ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ಕೂಟ ರವಿವಾರವಷ್ಟೇ ಅಂತ್ಯವಾಗಿದೆ. ಇನ್ನು ತಂಡಗಳು ತಮ್ಮ ದ್ವಿಪಕ್ಷೀಯ ಸರಣಿಯತ್ತ ಗಮನ ಹರಿಸುತ್ತಿವೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಬಿದ್ದು ಕಾಲು ಮುರಿದುಕೊಂಡಿದ್ದು, ಭಾನುವಾರ ಶಸ್ತ್ರಚಿಕಿತ್ಸೆಗೆ ಒಳಗಾದರು.
ಆಸ್ಟ್ರೇಲಿಯಾದ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೇರಿದಂತೆ ವಿಸ್ತೃತ ಅವಧಿಗೆ ಮ್ಯಾಕ್ಸ್ ವೆಲ್ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಆಯ್ಕೆಗಾರರು ಹೇಳಿದ್ದಾರೆ.
ಶನಿವಾರ ಸಂಜೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ಜಾರಿಬಿದ್ದು ಅವರ ಕಾಲು ಮುರಿತವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಇಂದು ವಿಶ್ವ ಮಧುಮೇಹ ದಿನ: ಆತಂಕ ಹುಟ್ಟಿಸುತ್ತಿರುವ ಮಕ್ಕಳ ಮಧುಮೇಹ
“ಗ್ಲೆನ್ ನಮ್ಮ ಸೀಮಿತ ಓವರ್ ತಂಡದ ನಿರ್ಣಾಯಕ ಭಾಗವಾಗಿದ್ದಾರೆ. ನಾವು ಅವರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ” ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.
ಶನಿವಾರ ಸಂಜೆ ಮ್ಯಾಕ್ಸ್‌ವೆಲ್ ಮತ್ತು ಸ್ನೇಹಿತ ಗಾರ್ಡನ್ ನಲ್ಲಿ ಓಡುತ್ತಿದ್ದಾಗ ಇಬ್ಬರೂ ಬಿದ್ದಿದ್ದಾರೆ, ಮ್ಯಾಕ್ಸ್‌ವೆಲ್ ನ ಕಾಲು ಇನ್ನೊಬ್ಬ ವ್ಯಕ್ತಿಯ ಕೆಳಗೆ ಸಿಕ್ಕಿಹಾಕಿಕೊಂಡಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.