇಳೆ ಭೈರಪ್ಪನವರು ತಮ್ಮ ಕೃತಿಗಳ ಕುರಿತೂ ಮಾತನಾಡಿದರು. ಪರ್ವವನ್ನು ಮಾನವೀಯ ರೀತಿನೀತಿಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ. 5 ಗಂಡಂದಿರನ್ನು ಕಟ್ಟಿಕೊಂಡ ದ್ರೌಪದಿ ಎಂತಹ ಭಾವನೆಗಳನ್ನು ಹೊಂದಿರಬಹುದು ಎನ್ನುವುದನ್ನು ಕಟ್ಟಿಕೊಡಲು ಯತ್ನಿಸಿದ್ದೇನೆ. ಗಾಂಧಾರಿ ಏಕೆ ಕಣ್ಣಿಗೆ ಪಟ್ಟಿಕೊಂಡಳು ಭಿನ್ನ ದೃಷ್ಟಿಯಿಂದ ನೋಡಿದ್ದೇನೆಂದರು. ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಉತ್ತರಕಾಂಡ ಬಗ್ಗೆ ಮಾತನಾಡಿದ ಅವರು, ಈ ಕಾದಂಬರಿಯನ್ನು ಸೀತೆಯ ದೃಷ್ಟಿಯಂದ ಕಟ್ಟಿ ನಿಲ್ಲಿಸಲಾಗಿದೆ ಎಂದರು.