Advertisement

Australian Open Tennis: ಹಿಂದೆ ಸರಿದ ಬೋಪಣ್ಣ-ಬಬೋಸ್‌

11:28 PM Jan 20, 2024 | Team Udayavani |

ಮೆಲ್ಬರ್ನ್: ಭಾರತದ ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ರೋಮಾನಿಯದ ವಿಕ್ಟರ್‌ ವ್ಲಾಡ್‌ ಕೊರ್ನಿಯ ಅವರು ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಡಬಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೋಲನ್ನು ಕಂಡಿದ್ದಾರೆ. ಇದೇ ವೇಳೆ ಮಿಕ್ಸೆಡ್‌ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ಟೈಮಿಯಾ ಬಬೋಸ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

Advertisement

ಬಾಲಾಜಿ-ಕೊರ್ನಿಯ ಅವರು ಮಾರ್ಸೆಲೊ ಅರೆವಾಲೊ ಮತ್ತು ಮ್ಯಾಟ್‌ ಪಾವಿಕ್‌ ಅವರೆದುರು 3-6, 3-6 ನೇರ ಸೆಟ್‌ಗಳಿಂದ ಸೋತು ನಿರ್ಗಮಿಸಿದರು. ಬಾಲಾಜಿ-ಕೊರ್ನಿಯ ಅವರು ಮೊದಲ ಸುತ್ತಿನಲ್ಲಿ ಮ್ಯಾಟೆಯೊ ಅರ್ನಾಲ್ಡಿ ಮತ್ತು ಆಂದ್ರೆಯ ಪೆಲ್ಲಿಗ್ರಿನೊ ಅವರನ್ನು ಸೋಲಿಸಿದ್ದರು.

ಬಾಲಾಜಿ ಅವರು ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಎರಡನೇ ಮತ್ತು ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲಿ ಮೂರನೇ ಬಾರಿ ದ್ವಿತೀಯ ಸುತ್ತಿಗೇರಿದ ಸಾಧನೆ ಮಾಡಿದ್ದಾರೆ.2018ರ ವಿಂಬಲ್ಡನ್‌ನಲ್ಲಿ ಅವರು ವಿಷ್ಣು ವರ್ಧನ್‌ ಜತೆಗೂಡಿ ದ್ವಿತೀಯ ಸುತ್ತಿಗೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next