Advertisement
ವಂಶವಾಹಿ ಸಮಸ್ಯೆಗಳ ವಿಧಗಳು :
- ಒಂದು ವಂಶವಾಹಿಯಲ್ಲಿ ರೂಪಾಂತರದಿಂದ ಉಂಟಾಗುವ ಸಮಸ್ಯೆಗಳನ್ನು ಏಕವಂಶವಾಹೀಯ ಸಮಸ್ಯೆಗಳು ಅಥವಾ ಮೊನೊಜೆನೆಟಿಕ್ ಡಿಸಾರ್ಡರ್‌ಗಳು ಎನ್ನುತ್ತಾರೆ.
- ವಂಶವಾಹಿಗಳಲ್ಲಿ ಬಳುವಳಿಯಾಗಿ ಬಂದ ಸಣ್ಣ ಪ್ರಮಾಣದ, ಸಂಯೋಜಿತ ವ್ಯತ್ಯಯಗಳು ಬಹು ಅಂಶೀಯ ಬಳುವಳಿ ಸಮಸ್ಯೆಗಳು ಅಥವಾ ಮಲ್ಟಿಫ್ಯಾಕ್ಟೋರಿಯಲ್ ಇನ್‌ಹೆರಿಟೆನ್ಸ್ ಡಿಸಾರ್ಡರ್‌ಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಇವುಗಳ ಜತೆಗೆ ನೈಸರ್ಗಿಕ ಕಾರಣಗಳೂ ಇರುತ್ತವೆ.
- ವರ್ಣತಂತುಗಳು ಅಥವಾ ಕ್ರೊಮೊಸೋಮ್‌ಗಳಲ್ಲಿ ಇರುವ ವಂಶವಾಹಿಗಳ ಕೊರತೆ ಅಥವಾ ಹೆಚ್ಚಳದಿಂದ ಅಥವಾ ವರ್ಣತಂತುಗಳಲ್ಲಿ ಸಂರಚನಾತ್ಮಕ ಬದಲಾವಣೆಗಳಿಂದ ವರ್ಣತಂತು ಸಮಸ್ಯೆಗಳು ಅಥವಾ ಕ್ರೊಮೊಸೋಮ್ ಡಿಸಾರ್ಡರ್‌ಗಳು ಕಾಣಿಸಿಕೊಳ್ಳುತ್ತವೆ.
Related Articles
- 68ರಲ್ಲಿ ಒಂದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
- ಆಟಿಸಂಗೆ ಗುರಿಯಾಗುವವರಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ 5 ಪಟ್ಟು ಅಧಿಕ.
Advertisement
ಕಾರಣಗಳು :
ವಂಶವಾಹಿಗಳು ಮತ್ತು ಪಾರಿಸರಿಕ ಕಾರಣಗಳು ಸಂಯೋಜಿತವಾಗಿ ಮೆದುಳಿನ ಅವಧಿಪೂರ್ವ ಬೆಳವಣಿಗೆಯನ್ನು ಪ್ರಚೋದಿಸುವ ಮೂಲಕ ಸ್ವಲೀನತೆಗೆ ಸಂಭಾವ್ಯ ಕಾರಣಗಳು ಎನಿಸಿಕೊಳ್ಳುತ್ತವೆ.
