Advertisement

ಆಸ್ಟ್ರೇಲಿಯನ್‌ ಓಪನ್‌: ಹ್ಯಾಟ್ರಿಕ್‌ ಹಾದಿಯಲ್ಲಿ ಫೆಡರರ್‌

12:30 AM Jan 14, 2019 | |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಹೆಚ್ಚಿನವರ ಗಮನವೆಲ್ಲ “ಏಜ್‌ಲೆಸ್‌’ ರೋಜರ್‌ ಫೆಡರರ್‌ ಮೇಲಿದೆ. ಅವರೀಗ ಹ್ಯಾಟ್ರಿಕ್‌ ಹಾದಿಯಲ್ಲಿದ್ದಾರೆ.

Advertisement

ಫೆಡರರ್‌ ವಯಸ್ಸು ಕೂಡ ಸೆರೆನಾರಷ್ಟೇ (37 ವರ್ಷ). ಒಟ್ಟು 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ. ಇದರಲ್ಲಿ 6 ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಗಳು. ಕಳೆದೆರಡು ವರ್ಷ ಸತತವಾಗಿ ಕಿರೀಟ ಧರಿಸಿದ ಹೆಗ್ಗಳಿಕೆ. ಈಗಲೂ ತಾನು ಉತ್ತಮ ಮಟ್ಟದ ಟೆನಿಸ್‌ ಆಡುತ್ತಿದ್ದೇನೆ ಎಂಬ ವಿಶ್ವಾಸವೇ ಈ ಸ್ವಿಸ್‌ ಮಾಸ್ಟರ್‌ಗೆ ಸ್ಫೂರ್ತಿ.

ಅಪಾಯಕಾರಿ ಡೆನ್ನಿಸ್‌ ಇಸ್ತೋಮಿನ್‌ ಮೊದಲ ಸುತ್ತಿನ ಎದುರಾಳಿ. 2 ವರ್ಷಗಳ ಹಿಂದೆ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಅವರನ್ನು 2ನೇ ಸುತ್ತಿನಲ್ಲೇ ಪರಾಭವಗೊಳಿಸಿದ ಹೆಗ್ಗಳಿಕೆ ಇಸ್ತೋಮಿನ್‌ ಅವರದು. ಹೀಗಾಗಿ ಫೆಡರರ್‌ ಎಂದಿಗಿಂತ ಹೆಚ್ಚು ಎಚ್ಚರಿಕೆಯಿಂದ ಕೂಟವನ್ನು ಆರಂಭಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next