Advertisement

ಪತ್ನಿಯನ್ನು ನೋಡಲೆಂದು 2,000 ಕಿ.ಮೀ ದೂರ ಸಮುದ್ರ ಯಾನ!

11:51 AM Mar 26, 2022 | Team Udayavani |

ಫುಕೆಟ್ : ಹೆಂಡತಿಯೊಬ್ಬಳು ಹತ್ತಿರ ಇದ್ದಾರೆ ನನಗದು ಕೋಟಿ ರೂಪಾಯಿ ಎಂಬ ಹಾಡಿನ ಅರ್ಥ ನಿಜ ಎಂಬಂತೆ  ವಿರಹ ವೇದನೆಯಿಂದ ಬಳಲಿ  2,000 ಕಿ.ಮೀ ದೂರ ಸಮುದ್ರ ಯಾನ ಮಾಡಲು ಮುಂದಾಗಿದ್ದ ವಿಯೆಟ್ನಾಮ್ ನ ವ್ಯಕ್ತಿಯೊಬ್ಬನನ್ನು ಥೈಲ್ಯಾಂಡ್ ನೌಕಾಪಡೆ  ಅಧಿಕಾರಿಗಳು ರಕ್ಷಿಸಿದ್ದಾರೆ.

Advertisement

ರಾಫ್ಟಿಂಗ್ ಬೋಟ್ ನಲ್ಲಿ ಯಾವುದೇ ಮ್ಯಾಪ್, ಕಂಪಾಸ್, ಬಟ್ಟೆಗಳು ಇಲ್ಲದೆ ಕೆಲವು ಬಾಟಲಿ ನೀರನ್ನು ಮಾತ್ರ ಇಟ್ಟುಕೊಂಡು  ತೇಲುವ ಚಿಕ್ಕ ದೋಣಿಯಲ್ಲಿ ಹುಟ್ಟು ಹಾಕುತ್ತಾ  ಮುಂಬಯಿಯಲ್ಲಿ ಇರುವ ಪತ್ನಿಯನ್ನು ನೋಡಲೆಂದು ಅಪಾಯಕಾರಿ ಪ್ರಯಾಣ ಬೆಳೆಸಿದ್ದ 37 ರ ಹರೆಯದ ಹೊ ಹೊಯಾಂಗ್ ಹಂಗ್ ನನ್ನು ಥೈಲ್ಯಾಂಡ್ ಕಡಲಿನಲ್ಲಿ ಅಧಿಕಾರಿಗಳು ರಕ್ಷಿಸಿದ್ದಾರೆ.

ವರದಿಯಾದಂತೆ ಸೈಕ್ಲೋನ್ ಅಪ್ಪಳಿಸುವ ವೇಳೆ ಬಂಗಾಳದ ಕಡಲ ತೀರಕ್ಕೆ ಬರಲು ಹಂಗ್ ಮುಂದಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಂಗ್ ಪತ್ನಿ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ಕೋವಿಡ್ ಸಮಸ್ಯೆಯಿಂದ ಆಕೆಯನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.ಹಂಗ್ ಗೆ ಭಾರತಕ್ಕೆ ಹಾರಾಟವನ್ನು ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಗಮನಕ್ಕೆ ತರಲಾಗಿದೆ , ಹೀಗಾಗಿ ಅವರು ಬಸ್ ಮೂಲಕ ಮರುಮಾರ್ಗ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next