Advertisement

Thirthahalli: ಮೇಲಿನಕುರುವಳ್ಳಿ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿ ದರ್ಪ !

04:09 PM Sep 22, 2024 | Shreeram Nayak |

ತೀರ್ಥಹಳ್ಳಿ : ತಾಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಮೇಲಿನಕುರುವಳ್ಳಿಯಲ್ಲಿರುವ ಹರಿಜನ ಗಿರಿಜನ ಕಲ್ಲುಕುಟಿಕರ ಸಂಘದ ಕಟ್ಟಡದಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ನೀಡುವ ಅಕ್ಕಿಯನ್ನು ಸಾರ್ವಜನಿಕರೇ ತುಂಬಿಸಿಕೊಳ್ಳಬೇಕಂತೆ ಕೇಳಿದರೆ ದರ್ಪದ ಮಾತುಗಳನ್ನು ಅಲ್ಲಿನ ಸಿಬ್ಬಂದಿಗಳು ಆಡುತ್ತಾರೆ.

Advertisement

ಹೌದು ಸರ್ಕಾರ ನೀಡುವ ಅಕ್ಕಿಯನ್ನು ಸಾರ್ವಜನಿಕರೇ ಹಾಕಿಕೊಳ್ಳಬೇಕಂತೆ, ಇದನ್ನು ಪ್ರೆಶ್ನೆ ಮಾಡಿದಕ್ಕೆ ಅಕ್ಕಿ ಸರಿ ಇಲ್ಲ ಎಂದು ಹೇಳುತ್ತೀರಾ? ನಿಮಗೆ ಯಾವ ಅಕ್ಕಿ ಬೇಕೋ ಅದನ್ನು ಹಾಕಿಕೊಳ್ಳಿ ನಾನು ತೂಕ ಮಾಡಿ ಕೊಡುತ್ತೇನೆ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಅತ್ಯಂತ ದರ್ಪದಿಂದ ಮಾತನಾಡುತ್ತಾರೆ.

ಅಕ್ಕಿಯನ್ನು ಚೀಲದಿಂದ ನೆಲಕ್ಕೆ ಸುರಿದು ಹಾಕಿದ್ದು ಅದರಲ್ಲಿ ಇಲಿ ಪಿಕ್ಕಿ ಸೇರಿ ಇತರ ಕಸ ಇದ್ದು ಅದನ್ನು ನೋಡಿದವರು ಬೇರೆ ಅಕ್ಕಿ ಕೊಡಿ ಎನ್ನುವುದು ಸಹಜ. ಆದರೆ ಅಲ್ಲಿನ ಸಿಬ್ಬಂದಿಯೊಬ್ಬರು ನಿಮಗೆ ಬೇಕಾದ ಅಕ್ಕಿ ನೀವೇ ಹಾಕಿಕೊಳ್ಳಿ ಎಂದು ನ್ಯಾಯಬೆಲೆ ಅಂಗಡಿಗೆ ಬರುವ ಪಡಿತರ ಪಲನುಭವಿಗಳಿಗೆ ಸಾರ್ವಜನಿಕರಿಗೆ ದರ್ಪದಿಂದ ಹೇಳುತ್ತಾರೆ ಎಂದು ಅನೇಕ ಪಲಾನುಭವಿಗಳು ದೂರಿದ್ದಾರೆ

ಸಿಬ್ಬಂದಿಗಳ ಕೊರತೆ ಇದ್ದರೆ ಮತ್ತೋರ್ವ ಪುರುಷ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಅದನ್ನು ಬಿಟ್ಟು ನ್ಯಾಯ ಬೆಲೆ ಅಂಗಡಿಗೆ ಬಂದಂತಹ ಪಡಿತರ ಫಲಾನುಭವಿಗಳಿಗೆ ದರ್ಪದಿಂದ ಮಾತನಾಡುವುದು ಪ್ರಶ್ನೆ ಮಾಡಿದರೆ ಅಕ್ಕಿ ಸರಿ ಇಲ್ಲ ಎನ್ನುತ್ತಾರೆ ಎಂದು ಸಾರ್ವಜನಿಕರನ್ನೇ ದೂರುವುದು ನ್ಯಾಯವೇ? ಈ ಹಿಂದೆಯೂ ಕೂಡ ಇದೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿಗಳು ದರ್ಪದ ಮಾತುಗಳನ್ನಾಡಿದ ದೂರುಗಳು ಕೇಳಿ ಬಂದಿತ್ತು.ಎಂದು ಸಾರ್ವಜನಿಕವಾಗಿ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಅನೇಕ ಸಾರ್ವಜನಿಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next