Advertisement

ಭಾರತೀಯ ತಂಡಕ್ಕೆ ಪ್ರಯಾಣ ವಿನಾಯಿತಿ ಸಾಧ್ಯತೆ

01:56 AM Apr 26, 2020 | Sriram |

ಮೆಲ್ಬರ್ನ್: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಒಂದು ವೇಳೆ ಭಾರತೀಯ ಕ್ರಿಕೆಟ್‌ ತಂಡದ ಆಸ್ಟ್ರೇಲಿಯ ಪ್ರವಾಸ ರದ್ದಾದರೆ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಗೆ 300 ಮಿಲಿಯನ್‌ ಆಸ್ಟ್ರೇಲಿಯನ್‌ ಡಾಲರ್‌ ನಷ್ಟವಾಗುವ ಸಾಧ್ಯತೆಯಿದೆ. ಈ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಆಸ್ಟ್ರೇಲಿಯ ಸರಕಾರವು ಮುಂಬರುವ ಪ್ರವಾಸದ ವೇಳೆ ಭಾರತೀಯ ಕ್ರಿಕೆಟ್‌ ತಂಡಕ್ಕೆ ಪ್ರಯಾಣ ವಿನಾಯಿತಿ ನೀಡುವ ಸಾಧ್ಯತೆಯಿದೆ.

Advertisement

ವಿಶ್ವದಾದ್ಯಂತ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕ್ರಿಕೆಟ್‌ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ಕ್ರಿಕೆಟ್‌ ಆಸ್ಟ್ರೇಲಿಯ ಅಪಾರ ಆರ್ಥಿಕ ಒತ್ತಡದಲ್ಲಿದೆ ಮಾತ್ರವಲ್ಲದೇ ಶೇಕಡಾ 80ರಷ್ಟು ಸಿಬಂದಿಗಳನ್ನು ಈಗಾಗಲೇ ವಜಾಗೊಳಿಸಿದೆ. ಒಂದು ವೇಳೆ ಮುಂಬರುವ ಡಿಸೆಂಬರ್‌-ಜನವರಿಯಲ್ಲಿ ನಡೆಯಲಿರುವ ಭಾರತದ ನಾಲ್ಕು ಟೆಸ್ಟ್‌ಗಳ ಪ್ರವಾಸ ನಡೆದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next