ಕೆಲವು ಸಾಮಾನ್ಯ ಗುಣಲಕ್ಷಣಗಳೆಂದರೆ:
- ಸಾಮಾಜಿಕ ಸಂವಹನದಲ್ಲಿ ವೈಕಲ್ಯ
- ಹೆಸರು ಕರೆಯುವಾಗ ಪ್ರತಿಕ್ರಿಯಿಸಲು ವೈಫಲ್ಯ
- ಇತರರ ಜತೆಗೆ ದೃಷ್ಟಿ ಸಂಪರ್ಕ ಹೊಂದುವುದನ್ನು ತಪ್ಪಿಸಿಕೊಳ್ಳುವುದು
- ಆಲೋಚನೆ ಅಥವಾ ಭಾವನೆಗಳನ್ನು ಶಬ್ಧೆàತರ ಸಂವಹನದಲ್ಲಿ ವ್ಯಕ್ತಪಡಿಸಲು ಕಷ್ಟವಾಗುವುದು
- ತೂಗುವುದು, ತಿರುಗುವುದು, ಸುತ್ತುವುದು ಅಥವಾ ನೆಗೆಯುವಂತಹ ಕ್ರಿಯೆಗಳಲ್ಲಿ ಪದೇಪದೆ ಸತತವಾಗಿ ತೊಡಗಿಕೊಳ್ಳುವುದು
- ಬೆರಳು ಕಚ್ಚುವುದು ಅಥವಾ ತಲೆಯನ್ನು ಜಜ್ಜಿಕೊಳ್ಳುವಂತಹ ಸ್ವಯಂ ಹಾನಿಕಾರಕ ವರ್ತನೆಗಳು
- ಮೌಖೀಕ ಐಕ್ಯು ಪರೀಕ್ಷೆಯಲ್ಲಿ ವ್ಯಾಖ್ಯಾನಿಸಲಾದಂತೆ ಬುದ್ಧಿಮಾಂದ್ಯ
- ತೀವ್ರ ತರಹದ ಪ್ರಕರಣಗಳಲ್ಲಿ ಮೂಛೆì
- ತಲೆಯ ಗಾತ್ರ ಸಣ್ಣದಾಗಿರುವುದು (ಮೈಕ್ರೊಸೆಫಾಲಿ), ತಮ್ಮ ಹೆತ್ತವರ ದೈಹಿಕ ಗುಣಲಕ್ಷಣಗಳನ್ನು ಹೋಲದ ವೈಕಲ್ಯ (ಕೆಲವೊಮ್ಮೆ ಡಿಸ್ಮಾರ್ಫಿಕ್ ಫೀಚರ್ ಎನ್ನುತ್ತಾರೆ) ಅಥವಾ ಮೆದುಳಿನ ಸಂರಚನಾತ್ಮಕ ವಿರೂಪಗಳ ಸಹಿತ ದೈಹಿಕ ಬೆಳವಣಿಗೆಯ ಆರಂಭ ಕಾಲದಲ್ಲಿ ತಲೆದೋರುವ ದೈಹಿಕ ವಿರೂಪಗಳು
- ಬೆಳವಣಿಗೆಗೆ ಸಂಬಂಧಿಸಿದ ವಿಶ್ಲೇಷಣೆ
- 1 ವರ್ಷ ವಯಸ್ಸಿನೊಳಗೆ ತೊದಲು ಮಾತು ಅಥವಾ ಬೆರಳು ತೋರಿಸುವುದು ಇಲ್ಲದಿರುವುದು
- 16 ತಿಂಗಳೊಳಗೆ ಒಂದು ಪದ ಆಡುವುದು ಅಥವಾ 2 ವರ್ಷದ ಒಳಗೆ 2 ಪದಗಳನ್ನು ಆಡದಿರುವುದು
- ಹೆಸರು ಕರೆದಾಗ ಪ್ರತಿಕ್ರಿಯಿಸದಿರುವುದು
- ಭಾಷೆ ಮತ್ತು ಸಾಮಾಜಿಕ ಕೌಶಲ ನಷ್ಟ
