Advertisement
ರುಬ್ಲೆವ್ ಅವರು ಬ್ರಿಟನ್‌ನ 25ನೇ ಶ್ರೇಯಾಂಕದ ಡೇನಿಯಲ್ ಇವಾನ್ಸ್ ಅವರನ್ನು 6-4, 6-2, 6-3 ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು. ಎರಡು ವರ್ಷಗಳ ಹಿಂದೆ ಅವರಿಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಆಸ್ಟ್ರೇಲಿಯದ 23ರ ಹರೆಯದ ಅಲೆಕ್ಸ್ ಡಿ ಮಿನೌರ್ ಕೂಡ ನಾಲ್ಕನೇ ಸುತ್ತು ತಲುಪಿದ್ದಾರೆ. ಅಲ್ಲಿ ಅವರು 21 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ನೋವಾಕ್ ಜೊಕೋವಿಕ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಸುಮಾರು ಎರಡು ದಶಕಗಳ ಬಳಿಕ ಅಮೆರಿಕದ ಹಲವು ಆಟಗಾರರು ಇಲ್ಲಿ ಎರಡನೇ ವಾರಕ್ಕೆ ತಲುಪಿದ ಸಾಧನೆ ಮಾಡಿದ್ದಾರೆ. ಟಾಮಿ ಪಾಲ್, ಜೆ.ಜೆ. ವೂಲ್ಫ್, ಸೆಬಾಸ್ಟಿಯನ್ ಕೋರ್ಡ ಮತ್ತು ಬೆನ್ ಶಲ್ಟನ್ ಚೊಚ್ಚಲ ಬಾರಿ ನಾಲ್ಕನೇ ಸುತ್ತು ತಲುಪಿದ ಅಮೆರಿಕದ ಆಟಗಾರರಾಗಿದ್ದಾರೆ. ಟಾಮಿ ಪಾಲ್ ಅವರು ನಾಲ್ಕನೇ ಸುತ್ತಿನಲ್ಲಿ ರಾಬೆರ್ಟೊ ಬಾಟಿಸ್ಟ ಆಗುಟ್ ಅವರ ಸವಾನ್ನು ಎದುರಿ ಸಲಿದ್ದಾರೆ. ಬಾಟಿಸ್ಟ ತಮ್ಮ ಪಂದ್ಯದಲ್ಲಿ ಆ್ಯಂಡಿ ಮರ್ರೆ ಅವರನ್ನು 6-1, 6-7 (7-9), 6-3, 6-4 ಸೆಟ್‌ಗಳಿಂದ ಸೋಲಿಸಿದ್ದರು.
Related Articles
ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಪ್ಲಿಸ್ಕೋವಾ ರಷ್ಯಾದ ವಾರ್ವರಾ ಗ್ರಾಚೇವಾ ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ನಾಲ್ಕನೇ ಸುತ್ತಿನಲ್ಲಿ ಅವರು ಚೀನದ ಝಾಂಗ್ ಶುಯಿ ಅವರನ್ನು ಎದುರಿಸಲಿದ್ದಾರೆ. 12ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಕ್ 6-2, 7-5 ಸೆಟ್‌ಗಳಿಂದ ಕ್ಯಾಮಿಲಾ ಜಿಯೊರ್ಜಿ ಅವರನ್ನು ಸೋಲಿಸಿದರು.
Advertisement
ಡಬಲ್ಸ್: ಭಾರತದ ಬಾಲಾಜಿ-ನೆಡುಂಚಿಜಿಯಾನ್ ಮುನ್ನಡೆಮೆಲ್ಬರ್ನ್: ಭಾರತದ ಎನ್. ಶ್ರೀರಾಮ್ ಬಾಲಾಜಿ ಮತ್ತು ಜೀವನ್ ನೆಡುಂಚಿಜಿಯಾನ್ ಅವರು ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನ ಹೋರಾಟದಲ್ಲಿ ಐದನೇ ಶ್ರೇಯಾಂಕದ ಐವಾನ್ ಡೊಡಿಗ್ ಮತ್ತು ಆಸ್ಟಿನ್ ಕ್ರ್ಯಾಜಿಸೆಕ್ ಅವರನ್ನು ಕಠಿನ ಸೆಟ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಬದಲಿ ತಂಡವಾಗಿ ಈ ಕೂಟದಲ್ಲಿ ಆಡಿದ ಬಾಲಾಜಿ ಮತ್ತು ನೆಡುಂಚಿಜಿಯಾನ್ ಅವರು ಅದ್ಭುತ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು. ಎರಡು ತಾಸು ಮತ್ತು 20 ನಿಮಿಷಗಳ ಹೋರಾಟದಲ್ಲಿ ಅವರು ಡೊಡಿಗ್-ಕ್ರ್ಯಾಜಿಸೆಕ್ ಅವರನ್ನು 7-6 (6), 2-6, 6-4 ಸೆಟ್‌ಗಳಿಂದ ಉರುಳಿಸಿದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರು ನೇರ ಸೆಟ್‌ಗಳ ಗೆಲುವಿನೊಂದಿಗೆ ದ್ವಿತೀಯ ಸುತ್ತಿಗೇರಿದ್ದಾರೆ. ಅವರು ಸ್ಥಳೀಯ ಪ್ರತಿಭೆ ಜೈಮಿ ಫೋರ್ಲಿಸ್ ಮತ್ತು ಲ್ಯೂಕ್ ಸವಿಲೆ ಅವರನ್ನು 7-5, 66-3 ಸೆಟ್‌ಗಳಿಂದ ಮಣಿಸಿದರು. ಚೊಚ್ಚಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿರುವ ಬಾಲಾಜಿ ಮತ್ತು ನೆಡುಂಚಿಜಿಯಾನ್ ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಮತ್ತು ಫ್ಯಾಬ್ರೈಸ್ ಮಾರ್ಟಿನ್ ಅವರ ಸವಾಲನ್ನು ಎದುರಿಸಲಿದ್ದಾರೆ. ಬಾಲಾಜಿ ಮತ್ತು ನೆಡುಂಚಿಜಿಯಾನ್ ಕಳೆದ ತಿಂಗಳು ನಡೆದ ಟಾಟಾ ಓಪನ್ ಮಹಾರಾಷ್ಟ್ರ ಕೂಟದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು.