Advertisement

ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !

06:05 PM Nov 27, 2020 | Mithun PG |

ಸಿಡ್ನಿ: ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದೆ. ಆಸೀಸ್ ನೀಡದ 374 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬ್ಲೂ ಬಾಯ್ಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 66 ರನ್ ಗಳಿಂದ ಸೋಲುಂಡಿದೆ.

Advertisement

ಹಾರ್ದಿಕ್ ಪಾಂಡ್ಯ ಅಬ್ಬರ ಮತ್ತು ಶಿಖರ್ ಧವನ್ ಮನಮೋಹಕ ಆಟದ ಹೊರತಾಗಿಯೂ ಕೊಹ್ಲಿ ಪಡೆ  ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು.

374 ರನ್ ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಉತ್ತಮ ಆರಂಭ ದೊರಕಿತು. ಓಪನರ್ ಗಳಾದ ಮಾಯಾಂಕ್ ಅಗರವಾಲ್ ಮತ್ತು ಶಿಖರ್ ಧವನ್ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್ ಗೆ ಅರ್ಧಶತಕದ ಜೊತೆಯಾಟ ನಡೆಸಿತು. ಈ ವೇಳೆ 1 ಸಿಕ್ಸ್ ಹಾಗೂ 4 ಬೌಂಡರಿಗಳ ನೆರವಿನಿಂದ ಆಕರ್ಷಕವಾಗಿ ಆಡುತ್ತಿದ್ದ ಮಯಾಂಕ್, ಹೆಜಲ್ ವುಡ್ ಎಸೆತದಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚಿತ್ತರು.

ನಂತರ ಧವನ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಕೂಡ ಭರವಸೆಯ ಆಟವಾಡಿದರು. 1 ಸಿಕ್ಸ್ ಹಾಗೂ 2 ಫೋರ್ ಗಳ ಮೂಲಕ 21 ರನ್ ಸಿಡಿಸಿದ್ದ ವೇಳೆ ವಿರಾಟ್, ಹೆಜಲ್ ವುಡ್ ಎಸೆತದಲ್ಲಿ ಫಿಂಚ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಶ್ರೇಯಸ್ ಅಯ್ಯರ್ ಕೇವಲ ಎರಡು ರನ್ ಗಳಿಸಿ ಬಂದ ದಾರಿಯಲ್ಲೇ ಹಿಂದಿರುಗಿದರು. ಭರವಸೆಯ ಆಟಗಾರ ಕೆ.ಎಲ್ ರಾಹುಲ್ 12 ರನ್ ಗಳಿಸಿದರೇ, ಜಡೇಜಾ 25 ರನ್ ಗಳಿಸಿ ಪೆವಿಲಿಯನ್ ಸೇರಿದರು.

Advertisement

ಇದನ್ನೂ ಓದಿ: ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

ಈ ವೇಳೆ ಧವನ್ ಜೊತೆಯಾದ ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟವಾಡಿ ಪಂದ್ಯದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಧವನ್ ಹಾಗೂ ಪಾಂಡ್ಯ ಇಬ್ಬರು ಕೂಡ ಅರ್ಧಶತಕ ಸಿಡಿಸಿ ಮಿಂಚಿದರು.  10 ಬೌಂಡರಿಗಳ ಮೂಲಕ 74 ರನ್ ಸಿಡಿಸಿದ್ದ ಧವನ್, ಜಾಂಪಾ ಬೌಲಿಂಗ್ ನಲ್ಲಿ ಸ್ಟಾರ್ಕ್ ಗೆ ಕ್ಯಾಚ್ ನೀಡಿದರು. ಶತಕದ ಸನಿಹದಲ್ಲಿದ್ದ ಪಾಂಡ್ಯ(90) ಕೂಡ  ಜಾಂಪಾ ಎಸೆತದಲ್ಲಿ ಸ್ಟಾರ್ಕ್ ಗೆ ಕ್ಯಾಚ್ ನೀಡಿ ಹೊರನಡೆದರು.

ಅಂತಿಮವಾಗಿ ನವದೀಪ್ ಸೈನಿ (29) ಹಾಗೂ ಮೊಹಮ್ಮದ ಶಮಿ (13) ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಭಾರತ ನಿಗದಿತ 50  ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಸೀಸ್ ಪರ  ಆ್ಯಡಂ ಜಾಂಪಾ 4 ವಿಕೆಟ್ ಪಡೆದು ಮಿಂಚಿದರೇ, ಹೆಜಲ್ ವುಡ್ 3 ವಿಕೆಟ್ ಉರುಳಿಸಿದರು. ಸ್ಟಾರ್ಕ್ 1 ವಿಕೆಟ್ ಪಡೆದರು.

ಇದನ್ನೂ ಓದಿ: ನಮ್ಮ ಸರಕಾರಕ್ಕೆ ಮಹಾರಾಷ್ಟ್ರ ಜನತೆಯ ಆಶೀರ್ವಾದವಿದೆ! ED, CBIನಿಂದ ಬೆದರಿಸಲಾಗದು: ಉದ್ಧವ್‌

Advertisement

Udayavani is now on Telegram. Click here to join our channel and stay updated with the latest news.

Next