Advertisement

ಅಯೋಧ್ಯೆ ವರ್ತಕರಿಗೆ ಪ್ರಾಧಿಕಾರ ಸಿಹಿ:ಅಂಗಡಿ ಬೆಲೆ ಶೇ.30 ಇಳಿಕೆ

01:45 AM Jun 22, 2024 | Team Udayavani |

ಲಕ್ನೋ: ಅಯೋಧ್ಯೆ ರಾಮಮಂದಿರ ನಿರ್ಮಾಣದ ವೇಳೆ ಸ್ಥಳಾಂತರಗೊಂಡಿದ್ದ ಅಂಗಡಿಗಳ ಮಾಲಕರಿಗೆ ಇದೀಗ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಸಿಹಿ ಸುದ್ದಿ ನೀಡಿದೆ. ವಿಸ್ತರಿತ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ 500 ಮಳಿಗೆಗಳನ್ನು ಅದೇ ಮಾಲಕರಿಗೆ ಹಂಚಿಕೆ ಮಾಡಲಾಗಿದ್ದು, ತಲಾ 14-15 ಲಕ್ಷ ರೂ.ಗಳ ಮಳಿಗೆಗಳ ಬೆಲೆಯನ್ನು ಶೇ.30ರಷ್ಟು ಕಡಿತಗೊಳಿಸು ವುದಾಗಿ ಘೋಷಿಸಿದೆ. ಅಂಗಡಿ ಪಡೆಯುವವರು ಉಳಿದ ಹಣವನ್ನು ಬಡ್ಡಿರಹಿತವಾಗಿ 20 ವರ್ಷ ಕಂತು ಗಳಲ್ಲಿ ಪಾವತಿಸಲೂ ಅವಕಾಶ ನೀಡಲಾಗಿದೆ. ಲೋಕ ಸಭೆ ಚುನಾವಣೆಯಲ್ಲಿ ಅಯೋಧ್ಯೆ ಇರುವ ಫೈಜಾ ಬಾದ್‌ ಕ್ಷೇತ್ರದಲ್ಲೇ ಬಿಜೆಪಿ ಸೋತಿತ್ತು. ಮಂದಿರ ನಿರ್ಮಾಣ ವೇಳೆ ಜಾಗ ಕಳಕೊಂಡವರಿಗೆ ಸೂಕ್ತ ಪರಿಹಾರ ನೀಡದೇ ಇದ್ದಿದ್ದೂ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next