Advertisement

ಟಿಮ್‌ ಪೇನ್‌ ಹಣ ಕದ್ದು ಮೆಕ್‌ ಡೊನಾಲ್ಡ್‌ ಗೆ ಹೋದ ಕಳ್ಳರು !

01:09 PM Apr 01, 2020 | keerthan |

ಹೋಬರ್ಟ್‌: ಆಸ್ಟ್ರೇಲಿಯ ಟೆಸ್ಟ್‌ ತಂಡದ ನಾಯಕ ಟಿಮ್‌ ಪೇನ್‌ ಹಣ ಕಳುವಾಗಿದೆ. ಬೀದಿಯಲ್ಲಿ ನಿಲ್ಲಿಸಿದ್ದ ಅವರ ಕಾರಿನಿಂದ ಕಳ್ಳರು ಪರ್ಸ್‌, ಇನ್ನಿತರ ವಸ್ತುಗಳನ್ನು ಎಗರಿಸಿದ್ದಾರೆ. ಕೂಡಲೇ ಕಳ್ಳರು ಮೆಕ್‌ ಡೊನಾಲ್ಡ್‌ಗೆ ಹೋಗಿದ್ದಾರೆ.

Advertisement

ಆಗ ಪೇನ್‌ ಮೊಬೈಲ್‌ಗೆ ಬ್ಯಾಂಕ್‌ ಸಂದೇಶ ಬಂದಿದೆ. ಇದರಿಂದ ಚಕಿತಗೊಂಡ ಅವರು ವಿಚಾರಿಸಿದಾಗ ಕಳುವಾಗಿರುವುದು ಪತ್ತೆಯಾಗಿದೆ. ಇಷ್ಟೆಲ್ಲ ಆಗಲೂ ಕಾರಣವಿದೆ.

ಕೊರೊನಾ ಹಿನ್ನೆಲೆಯಲ್ಲಿ ಪೇನ್‌ ತಮ್ಮ ಗ್ಯಾರೇಜನ್ನೇ ಜಿಮ್‌ ಮಾಡಿ ಕೊಂಡಿದ್ದಾರೆ. ಅಲ್ಲಿದ್ದ ಕಾರನ್ನು ಹೊರಗೆ ನಿಲ್ಲಿಸಿದ್ದಾರೆ. ಈ ಅವಕಾಶವನ್ನು ಕಳ್ಳರು ದುರುಪಯೋಗ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next