Advertisement

ಆಸ್ಟ್ರೇಲಿಯಕ್ಕೆ ಬೃಹತ್‌ ಸೋಲು

07:00 AM Apr 04, 2018 | Team Udayavani |

ಜೊಹಾನ್ಸ್‌ಬರ್ಗ್‌: ಚೆಂಡು ವಿರೂಪಗೊಳಿಸಿದ ಪ್ರಕರಣ ಬಳಿಕ ಆಸ್ಟ್ರೇಲಿಯ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಬೃಹತ್‌ ಅಂತರದಿಂದ ಸೋಲನ್ನು ಕಂಡಿದೆ.

Advertisement

ಜೊಹಾನ್ಸ್‌ಬರ್ಗ್‌ನಲ್ಲಿ ಮುಗಿದ ನಾಲ್ಕನೇ ತಥಾ ಅಂತಿಮ ಟೆಸ್ಟ್‌ ನಲ್ಲಿ ಆಸ್ಟ್ರೇಲಿಯ ತಂಡವು 492 ರನ್ನುಗಳಿಂದ ಸೋಲನ್ನು ಕಂಡಿದೆ. ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.
ಗೆಲ್ಲಲು 612 ರನ್‌ ಗಳಿಸುವ ಅಸಾಧ್ಯ ಗುರಿ ಪಡೆದ ಆಸ್ಟ್ರೇಲಿಯ ತಂಡವು ವೆರ್ನನ್‌ ಫಿಲಾಂಡರ್‌ ದಾಳಿಗೆ ತತ್ತರಿಸಿ ಹೋಯಿತು. 3 ವಿಕೆಟಿಗೆ 88 ರನ್ನಿನಿಂದ ಅಂತಿಮ ದಿನದ ಆಟ ಆರಂಭಿಸಿದ ಆಸ್ಟ್ರೇಲಿಯ ಫಿಲಾಂಡರ್‌ಗೆ
ಸಂಪೂರ್ಣ ತಲೆಬಾಗಿತು. ಅಂತಿಮ ದಿನ ಉರುಳಿದ 7 ವಿಕೆಟ್‌ಗಳಲ್ಲಿ ಆರನ್ನು ಫಿಲಾಂಡರ್‌ ಪಡೆದಿದ್ದರು. ಇನ್ನೊಬ್ಬರು ರನೌಟ್‌ ಆಗಿದ್ದರು. ಇದರಿಂದಾಗಿ ಆಸ್ಟ್ರೇಲಿಯ 119 ರನ್ನಿಗೆ ಸರ್ವಪತನ ಕಂಡಿತು. ಕೇವಲ 31 ರನ್‌ ಅಂತರದಲ್ಲಿ 7 ವಿಕೆಟ್‌ಗಳು ಉರುಳಿದ್ದವು.

ಬರ್ನ್ಸ್ ಮತ್ತು ಹ್ಯಾಂಡ್ಸ್‌ ಕಾಂಬ್‌ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು. 42 ರನ್‌ ಗಳಿಸಿದ ಬರ್ನ್ಸ್ ತಂಡದ ಗರಿಷ್ಠ  ಸ್ಕೋರರ್‌ ಎನಿಸಿಕೊಂಡರೆ ಹ್ಯಾಂಡ್ಸ್‌ಕಾಂಬ್‌ 24 ರನ್‌ ಗಳಿಸಿದರು. ಅಂತಿಮ ದಿನದ ಮೊದಲ ಎಸೆತದಲ್ಲಿ ಫಿಲಾಂಡರ್‌ ಅವರು ಶàನ್‌ ಮಾರ್ಷ್‌ ಅವರ ವಿಕೆಟನ್ನು ಹಾರಿಸಿದ್ದರು. ಉಗ್ರ ದಾಳಿ ಸಂಘಟಿಸಿದ ಫಿಲಾಂಡರ್‌ ತನ್ನ 13 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್ನಿಗೆ 6 ವಿಕೆಟ್‌ ಕಿತ್ತು ದಕ್ಷಿಣ ಆಫ್ರಿಕಾದ ಬೃಹತ್‌ ಗೆಲುವಿಗೆ ಕಾರಣರಾದರು. ಈ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಕಾಗಿಸೊ ರಬಾಡ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರು 
ದಕ್ಷಿಣ ಆಫ್ರಿಕಾ 488 ಮತ್ತು ಆರು ವಿಕೆಟಿಗೆ 344 ಡಿಕ್ಲೇರ್‌ ; ಆಸ್ಟ್ರೇಲಿಯ 221 ಮತ್ತು 119 (ಬರ್ನ್ಸ್ 42, ಹ್ಯಾಂಡ್ಸ್‌ಕಾಂಬ್‌ 24, ಫಿಲಾಂಡರ್‌ 21ಕ್ಕೆ 6, ಮಾರ್ನೆ ಮಾರ್ಕೆಲ್‌ 28ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next