Advertisement

ಕಾಡ್ಗಿಚ್ಚಿನ ದಟ್ಟ ಹೊಗೆ: ಆಸ್ಟ್ರೇಲಿಯನ್ ಓಪನ್ ಅರ್ಹತಾ ಸುತ್ತು ವಿಳಂಬ

04:24 PM Jan 16, 2020 | keerthan |

ಮೆಲ್ಬರ್ನ್: ಕಾಡ್ಗಿಚ್ಚಿನ ದಟ್ಟ ಹೊಗೆಯ ಕಾರಣ ಬುಧವಾರದ ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಸುತ್ತಿನ ಪಂದ್ಯಗಳು 2 ಗಂಟೆ ವಿಳಂಬವಾಗಿ ಆರಂಭವಾದವು. “ಬೆಳಗ್ಗೆ 11 ಗಂಟೆಯ ತನಕ ಅರ್ಹತಾ ಸುತ್ತಿನ ಪಂದ್ಯಗಳನ್ನೆಲ್ಲ ಸ್ಥಗಿತಗೊಳಿಸಲಾಗಿದೆ.

Advertisement

ಅಪರಾಹ್ನ ಒಂದು ಗಂಟೆಯ ತನಕ ಪಂದ್ಯಗಳು ಆರಂಭವಾಗುವ ಸಾಧ್ಯತೆ ಇಲ್ಲ’ ಎಂದು ಸಂಘಟಕರು ಆರಂಭಿಕ ಪ್ರಕಟಣೆ ನೀಡಿದ್ದರು.

ಮೆಲ್ಬರ್ನ್ ಪಾರ್ಕ್‌ ಮೇಲೆ ನಿರಂತರ ಕಣ್ಗಾವಲು ಇರಿಸಲಾಗಿದೆ. ವಾಸ್ತವ ಸ್ಥಿತಿಯ ದತ್ತಾಂಶಗಳನ್ನು ಗಮನಿಸಿ, ವಿಜ್ಞಾನ, ಹವಾಮಾನ ಹಾಗೂ ವೈದ್ಯಕೀಯ ಇಲಾಖೆಯ ವರದಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸಂಘಟಕರು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯ ಓಪನ್‌ ಕೂಟ ನಡೆಸುವುದು ಬಹಳ ಕಷ್ಟಕರವಾಗಿದೆ. ಹಲವರು ಕೂಟವನ್ನು ರದ್ದು ಮಾಡಿ ಎಂದು ಸಲಹೆ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next