- ಕಡಿಮೆ ಪ್ರಮಾಣದ ದೃಷ್ಟಿ ಸಂಪರ್ಕ
- ಆಟಿಕೆಗಳು ಅಥವಾ ವಸ್ತುಗಳನ್ನು ಅತಿಯಾಗಿ/ ಕ್ರಮವಾಗಿ ಜೋಡಿಸಿಕೊಳ್ಳುವುದು
- ನಗು ಇಲ್ಲದಿರುವುದು ಅಥವಾ ಸಾಮಾಜಿಕ ಪ್ರತಿಸ್ಪಂದನೆಯ ಕೊರತೆ
- ಸಮಾನ ವಯಸ್ಕರ ಜತೆಗೆ ಗೆಳೆತನ ಬೆಳೆಸಿಕೊಳ್ಳುವ ಸಾಮರ್ಥ್ಯದ ಕೊರತೆ
- ಇತರರ ಜತೆಗೆ ಸಂಭಾಷಣೆ ಆರಂಭಿಸುವ ಅಥವಾ ಮುಂದುವರಿಸುವ ಸಾಮರ್ಥ್ಯದ ಕೊರತೆ
- ಕಲ್ಪನಾತ್ಮಕ ಮತ್ತು ಸಾಮಾಜಿಕ ವರ್ತನೆಯ ಕೊರತೆ ಅಥವಾ ವೈಕಲ್ಯ
- ಭಾಷೆಯ ಪುನರಾವರ್ತನಾತ್ಮಕ, ಏಕತಾನತೆಯ ಅಥವಾ ಅಸಹಜ ಬಳಕೆ
- ತೀವ್ರತೆ ಮತ್ತು ಗಮನದಲ್ಲಿ ಅಸಹಜವಾಗಿ ರುವ, ಸೀಮಿತ ಜಾಯಮಾನದ ಆಸಕ್ತಿಗಳು
- ಕೆಲವು ವಸ್ತುಗಳು ಅಥವಾ ವಿಷಯಗಳ ಬಗ್ಗೆ ಪೂರ್ವಗ್ರಹ
- ಕೆಲವು ದೈನಿಕ ಕಾರ್ಯಗಳು ಅಥವಾ ರೂಢಿಗಳ ಬಗ್ಗೆ ಸಡಿಲವಾಗದ ವ್ಯಾಮೋಹ
- ಒಂದು ಮಗುವಿನ ಬೆಳವಣಿಗೆ ಮತ್ತು ವರ್ತನೆಗಳ ಬಗ್ಗೆ ಮಾಹಿತಿ ಕಲೆಹಾಕುವುದಕ್ಕಾಗಿ ಪ್ರಶ್ನಾವಳಿ ಅಥವಾ ಇತರ ಪರೀಕ್ಷಕ ಮಾರ್ಗೋಪಾಯಗಳು
- ನರಶಾಸ್ತ್ರೀಯ ವಿಶ್ಲೇಷಣೆ ಮತ್ತು ಆಳವಾದ ಗ್ರಹಣಾತ್ಮಕ ಮತ್ತು ಭಾಷಿಕ ತಪಾಸಣೆ
- ವಂಶವಾಹಿ ವೈದ್ಯಕೀಯ ವಿಶ್ಲೇಷಣೆಗಳು
- ಸ್ವಲೀನತೆ ಗುಣವಾಗುವುದಿಲ್ಲ. ನಿರ್ದಿಷ್ಟ ಲಕ್ಷಣಗಳನ್ನು ಆಧರಿಸಿ, ಅವುಗಳನ್ನು ಉಪ ಶಮನಗೊಳಿಸುವ ಉದ್ದೇಶದಿಂದ ಚಿಕಿತ್ಸೆಗಳು ಮತ್ತು ವರ್ತನಾತ್ಮಕ ಚಿಕಿತ್ಸೆಗಳನ್ನು ವಿನ್ಯಾಸ ಮಾಡಲಾಗುತ್ತದೆ. ಇದರಿಂದ ಗಮನಾರ್ಹ ಬದಲಾವಣೆ ಉಂಟಾಗುವುದಕ್ಕೆ ಸಾಧ್ಯವಿದೆ.
