Advertisement
ಮೊದಲ ದಿನದಾಟದಲ್ಲಿ ಒಟ್ಟು 64 ಪಂದ್ಯಗಳು ನಡೆದವು. ಪುರುಷರ ವಿಭಾಗದ ಫೇವರಿಟ್ ಆಟಗಾರ ರಫೆಲ್ ನಡಾಲ್ ಅಮೆರಿಕದ ಮಾರ್ಕೋಸ್ ಗಿರೋನ್ ವಿರುದ್ಧ 6-1, 6-4, 6-2ರಿಂದ ಗೆದ್ದು ಬಂದರು. ನಡಾಲ್ ಈ ಕೂಟದ ಏಕೈಕ ಮಾಜಿ ಚಾಂಪಿಯನ್ ಆಗಿದ್ದಾರೆ. ಅವರು 2009ರಲ್ಲಿ ಕಿರೀಟ ಏರಿಸಿದ್ದರು.
ವನಿತಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ನವೋಮಿ ಒಸಾಕಾ 6-3, 6-3ರಿಂದ ಕೊಲಂಬಿಯಾದ ಕ್ಯಾಮಿಲಾ ಒಸೋರಿಯೊ ಅವರಿಗೆ ಸೋಲುಣಿಸಿದರು. ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ ಉಕ್ರೇನಿನ ಲೆಸಿಯಾ ಸುರೆಂಕೊ ಅವರನ್ನು 6-0, 6-1 ಅಂತರದಿಂದ ಸುಲಭದಲ್ಲಿ ಮಣಿ ಸಿದರು. ಮರಿಯಾ ಸಕ್ಕರಿ ಜರ್ಮನಿಯ ಟಜಾನಾ ಮಾರಿಯಾ ವಿರುದ್ಧ 6-4, 7-6 (7-2) ಅಂತರದಿಂದ ಗೆದ್ದು ಬಂದರು.
Related Articles
Advertisement