Advertisement

ಆಸ್ಟ್ರೇಲಿಯ, ಇಂಗ್ಲೆಂಡ್‌ ನಡುವಿನ ವನಿತಾ ಆ್ಯಶಸ್‌ ಸರಣಿ ಬೇಗ ಆರಂಭ

11:08 PM Jan 06, 2022 | Team Udayavani |

ಅಡಿಲೇಡ್‌ : ಏಕದಿನ ವಿಶ್ವಕಪ್‌ ತಯಾರಿ ಹಾಗೂ ಕ್ವಾರಂಟೈನ್‌ ಸಲುವಾಗಿ ಆಸ್ಟ್ರೇಲಿಯ ಮತ್ತು ಪ್ರವಾಸಿ ಇಂಗ್ಲೆಂಡ್‌ ನಡುವಿನ ವನಿತಾ ಆ್ಯಶಸ್‌ ಸರಣಿಯನ್ನು ಒಂದು ವಾರ ಬೇಗನೇ ಆರಂಭಿಸಲು ನಿರ್ಧರಿಸಲಾಗಿದೆ.

Advertisement

ಮೂಲ ವೇಳಾಪಟ್ಟಿ ಪ್ರಕಾರ ಈ ಸರಣಿ ಜ. 20ರಂದು ಆರಂಭವಾಗಬೇಕಿತ್ತು. ಆದರೀಗ ಸರಣಿ ಒಂದು ವಾರ ಬೇಗ ಮೊದಲ್ಗೊಳ್ಳಲಿದೆ. ಈ ಪಂದ್ಯಾವಳಿ ಮುಗಿಸಿ ಎರಡೂ ತಂಡಗಳ ಆಟಗಾರ್ತಿಯರು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ನ್ಯೂಜಿಲ್ಯಾಂಡ್‌ಗೆ ತೆರಳಲಿದ್ದಾರೆ.

ಆ್ಯಶಸ್‌ ಸರಣಿಯಲ್ಲಿ 3 ಟಿ20 ಪಂದ್ಯ, ಏಕೈಕ ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಾಗುವುದು.

ಇದನ್ನೂ ಓದಿ : ಭುವನೇಶ್ವರ: ಮೊಬೈಲ್‌ ಟವರ್‌ ಉದ್ಘಾಟನೆಗೆ ಬಂದ ಶಾಸಕರಿಗೇ ಶಾಕ್‌ ನೀಡಿದ ಗ್ರಾಮಸ್ಥರು !

Advertisement

Udayavani is now on Telegram. Click here to join our channel and stay updated with the latest news.

Next