- ಮಾದರಿ ಚಿಕಿತ್ಸಾ ಯೋಜನೆಯು ಚಿಕಿತ್ಸೆಗಳು ಮತ್ತು ಆಯಾ ಮಗುವಿನ ವ್ಯಕ್ತಿಗತ ಅಗತ್ಯಗಳನ್ನು ಆಧರಿಸಿ ಸಂಯೋಜನೆಗೊಂಡಿರುತ್ತದೆ.
- ಅನ್ವಯಿಕ ವರ್ತನಾತ್ಮಕ ವಿಶ್ಲೇಷಣೆಯಂತಹ ಅತ್ಯುನ್ನತ ವಿನ್ಯಾಸಾತ್ಮಕ ಮತ್ತು ತೀವ್ರವಾದ ಕೌಶಲ ಆಧರಿತ ತರಬೇತಿ ತರಗತಿಗಳು ಮಕ್ಕಳು ಸಾಮಾಜಿಕ ಮತ್ತು ಭಾಷಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೆ ಪೂರಕವಾಗುವಂತೆ ರೂಪಿಸಲ್ಪಟ್ಟಿರುತ್ತವೆ.
- ರೋಗಿ ಮಗು ಮತ್ತು ಹೆತ್ತವರು ಹಾಗೂ ಸಹೋದರ ಸಹೋದರಿಯರಿಗೆ ಆಪ್ತ ಸಮಾಲೋಚನೆ ಒದಗಿಸುವುದರಿಂದ ಸ್ವಲೀನತೆಯ ಸಮಸ್ಯೆ ಹೊಂದಿರುವ ಮಗುವಿನ ಜತೆಗೆ ಬದುಕುವ ನಿರ್ದಿಷ್ಟ ಸವಾಲುಗಳನ್ನು ಎದುರಿಸಲು ಸಹಾಯವಾಗುತ್ತದೆ.
- ಗರ್ಭ ಧಾರಣೆಯ ಸಂದರ್ಭದಲ್ಲಿ ಹೆತ್ತವರ (ಇಬ್ಬರದೂ) ವಯಸ್ಸು ಹೆಚ್ಚಾಗಿರುವುದು.
- ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯ ಅನಾರೋಗ್ಯಗಳು
- ಪ್ರಸವಕಾಲದಲ್ಲಿ ಕಷ್ಟವಾಗುವುದು, ವಿಶೇಷವಾಗಿ ಮಗುವಿನ ಮೆದುಳಿಗೆ ಆಮ್ಲಜನಕ ಸರಬರಾಜು ಕೊರತೆಗೆ ಕಾರಣವಾಗುವಂಥವು.
- ಆತಂಕ, ಖನ್ನತೆ ಅಥವಾ ಒಬ್‌ಸೆಸಿವ್ ಕಂಪಲ್ಶನ್ ಡಿಸಾರ್ಡರ್‌ನಂತಹ ನಿರ್ದಿಷ್ಟ ಸ್ವಲೀನತೆ ಸಂಬಂಧಿ ತೊಂದರೆಗಳಿಗೆ ಔಷಧಗಳು.
- ಇತರರ ಜತೆಗೆ ಧನಾತ್ಮಕ, ಅರ್ಥವತ್ತಾದ ಸಂಬಂಧವನ್ನು ರೂಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿ.
- ಪ್ರತೀ ದಿನ ಸಂರಚನಾತ್ಮಕ ವ್ಯವಸ್ಥೆಯ ಮೂಲಕ ಸಾಮಾಜಿಕ ಮತ್ತು ಸಂವಹನ ಕೌಶಲಗಳನ್ನು ಬೆಳೆಸುವುದು.
- ವರ್ತನಾತ್ಮಕ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಧಾನಗಳನ್ನು ಸಂಯೋಜಿಸುವುದು.
- ಚಿಕಿತ್ಸೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಅವುಗಳನ್ನು ಜಾರಿಗೊಳಿಸುವಲ್ಲಿ ಹೆತ್ತವರು ನಿರ್ಣಯಾತ್ಮಕ ನಿಲುವು ತೆಗೆದುಕೊಳ್ಳುತ್ತಾರೆ.
