Advertisement

ಆಟೋ ಚಾಲಕರು, ತರಕಾರಿ ಮಾರಾಟಗಾರರಿಗೆ ನಿವೇಶನ

12:35 PM Mar 03, 2017 | |

ಬೆಂಗಳೂರು: ಬಡ ಸಮುದಾಯದ ಆಟೋ ಚಾಲಕರು ಮತ್ತು ತರಕಾರಿ ಮಾರಾಟ ಮಾಡುವವರಿಗೆ ಮನೆ ಮತ್ತು ನಿವೇಶನಗಳನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.

Advertisement

ಬಾಪೂಜಿನಗರ ವಾರ್ಡ್‌ನ ನಾಯ್ಡು ರಂಗಮಂದಿರದ ಆವರಣದಲ್ಲಿ ಗುರುವಾರ “ಬೆಂಗಳೂರು ಒನ್‌’ ಕೇಂದ್ರ ಉದ್ಘಾಟಿಸಿ  ಮಾತನಾಡಿದ ಅವರು, ಆಟೋ ಚಾಲಕರು ಮತ್ತು ತರಕಾರಿ ಮಾರಾಟ ಮಾಡುವವರಿಗೆ ನಿವೇಶನ ಮತ್ತು ಮನೆಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ. ಕೊಳಗೇರಿಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು. 

ಬಾಪೂಜಿನಗರ ವಾರ್ಡ್‌ನಲ್ಲಿ ಒಳಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಡಾಂಬರೀಕರಣ ಆಗದೆ ಇರುವ ರಸ್ತೆಗಳಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿ ದರು. ಮೇಯರ್‌ ಜಿ.ಪದ್ಮಾವತಿ ಮಾತನಾಡಿ, ನೂತನ “ಬೆಂಗಳೂರು ಒನ್‌’ ಕೇಂದ್ರದಲ್ಲಿ ಕಂದಾಯ, ಸಕಾಲ, ಆಧಾರ್‌, ಟೆಲಿಪೋನ್‌, ವಿದ್ಯುತ್‌ ಬಿಲ್‌ ಪಾವತಿ ಸೇರಿ  112 ಸೇವೆಗಳು ದೊರೆಯಲಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next