ವಿಯೆನ್ನಾ: ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಸ್ಟ್ರೀಯಾದಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ರವಿವಾರ ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಭಾಗಶಃ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರು ಕೊರೊನಾಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಅಂಥವರನ್ನು ರಕ್ಷಿಸುವ ಉದ್ದೇಶದಿಂದ ಲಾಕ್‌ಡೌನ್ ನಿರ್ಧಾರಕ್ಕೆ ಬರಲಾಗಿದೆ.
ವೃತ್ತಿ ಸಂಬಂಧಿತ ಓಡಾಟ, ದಿನಸಿ ಖರೀದಿ, ವ್ಯಾಯಾಮದ ಉದ್ದೇಶದ ವಾಕಿಂಗ್, ಲಸಿಕೆ ಪಡೆಯುವ ಉದ್ದೇಶ ಹೊರತುಪಡಿಸಿದರೆ ಮತ್ಯಾವುದೇ ಉದ್ದೇಶದಲ್ಲಿ ಲಸಿಕೆ ಪಡೆಯದವರು ಓಡಾಡುವುದಕ್ಕೆ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ:ಇನ್ನು ರಾತ್ರಿಯೂ ಪೋಸ್ಟ್‌ಮಾರ್ಟಂ; ಬ್ರಿಟಿಷರು ಜಾರಿಗೊಳಿಸಿದ್ದ ನಿರ್ಧಾರ ರದ್ದು
ನಿಷೇಧ ಉಲ್ಲಂ ಸುವವರಿಗೆ ಕನಿಷ್ಠ 500 ಯೂರೋಸ್ (42 ಸಾವಿರ ರೂ.) ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘಿಸುವ ಖಾಸಗಿ ಕಂಪೆನಿಗೆ 2.5 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. ರಸ್ತೆಗಳಲ್ಲಿ ಅಡ್ಡಾಡುವ ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಲು ಅಲ್ಲಿನ ಪೊಲೀಸರಿಗೆ ಅಧಿಕಾರ ಕೊಡಲಾಗಿದೆ. 24ರ ವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
“ನನ್ನ ಗುರಿ ತುಂಬಾ ಸ್ಪಷ್ಟವಾಗಿದೆ. ಈ ಲಾಕ್ ಡೌನ್ ಲಸಿಕೆ ಹಾಕದವರಿಗೆ ಲಸಿಕೆ ಹಾಕಲು, ಲಸಿಕೆ ಹಾಕದವರನ್ನು ಲಾಕ್ ಮಾಡಲು ಅಲ್ಲ” ಎಂದು ಚಾನ್ಸೆಲರ್ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ಭಾನುವಾರ ಹೇಳಿದ್ದಾರೆ.