- ಕುಟುಂಬ ಸದಸ್ಯರಿಗೆ ಮಾರ್ಗದರ್ಶನ, ತರಬೇತಿ, ಮಾಹಿತಿ ಮತ್ತು ಬೆಂಬಲವನ್ನು ಒದಗಿಸುವುದು.
- ನಿರ್ದಿಷ್ಟ ಸಮಸ್ಯೆಗಳನ್ನು ಗುರಿ ಮಾಡಿದ ನಿರ್ದಿಷ್ಟ ವಿಧಾನಗಳು
- ಮಗುವಿನ ಸ್ವಲೀನತೆಯ ವರ್ತನೆ
- ದೈಹಿಕವಾದ ಹೊರೆ ಮತ್ತು ಭಾವನಾತ್ಮಕ ಹೊರೆ
- ಭವಿಷ್ಯದ ಆರೈಕೆಯ ಬಗ್ಗೆ ಚಿಂತೆ
- ಸಮಾಜದಿಂದ ಪ್ರತ್ಯೇಕಗೊಂಡ ಭಾವನೆ
- ದುಃಖ
- ಆರ್ಥಿಕ ಹೊರೆ
- ಸ್ವಂತಕ್ಕೆ ಮತ್ತು ಕುಟುಂಬದ ಇತರರ ಸದಸ್ಯರಿಗೆ ಸಮಯದ ಕೊರತೆ
- ಸಮಾನ ವಯಸ್ಕರ ನಡುವೆ ಮುಜುಗರ
- ಸ್ವಲೀನತೆಯ ಸಮಸ್ಯೆ ಹೊಂದಿರುವ ತನ್ನ ಸಹೋದರ/ ಸಹೋದರಿಗೆ ಹೆತ್ತವರು ನೀಡುವ ಸಮಯ, ಆರೈಕೆ, ಗಮನದ ಬಗ್ಗೆ ಅಸೂಯೆ
- ಸಹೋದರ/ಸಹೋದರಿಯಿಂದ ಪ್ರತಿಸ್ಪಂದನೆ ಪಡೆಯಲು ಸಾಧ್ಯವಾಗದ ಬಗ್ಗೆ ಹತಾಶೆ
- ಆಕ್ರಮಣಕಾರಿ ವರ್ತನೆಗೆ ಗುರಿ
- ಸಹೋದರ/ ಸಹೋದರಿಯ ಕೊರತೆಗಳನ್ನು ತುಂಬುವ ಪ್ರಯತ್ನ
- ಹೆತ್ತವರ ಒತ್ತಡ ಮತ್ತು ದುಃಖದ ಬಗ್ಗೆ ಕಳವಳ
- ಭವಿಷ್ಯದ ಆರೈಕೆಯಲ್ಲಿ ತಮ್ಮ ಪಾತ್ರದ ಬಗ್ಗೆ ಕಳವಳ
- ಮಗುವಿನ ವೈಯಕ್ತಿಕ ಸ್ಥಿತಿಗತಿ ಮತ್ತು ಬೇಡಿಕೆಗಳ ಬಗ್ಗೆ ಅರಿತುಕೊಂಡಿರಿ
- ವಾಸ್ತವಿಕ ಗುರಿಗಳು ಮತ್ತು ಸಮರ್ಪಕವಾದ ಹೊಣೆಗಾರಿಕೆಗಳನ್ನು ಇರಿಸಿಕೊಳ್ಳಿ
- ಧನಾತ್ಮಕ ಚಿಂತನೆ ಮತ್ತು ಸ್ವಗತ
- ದೊಡ್ಡ ಹೊಣೆಗಳನ್ನು ಸಣ್ಣ ಸಣ್ಣವಾಗಿ ವಿಭಾಗಿಸಿಕೊಳ್ಳಿ
- ಏಕಾಂಗಿಯಾಗಿ, ಪ್ರತ್ಯೇಕವಾಗಿ ಇರುವ ಬದಲು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಿ
