Advertisement

ಆಟೋ ಚಾಲಕರ ಸೇವೆಗೆ ಬೆಲೆಕಟ್ಟಲಾಗದು

07:29 AM Feb 25, 2019 | |

ಕೆ.ಆರ್‌.ಪೇಟೆ: ಬಡವರ ರಥ ಎಂದೇ ಕರೆಯಲ್ಪಡುವ ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯ ಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆಗೆ ಬೆಲೆಕಟ್ಟಲಾಗದು ಎಂದು ಶಾಸಕ ನಾರಾಯಣಗೌಡ ಹೇಳಿದರು.

Advertisement

ಪಟ್ಟಣದ ರಾಮದಾಸ್‌ ಹೋಟೆಲ್‌ನ ಸುಲೋಚನಮ್ಮ ಪಾರ್ಟಿಹಾಲ್‌ನಲ್ಲಿ  ಕಾರ್ಮಿಕ ಇಲಾಖೆ, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಭಾರತೀಯ ರೆಡ್‌ ಸೊಸೈಟಿ ಸಂಯುಕ್ತಾಶ್ರದಲ್ಲಿ ಚಾಲಕರಿಗಾಗಿ ಆಯೋಜಿಸಿದ್ದ ಆರೋಗ್ಯರಕ್ಷಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆ ನೀಡುತ್ತಿರುವ ಚಾಲಕರು ಬಡವರ ಬಂಧುಗಳಾಗಿದ್ದಾರೆ. ಅಂತಹ ಸೇವೆಗೆ ಬೆಲೆಕಟ್ಟಲಾಗದು ಎಂದರು.

ಮಧ್ಯರಾತ್ರಿಯಲ್ಲಿ ದೂರದ ಊರುಗಳಿಂದ ಬರುವ ಗ್ರಾಮೀಣಭಾಗದ ಜನರನ್ನು ಸುರಕ್ಷಿತವಾಗಿ ಅವರ ಮನೆಯ ಮುಂಭಾಗಕ್ಕೆ  ತಲುಪಿಸುವ ಕಾಯಕ ಮಾಡುತ್ತಿದ್ದಾರೆ. ಅಂತಹ ಚಾಲಕರಿಗೆ ನಾನು ಕೈ ಮುಗಿದು ಧನ್ಯವಾದ ಹೇಳುತ್ತೇನೆ. ನಾನು ತಾಲೂಕಿನಲ್ಲಿ ಜನಸೇವೆ ಮಾಡಲು ಮುಂಬೈಯಿಂದ ಬಂದ ತಕ್ಷಣ ಚಾಲಕರಿಗೆ ಡಿ.ಎಲ್‌ ಮಾಡಿಸುವ ಕಾಯಕಕ್ಕೆ ಚಾಲನೆ ನೀಡಿದ್ದೆ.

ಮುಂದಿನ ದಿನಗಳಲ್ಲಿ ಚಾಲಕರ  ಯಾವುದೇ ಕೆಲಸವನ್ನು ಮಾಡಿಕೊಡಲು ಸಿದ್ಧನಿರುತ್ತೇನೆ, ಚಾಲಕರು ಯಾವುದೇ ಸಮಯದಲ್ಲಾದರೂ ನನ್ನ ಮನೆಗೆ ನೇರವಾಗಿ ಬಂದು ಸಮಸ್ಯೆ ಬಗೆಹರಿಸಿಕೊಳ್ಳ ಬಹುದು ಎಂದು ತಿಳಿಸಿದರು.

ಜೀವ ರಕ್ಷಿಸಿದರೆ ಬಹುಮಾನ: ಹಿರಿಯ ವೈದ್ಯ ಡಾ.ನಾರಾಯಣಸ್ವಾಮಿ ಮಾತನಾಡಿ, ರಸ್ತೆಯಲ್ಲಿ ಅಪಘಾತವಾದ ತಕ್ಷಣ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆನೀಡಿ ಆಸ್ಪತ್ರೆಗೆ ದಾಖಲು ಮಾಡಿಸಿದರೆ ಅಂತಹ ವ್ಯಕ್ತಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಒಂದು ಸಾವಿರ ರೂ. ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು.

Advertisement

ಅಪಘಾತದಲ್ಲಿ ಗಾಯಗೊಂಡ‌ವರನ್ನು ಆಸ್ಪತ್ರೆಗೆ ಸೇರಿಸಿದರು ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಬೇಕು ಎಂಬುದು ಕಡ್ಡಾಯವಲ್ಲ. ಆದ್ದರಿಂದ ಕಾನೂನಿಗೆ ಹೆದರಿ ಗಾಯಾಳುಗಳಿಗೆ ನೆರವು ನೀಡುವುದಕ್ಕೆ ಹಿಂಜರಿಯಬಾರದು ಎಂದರು.  ಸಮಯಕ್ಕೆ ಸರಿಯಾಗಿ ಊಟಮಾಡಲು ಚಾಲಕರಿಗೆ ಅವಕಾಶಗಳು ಸಿಗುವುದಿಲ್ಲವಾದರಿಂದ ಮನೆಯನ್ನು ಬಿಡುವ ಮುನ್ನವೇ ಉಪಹಾರ ಮುಗಿಸಿಕೊಂಡು ಕೆಲಸಕ್ಕೆ ಹಾಜರಾಗಬೇಕು.

ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯಬಾರದು ಇದರಿಂದಾಗಿಯೇ ಚಾಲಕರಿಗೆ ಸಮಸ್ಯೆಗಳು ಎದುರಾಗುತ್ತಿವೆ. ಹಗಲು ರಾತ್ರಿ ಸೇವೆ ಸಲ್ಲಿಸುವ ಚಾಲಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಅಪಘಾತವಾಗಾದ ತಕ್ಷಣ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಿದರು.

ತಾಪಂ ಉಪಾಧ್ಯಕ್ಷ ಜಾನಕಿರಾಮ್‌, ಜಿಪಂ ಮಾಜಿ ಉಪಾಧ್ಯಕ್ಷ ಟೈಗರ್‌ಪ್ರಭಾಕರ್‌, ಮುಖಂಡರಾದ ಕೆ.ಶ್ರೀನಿವಾಸ್‌, ಕಾರ್ಮಿಕ ನಿರೀಕ್ಷಕರಾದ ಹೇಮಚಂದ್ರ, ಎಂ.ಮಹೇಶ್‌ಗೌಡ, ತಾಲೂಕು ಆಟೋ ಚಾಲಕ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಎಚ್‌.ಬಿ.ಮಂಜುನಾಥ್‌,

ಅಧ್ಯಕ್ಷ ಕೆ.ಎನ್‌.ವಾಸುದೇವಾ, ಕಾರ್ಮಿಕ ಇಲಾಖೆಯ ಸಿಬ್ಬಂದಿ ಶಿವು, ಮಂಜು, ಹಿರಿಯ ಚಾಲಕರಾದ ಪ್ರಕಾಶ್‌, ಪಾಪಣ್ಣ, ಜಯರಾಮ್‌, ಲಿಂಗರಾಜ್‌, ಕೆ.ವಿ.ಸ್ವಾಮಿ, ಭಗವಾನ್‌ಮಂಜು, ಪುಟ್ಟಶೆಟ್ಟಿ ಇತರರು ಇದ್ದರು. ಉಚಿತವಾಗಿ ಎಲ್ಲ ಚಾಲಕರಿಗೂ ಪ್ರಥಮ ಚಿಕಿತ್ಸಾ ಕಿಟ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next