Advertisement
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯನ್ನು ನಂಬಿ ಆಸ್ಟ್ರೇಲಿಯದ ಹೀಲಿಂಗ್ ಚರ್ಚ್ (ರೋಗಗಳನ್ನು ಮತ್ತು ಸಮಸ್ಯೆಗಳನ್ನು ಗುಣಪಡಿಸುತ್ತೇವೆ ಎಂದು ಹೇಳಿಕೊಳ್ಳುವ ಸಂಸ್ಥೆ) ಸೋಡಿಯಂ ಕ್ಲೋರೈಟ್ ದ್ರಾವಣ ಕೋವಿಡ್ ಗೆ ರಾಮಬಾಣ ಎಂದು ಹೇಳಿಕೊಂಡಿತ್ತು.
ಕೆಲ ದಿನಗಳ ಹಿಂದೆ ಅಧ್ಯಕ್ಷ ಟ್ರಂಪ್ ಕೋವಿಡ್-19 ಸೋಂಕು ನಿವಾರಣೆಯಲ್ಲಿ ಕೈಗಾರಿಕಾ ಕೊಳಚೆ ನಿವಾರಿಸಲು ಬ್ಲೀಚಿಂಗ್ ಪೌಡರ್ ಆಗಿ ಉಪಯೋಗುತ್ತಿರುವ ಸೋಡಿಯಂ ಕ್ಲೋರೈಟ್ ಕೋವಿಡ್ ಸೋಂಕು ನಿವಾರಿಕವಾಗಬಹುದು ಎಂದು ಹೇಳಿದ್ದರು.
ಚರ್ಚ್ ಈ ಹೇಳಿಕೆಯನ್ನು ನಂಬಿ ಇದನ್ನು ಪ್ರಚಾರ ಮಾಡಿತ್ತು. ಆಸ್ಟ್ರೇಲಿಯಾದ ಡ್ರಗ್ಸ್ ರೆಗ್ಯುಲೇಟರ್ ಆ್ಯಂಡ್ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಕೋವಿಡ್ -19, ಎಚ್‌ಐವಿ ಮತ್ತು ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳ ಚಿಕಿತ್ಸೆಗೆ ಈ ಕೊಳಚೆ ನಿವಾರಕ ಔಷಧವಾಗದು, ಮುಖ್ಯವಾಗಿ ಕೋವಿಡ್ ಸೋಂಕನ್ನು ತಡೆಗಟ್ಟುವುದರೊಂದಿಗೆ ಗುಣಮುಖರಾಗುವಂತೆ ಮಾಡಲಿದೆ ಎಂದು ಎಂಎಂಎಸ್ ಸುದ್ದಿತಾಣ ತಪ್ಪು ಮಾಹಿತಿಯನ್ನು ರವಾನಿಸುತ್ತಿದೆ ಎಂದು ಹೇಳಿ ಚರ್ಚ್‌ಗೆ 1,50,000 ಡಾಲರ್ ದಂಡ ವಿಧಿಸಿದೆ.