Advertisement

Recruitment Of Posts: ನಾಳೆ ಗ್ರಾಮಾ ಆಡಳಿತ ಅಧಿಕಾರಿ ನೇಮಕಕ್ಕೆ ಕನ್ನಡ ಕಡ್ಡಾಯ ಪರೀಕ್ಷೆ

12:10 AM Sep 28, 2024 | Team Udayavani |

ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿ (1 ಸಾವಿರ ಹುದ್ದೆ) ಹಾಗೂ ಜಿಟಿಟಿಸಿ (98 ಹುದ್ದೆ)ಯ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆ. 29ರಂದು ಕನ್ನಡ ಕಡ್ಡಾಯ ಪರೀಕ್ಷೆ ನಡೆಸುತ್ತಿದ್ದು ಬಿಗಿ ಕ್ರಮಗಳನ್ನು ಕೈಗೊಂಡಿದೆ.

Advertisement

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ 5.75 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ರಾಜ್ಯದ 1,410 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ತಿಳಿಸಿದ್ದಾರೆ. ಶುಕ್ರವಾರ ಸಂಜೆವರೆಗೆ 4.8 ಲಕ್ಷ ಮಂದಿ ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಂಡಿದ್ದಾರೆ. ರವಿವಾರ ನಡೆಯುವ 150 ಅಂಕಗಳ ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅ. 27ರಂದು ನಡೆಯುವ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಈ ಪರೀಕ್ಷೆಗೆ ಗೈರಾದವರು ಕೂಡ ಅರ್ಹರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

4 ಸಾವಿರ ಮಂದಿಗೆ ಪರೀಕ್ಷೆಗೆ ವ್ಯವಸ್ಥೆ
ಜಿಟಿಟಿಸಿಯ ವಿವಿಧ ಹುದ್ದೆಗಳ ಕನ್ನಡ ಕಡ್ಡಾಯ ಪರೀಕ್ಷೆಗೆ 4 ಸಾವಿರ ಮಂದಿ ಇದ್ದು ಅಷ್ಟೂ ಮಂದಿಗೆ ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಆ ದಿನ ಬೆಂಗಳೂರಿನ 115 ಕೇಂದ್ರಗಳಲ್ಲಿ 56 ಸಾವಿರ ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದರು. ವಯೋಮಿತಿ ಸಡಿಲಿಕೆಯ ಅನುಕೂಲ ಪಡೆ
ಯುವವರ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ. 26ರಂದು ಕನ್ನಡ ಕಡ್ಡಾಯ ಪರೀಕ್ಷೆ ಇರುತ್ತದೆ. ಅದರ ಅನಂತರ ಅವರು ಅ. 27ರಂದು ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಿಇಟಿ, ನೀಟ್‌: 153 ಎಂಬಿಬಿಎಸ್‌ ಸೇರಿ ಸಾವಿರ ಸೀಟು ಹಿಂದಿರುಗಿಸಿದ ಅಭ್ಯರ್ಥಿಗಳು
ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿ ಇತರ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ  ಪ್ರಾಧಿಕಾರ ನಡೆಸಿದ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದು ಅನಂತರ 1,006 ಮಂದಿ ಅವುಗಳನ್ನು ರದ್ದುಪಡಿಸಿ ಕೊಂಡಿದ್ದಾರೆ. ಇಷ್ಟೂ ಸೀಟುಗಳನ್ನು 3ನೇ ಅಥವಾ 2ನೇ ವಿಸ್ತರಿತ ಸುತ್ತಿನಲ್ಲಿ ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರದ ಕಾರನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.

ಸರಕಾರಿ ಕಾಲೇಜಿನ 7 ಸೀಟು ಸೇರಿ ಒಟ್ಟು 153 ಅಭ್ಯರ್ಥಿಗಳು ತಮ್ಮ ವೈದ್ಯಕೀಯ ಸೀಟುಗಳನ್ನು ರದ್ದುಪಡಿಸಿಕೊಂಡಿದ್ದಾರೆ. ಇದರಲ್ಲಿ ಖಾಸಗಿ ಕೋಟಾದಲ್ಲಿ 112, ಮ್ಯಾನೇಜ್ಮೇಂಟ್‌ ಕೋಟಾದಲ್ಲಿ 33 ಮತ್ತು ಎನ್‌ಆರ್‌ಐ ಕೋಟಾದ ಒಂದು ಸೀಟು ಸೇರಿದೆ ಎಂದು ಅವರು ವಿವರಿಸಿದರು. ದಂತ ವೈದ್ಯಕೀಯದಲ್ಲಿ ಸರಕಾರಿ ಕೋಟಾದ 105 ಸೇರಿ 269, ಆಯುರ್ವೇದದಲ್ಲಿ ಸರಕಾರಿ ಕೋಟಾದ 184 ಸೇರಿದಂತೆ 363 ಸೀಟುಗಳನ್ನು ಅಭ್ಯರ್ಥಿಗಳು ಹಿಂದಿರುಗಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next