Advertisement
1947-48ರಲ್ಲಿ ಭಾರತ ಕ್ರಿಕೆಟ್ ತಂಡ ಲಾಲಾ ಅಮರ್ ನಾಥ್ ನಾಯಕತ್ವದಲ್ಲಿ ಪ್ರಪ್ರಥಮ ಆಸ್ಟ್ರೇಲಿಯ ಟೆಸ್ಟ್ ಕ್ರಿಕೆಟ್ ಪ್ರವಾಸ ಕೈಗೊಂಡಿತ್ತು. ಅಲ್ಲಿಂದ ಈ ತನಕ ಭಾರತ, ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಲು 11 ಸಲ ಪ್ರಯತ್ನಿಸಿ ವಿಫಲವಾಗಿತ್ತು. ಇದೀಗ ಇದೇ ಮೊದಲ ಬಾರಿಗೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ , ಭಾರತ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಐತಿಹಾಸಿಕ ದಾಖಲೆಯನ್ನು ಮಾಡಿದೆ.
Related Articles
ವಿಶೇಷದ ಮಾತೆಂದರೆ ಇದೇ ಸಿಡ್ನಿ ಕ್ರಿಕೆಟ್ ಅಂಗಣದಲ್ಲ ಕೊಹ್ಲಿಗೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಶಾಶ್ವತ ನಾಯಕತ್ವವನ್ನು ನೀಡಲಾಗಿತ್ತು. ಇಂದು ಅದೇ ಸಿಡ್ಡಿ ಅಂಗಣದಲ್ಲಿ ಕೊಹ್ಲಿ ಆಸೀಸ್ ವಿರುದ್ಧ ಅದರ ನೆಲದಲ್ಲೇ ಮೊತ್ತ ಮೊದಲ ಟೆಸ್ಟ್ ಸರಣಿಯನ್ನು ಭಾರತಕ್ಕೆ ಗೆದ್ದುಕೊಡುವ ಐತಿಹಾಸಿಕ ಸಾಧನೆಯನ್ನು ದಾಖಲಿಸಿದರು.
Advertisement
ಪಂದ್ಯ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಚೇತೇಶ್ವರ ಪೂಜಾರ ಅವರ ನಿರ್ವಹಣೆಯನ್ನು ಬಹುವಾಗಿ ಕೊಂಡಾಡಿದ ಕೊಹ್ಲಿ, ವೇಗದ ಎಸೆಗಾರ ಜಸ್‌ಪ್ರೀತ್ ಬುಮ್ರಾ ಅವರ ಸಾಧನೆಯನ್ನು ಕೂಡ ಪ್ರಶಂಸಿಸಿದರು.
ಇದೇ ರೀತಿ ಉಜ್ವಲ ಬ್ಯಾಟಿಂಗ್ ಮೆರೆದ ಮಾಯಾಂಕ್ ಅಗರ್‌ವಾಲ್ ಮತ್ತು ರಿಷ್ ಪಂತ್ (ಅನುಕ್ರಮವಾಗಿ 77 ಮತ್ತು 159) ಅವರನ್ನು ಕೂಡ ಕೊಹ್ಲಿ ಹೊಗಳಿದರು. ಇವರಿಂದಾಗಿಯೇ ಭಾರತ ಸಿಡ್ನಿ ಟೆಸ್ಟ್‌ನಲ್ಲಿ 7 ವಿಕೆಟ್ ನಷ್ಟೆ 622 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.