Advertisement
ಜೆಕ್ ಗಣರಾಜ್ಯದ ಲೂಸಿ ಸಫರೋವಾ ಅವರೆದುರಿನ ಈ ಹೋರಾಟದಲ್ಲಿ 15 ಏಸ್ ಮತ್ತು 35 ವಿಜಯಿ ಹೊಡೆತಗಳನ್ನು ನೀಡಿದ್ದ ಸೆರೆನಾ 6-3, 6-4 ಸೆಟ್‌ಗಳಿಂದ ಗೆಲುವು ಸಾಧಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ತನ್ನ ದೇಶದವರೇ ಆದ ನಿಕೋಲೆ ಗಿಬ್ಸ್ ಅವರನ್ನು ಎದುರಿಸಲಿದ್ದಾರೆ. ಗಿಬ್ಸ್ ಇನ್ನೊಂದು ಪಂದ್ಯದಲ್ಲಿ ಅಮೆರಿಕದವರೇ ಆದ ಐರಿನಾ ಫಾಲ್ಕೋನಿ ಅವರನ್ನು 6-4, 6-1 ಸೆಟ್‌ಗಳಿಂದ ಉರುಳಿಸಿದ್ದರು.
ಮಾಜಿ ನಂಬರ್ ವನ್ ಕ್ಯಾರೋಲಿನ್ ವೋಜ್ನಿಯಾಕಿ ಸುಲಭ ಗೆಲುವಿನೊಂದಿಗೆ ಮೂರನೇ ಸುತ್ತು ತಲುಪಿದ್ದಾರೆ. ಕ್ರೊವೇಶಿಯದ ಡೊನಾ ವೆಕಿಕ್ ಅವರನ್ನು 6-1, 6-3 ಸೆಟ್‌ಗಳಿಂದ ಕೆಡಹಿದ ವೋಜ್ನಿಯಾಕಿ ಮೂರನೇ ಸುತ್ತಿನಲ್ಲಿ ಬ್ರಿಟನ್‌ನ ಜೋಹಾನಾ ಕೊಂಟಾ ಅವರ ಸವಾಲನ್ನು ಎದುರಿಸಬೇಕಾಗಿದೆ. ಕೊಂಟಾ ತನ್ನ ಪಂದ್ಯದಲ್ಲಿ ಜಪಾನಿನ ನವೋಮಿ ಒಸಾಕಾ ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿದರು. ರಾದ್ವಂಸ್ಕಾ ಪತನ
ಮೂರನೇ ಶ್ರೇಯಾಂಕದ ಮತ್ತು ಮಾಜಿ ಸೆಮಿಫೈನಲಿಸ್ಟ್ ಅಗ್ನಿàಸ್ಕಾ ರಾದ್ವಂಸ್ಕಾ ದ್ವಿತೀಯ ಸುತ್ತಿನ ಹೋರಾಟದಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. 79ನೇ ರ್‍ಯಾಂಕಿನ ಕ್ರೊವೇಶಿಯದ ಮಿರ್ಜಾನಾ ಲೂಸಿಕ್ ಬರೋನಿ ಅವರನ್ನು 6-3, 6-2 ಸೆಟ್‌ಗಳ ಗೆಲುವು ಸಾಧಿಸಿ ಸಂಭ್ರಮಿಸಿದರು. 2015 ಮತ್ತು ಕಳೆದ ವರ್ಷ ಇಲ್ಲಿ ರಾದ್ವಂಸ್ಕಾ ಸೆಮಿಫೈನಲ್ ತಲುಪಿದ್ದರು. ಲೂಸಿಕ್ ಬರೋನಿ ಮುಂದಿನ ಸುತ್ತಿನಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ಅವರನ್ನು ಎದುರಿಸಲಿದ್ದಾರೆ. ಸಕ್ಕಾರಿ ತನ್ನ ಪಂದ್ಯದಲ್ಲಿ ಫ್ರಾನ್ಸ್‌ನ ಅಲೀಝ್ ಕಾರ್ನೆಟ್ ಅವರನ್ನು 7-5, 4-6, 6-1 ಸೆಟ್‌ಗಳಿಂದ ಉರುಳಿಸಿದ್ದರು.
Related Articles
Advertisement
ಇನ್ನೊಂದು ಪಂದ್ಯದಲ್ಲಿ 5ನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ರಶ್ಯದ ಅನ್ನಾ ಬ್ಲಿಂಕೋವಾ ಅವರನ್ನು 6-0, 6-2 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತು ತಲುಪಿದರು. ಮೂರನೇ ಸುತ್ತಿನಲ್ಲಿ ಅವರು ಲಾತ್ವಿಯಾದ ಜೆಲೆನಾ ಓಸ್ಟಾಪೆಂಕೊ ಅವರನ್ನು ಎದುರಿಸಲಿದ್ದಾರೆ. ಓಸ್ಟಾಪೆಂಕೊ ತನ್ನ ಪಂದ್ಯದಲ್ಲಿ ಕಝಾಕ್‌ಸ್ಥಾನದ ಯೂಲಿಯಾ ಪುತಿನ್‌ಟೆÕàವಾ ಅವರನ್ನು 6-3, 6-1 ಸೆಟ್‌ಗಳಿಂದ ಉರುಳಿಸಿದ್ದರು.