- ನಿಮ್ಮನ್ನು ಹುರಿದುಂಬಿಸುವ, ಒತ್ತಡ ಕಡಿಮೆ ಮಾಡುವ ವ್ಯಾಯಾಮ, ಸಿನೆಮಾ ವೀಕ್ಷಣೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ
- ವಿಶ್ರಾಮದಾಯಕ ಮತ್ತು ಉಸಿರಾಟ ಕಾರ್ಯತಂತ್ರಗಳು
- ನಿಮ್ಮ ಮನೋಭಾವ ಕಾಲಕ್ರಮೇಣ ಸರಿಹೋಗುವುದನ್ನು ನಿರೀಕ್ಷಿಸಿ
- ಒತ್ತಡ ಕಡಿಮೆಯಾಗುವ ತನಕ ಪ್ರಮುಖ ನಿರ್ಧಾರಗಳನ್ನು ಮುಂದೂಡಿ
- ಕೌಟುಂಬಿಕ ಸಂಪ್ರದಾಯಗಳನ್ನು ಪಾಲಿಸಿ
- ನಿಮ್ಮ ಸಂಗಾತಿ, ಕುಟುಂಬ ಮತ್ತು ಗೆಳೆಯ-ಗೆಳತಿಯರಿಂದ ಸಹಾಯವನ್ನು ಸ್ವೀಕರಿಸಿ.
- ಆಕೆ/ ಆತ ಮಗು ಎಂಬುದನ್ನು ನೆನಪಿಡಿ
- ಆತ/ಆಕೆಯ ಇಂದ್ರಿಯಗಳು ಸಹಜವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅರಿತುಕೊಳ್ಳಿ
- ನಾನು ಮಾಡುವುದಿಲ್ಲ’ ಮತ್ತು “ನನ್ನಿಂದ ಆಗುವುದಿಲ್ಲ’ ಎಂಬುದರ ನಡುವೆ ವ್ಯತ್ಯಾಸ ಅರಿತುಕೊಳ್ಳಿ
- ಭಾಷೆಯನ್ನು ಅಕ್ಷರಶಃ ವ್ಯಾಖ್ಯಾನಿಸಿ
- ಆತ/ ಆಕೆ ಸಂವಹನ ನಡೆಸುವ ಎಲ್ಲ ವಿಧಾನಗಳನ್ನು ಆಲಿಸಿ/ ಅನುಭವಿಸಿ
- ಆತ/ ಆಕೆಗೆ ದೃಶ್ಯ ಸಂಬಂಧಿ ಸಾಮರ್ಥ್ಯ ಇದೆ ಎಂಬುದನ್ನು ತಿಳಿಯಿರಿ
- ಆತ/ಆಕೆಗೆ ಏನು ಸಾಧ್ಯವಿಲ್ಲ ಎಂಬುದಕ್ಕಿಂತ ಆತ/ ಆಕೆಗೆ ಯಾವುದು ಸಾಧ್ಯ ಎಂಬುದರ ಮೇಲೆ ಹೆಚ್ಚು ಗಮನ ಕೊಡಿ
- ಸಾಮಾಜಿಕ ಸಂವಹನ, ಚಟುವಟಿಕೆಗಳಲ್ಲಿ ಸಹಾಯ ಮಾಡಿ
- ಸ್ವಲೀನತೆಯ ಲಕ್ಷಣಗಳು ಯಾವುದರಿಂದ ತಗ್ಗುತ್ತವೆ ಎಂಬುದನ್ನು ಗುರುತಿಸಿಕೊಳ್ಳಿ
- ಯಾವ ನಿರ್ಬಂಧ/ ಶರತ್ತುಗಳೂ ಇಲ್ಲದೆ ಮಗುವನ್ನು ಪ್ರೀತಿಸಿ