Advertisement

ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು: ಮಧ್ವರಾಜ್‌

07:30 AM Aug 20, 2017 | Team Udayavani |

ಕುಂದಾಪುರ: ಜನರ ಸಮಸ್ಯೆಗಳಿಗೆ ಗ್ರಾಮಮಟ್ಟದಲ್ಲಿ ಸ್ಪಂದನೆ ನೀಡಲು  ಜನಸ್ಪಂದನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವಲ್ಲಿ  ಈ ಜನಸ್ಪಂದನ ಕಾರ್ಯಕ್ರಮಗಳು ಬಹಳಷ್ಟು ಸಹಕಾರಿಯಾಗಿದೆ. 

Advertisement

ಸರಕಾರ ಹಾಗೂ ಅಧಿಕಾರಿಗಳು ಅರ್ಜಿದಾರರ ಸಮಸ್ಯೆಗೆ ಪರಿಹಾರಕಂಡುಕೊಳ್ಳುವಲ್ಲಿ ಶ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ  ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ಕುಂದಾಪುರ ತಾಲೂಕು ಬಿದ್ಕಲ್‌ಕಟ್ಟೆ ಶ್ರೀ ನಾಗಲಕ್ಷ್ಮೀ ಸಭಾಭವನದಲ್ಲಿ ಜನರಿದ ಬಿದ್ಕಲ್‌ಕಟ್ಟೆ  ಹೋಬಳಿ ಮಟ್ಟದ ಜನಸ್ಪಂದನ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು  ಕಾರ್ಯರೂಪಕ್ಕೆ ತಂದಿದ್ದು ಉಡುಪಿ ಜಿಲ್ಲೆಯಲ್ಲಿ ಸುಮಾರು 60ಸಾವಿರ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡುಗಳನ್ನು ವಿತರಿಸಲಾಗಿರುತ್ತದೆ. ಬಿಪಿಎಲ್‌ ಕಾರ್ಡು ಕೇವಲ ಪಡಿತರ ವ್ಯವಸ್ಥೆಗೆ ಮಾತ್ರವಲ್ಲದೇ ಇತರ ಅನೇಕ ಸೌಲಭ್ಯವನ್ನು ಪಡೆಯಲು ಸಹಕಾರಿಯಾಗಿರುವುದರಿಂದ ಹೊಸದಾಗಿ ಬಿಪಿಎಲ್‌ ಕಾರ್ಡು ಪಡೆಯಲು ಅರ್ಹರಾದವರು ದಾಖಲೆಗಳೊಂದಿಗೆ ಪಂಚಾಯತ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೆಕಾಗುತ್ತದೆ. ಶಂಕರನಾರಾಯಣ ವಲಯದಲ್ಲಿ 4,400 ಎಕರೆ  ಜಾಗವನ್ನು ಡೀಮ್ಡ್ ಪಾರೆಸ್ಟ್‌ ಎಂದು ಗುರುತಿಸಲಾಗಿದ್ದರೂ  ಇದರಲ್ಲಿ ಈಗಾಗಲೇ 2,200 ಎಕರೆ ಜಾಗವನ್ನು ಸರಕಾರ ವಾಪಸು ಪಡೆದಿರುವುದರಿಂದ ಅದನ್ನು 94ಸಿ ಹಾಗೂ 94ಸಿಸಿ ಅಡಿಯಲ್ಲಿ  ಅರ್ಜಿ ಸಲ್ಲಿಸಲು ನಿವೇಶನ ರಹಿತರಿಗೆ  ಸೆ.12ರ ತನಕ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಾಮಾಜಿಕ ಭದ್ರತೆಯ ಅಡಿಯಲ್ಲಿ 50 ಜನ ಫಲಾನುಭವಿಗಳಿಗೆ  ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು   ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಹಿಸಿದ್ದರು.  ಕಾರ್ಯಕ್ರಮದಲ್ಲಿ  ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ   ಎ.ಜಿ. ಕೊಡ್ಗಿ, ಜಿ.ಪಂ. ಸಿಇಒ ಶಿವಾನಂದ್‌, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌, ತಾ.ಪಂ. ಅಧ್ಯಕ್ಷೆ  ಜಯಶ್ರೀ ಮೊಗವೀರ, ಕುಂದಾಪುರ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ  ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ್‌ ಹೆಗ್ಡೆ, ಜಿ.ಪಂ. ಸದಸ್ಯೆ ಸುಪ್ರೀತಾ ಕುಲಾಲ್‌, ತಾ.ಪಂ. ಸದಸ್ಯರಾದ  ಶೈಲಾಶ್ರೀ ಹೆಗ್ಡೆ, ಜ್ಯೋತಿ ಪುತ್ರನ್‌, ಸೂರೊYàಳಿ ಚಂದ್ರಶೇಖರ ಶೆಟ್ಟಿ, ಬೆಳ್ವೆ, ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷ ಉದಯ ಕುಲಾಲ್‌, ಬೆಳ್ವೆ ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ, ಕೆದೂರು ಗ್ರಾ.ಪಂ.ಅಧ್ಯಕ್ಷ ಸಂಪತ್‌ ಕುಮಾರ್‌  ಶೆಟ್ಟಿ, ಕಾಳಾವರ ಗ್ರಾ.ಪಂ. ಅಧ್ಯಕ್ಷ ರವಿರಾಜ್‌ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ್‌ ಕಾಂಚನ್‌,  ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ  ಪವಿತ್ರಾ ಆರ್‌.ಅಡಿಗ, ರಾಜಸ್ವ ನಿರೀಕ್ಷಕ ನರಸಿಂಹ ಕಾಮತ್‌  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

ತಾಲೂಕು ತಹಶೀಲ್ದಾರ್‌ ಜಿ.ಎಂ. ಬೋರ್ಕರ್‌ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತುಗಳನ್ನಾಡಿದರು.  ಶಿಕ್ಷಕ ಉದಯಕುಮಾರ್‌  ಶೆಟ್ಟಿ ಕಾಳಾವರ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಾಧಿಕಾರಿ ನಾಗಭೂಷಣ ಉಡುಪ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next