Advertisement

ವಿಶ್ವಕಪ್ ಫೈನಲ್ ನಲ್ಲಿ ಅಲಿಸಾ ಹೀಲಿ ಬೊಂಬಾಟ್ ಬ್ಯಾಟಿಂಗ್; ಹೊಸ ದಾಖಲೆ

10:57 AM Apr 03, 2022 | Team Udayavani |

ಕ್ರೈಸ್ಟ್ ಚರ್ಚ್: ವನಿತಾ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಬ್ಬರಿಸಿದೆ. ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ದಾಖಲೆಯ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ 356 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

Advertisement

ಸೆಮಿ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಹೀಲಿ, ಫೈನಲ್ ನಲ್ಲೂ ತಮ್ಮ ಬ್ಯಾಟಿಂಗ್ ವೈಭವ ಮುಂದುವರಿಸಿದರು. 138 ಎಸತೆದ ಎದುರಿಸಿದ ಅಲಿಸಾ ಹೀಲಿ 170 ರನ್ ಗಳಿಸಿದರು. ಹೀಲಿಯ ಈ ಅದ್ಭುತ ಇನ್ನಿಂಗ್ 26 ಬೌಂಡರಿಗಳನ್ನು ಒಳಗೊಂಡಿತ್ತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ ಮೊದಲ ವಿಕೆಟ್ ಗೆ 160 ರನ್ ಕಲೆಹಾಕಿತು. ಹೀಲಿ 170 ರನ್, ಹೇನ್ಸ್ 68 ರನ್ ಮತ್ತು ಬೆತ್ ಮೂನಿ 62 ರನ್ ಗಳಿಸಿದರು. 50 ಓವರ್ ನಲ್ಲಿ ಆಸೀಸ್ ಐದು ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು.

ಇದನ್ನೂ ಓದಿ:ಬಾಲಿವುಡ್ ನಲ್ಲಿ ಫುಲ್ ಬ್ಯುಸಿಯಾದ ಕೊಡಗಿನ ಕುವರಿ: ರಣಬೀರ್ ಗೆ ಜೋಡಿ

ಇದೇ ವೇಳೆ ಅಲಿಸಾ ಹೀಲಿ ನ್ಯೂಜಿಲೆಂಡ್‌ನ ಶ್ರೇಷ್ಠ ಬ್ಯಾಟರ್ ಡೆಬ್ಬಿ ಹಾಕ್ಲೆ ಅವರ 25-ವರ್ಷ ಹಳೆಯ ದಾಖಲೆಯನ್ನು ಮುರಿದರು. ಅಲ್ಲದೆ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆ ಬರೆದರು.

Advertisement

1997ರ ವಿಶ್ವಕಪ್ ನಲ್ಲಿ ಕಿವೀಸ್ ನ ಹಾಕ್ಲಿ 456 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ಆಸೀಸ್ ನ ಇಬ್ಬರು ಬ್ಯಾಟರ್ ಗಳು ಈ ದಾಖಲೆ ಮುರಿದರು. ಅಲಿಸಾ ಹೀಲಿ ಈ ಕೂಟದಲ್ಲಿ 509 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ರಾಚೆಲ್ ಹೇನ್ಸ್ 497 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next