ಕೋವಿಡ್-19 ಸೋಂಕು ಕಾಲದಲ್ಲಿ ಕ್ರಿಕೆಟ್ ಕೂಟ ನಡೆಸುವುದೇ ಸವಾಲಿನ ಕೆಲಸ. ಸಾಕಷ್ಟು ಮುಂಜಾಗೃತಾ ಕ್ರಮಗಳೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ. ಬೌಲರ್ ಗಳು ಚೆಂಡಿಗೆ ಎಂಜಲು ತಾಗಿಸುವುದನ್ನೂ ನಿಷೇಧಿಸಲಾಗಿದೆ. ಆದರೆ ಇಲ್ಲೊಬ್ಬ ಬೌಲರ್ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಚೆಂಡಿಗೆ ಸವರಿದ್ದು, ಇದೀಗ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾನೆ.
ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚ್ ಕ್ಲೇಡನ್ ಅವರೇ ಚೆಂಡಿಗೆ ಸ್ಯಾನಿಟೈಸರ್ ಹಚ್ಚಿ ಅಮಾನತಾದ ಆಟಗಾರ.
ಇದನ್ನೂ ಓದಿ: ಮೊದಲು ಕಂಗನಾ ಮಹಾರಾಷ್ಟ್ರಿಗರ ಕ್ಷಮೆ ಕೇಳಲಿ, ನಂತರ ನಾನು ಯೋಚಿಸುತ್ತೇನೆ: ಸಂಜಯ್ ರಾವತ್
ಇಂಗ್ಲೀಷ್ ಕೌಂಟಿ ತಂಡ ಸಸೆಕ್ಸ್ ಪರ ಆಡುವ 37ರ ಹರೆಯದ ಬೌಲರ್ ಕಳೆದ ತಿಂಗಳು ನಡೆದ ಪಂದ್ಯದ ವೇಳೆ ಚೆಂಡಿಗೆ ಸ್ಯಾನಿಟೈಸರ್ ಸವರಿದ್ದರು ಎಂದು ಸಾಬೀತಾಗಿದೆ. ಈ ಕಾರಣದಿಂದ ಅವರನ್ನು ಅಮಾನತು ಮಾಡಲಾಗಿದ ಎಂದು ಸಸೆಕ್ಸ್ ಹೇಳಿದೆ.
ಇದನ್ನೂ ಓದಿ: ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡುನನ್ನು ಉಡುಪಿಯಲ್ಲಿ ಬಂಧಿಸಿದ ಪೊಲೀಸರು