Advertisement

ವನಿತಾ ಆ್ಯಶಸ್‌ ಉಳಿಸಿಕೊಂಡ ಆಸ್ಟ್ರೇಲಿಯ

11:36 PM Jul 17, 2023 | Team Udayavani |

ಸೌತಾಂಪ್ಟನ್: ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ 3 ರನ್‌ ಅಂತರದ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯ ವನಿತಾ ತಂಡ ಆ್ಯಶಸ್‌ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 283 ರನ್‌ ಬಾರಿಸಿದರೆ, ಇಂಗ್ಲೆಂಡ್‌ 7 ವಿಕೆಟಿಗೆ 279 ರನ್‌ ಬಾರಿಸಿ ಸ್ವಲ್ಪದರಲ್ಲೇ ಗೆಲುವನ್ನು ತಪ್ಪಿಸಿಕೊಂಡಿತು. ಆಗ ಮಧ್ಯಮ ಕ್ರಮಾಂಕದ ಬ್ಯಾಟರ್‌ ನಥಾಲಿ ಸ್ಕಿವರ್‌ ಬ್ರಂಟ್‌ 111 ರನ್‌ ಮತ್ತು ಸಾರಾ ಗ್ಲೆನ್‌ 22 ರನ್‌ ಮಾಡಿ ಅಜೇಯರಾಗಿದ್ದರು.

ಕೊನೆಯ 5 ಓವರ್‌ಗಳಲ್ಲಿ 38 ರನ್‌, ಅಂತಿಮ ಓವರ್‌ನಲ್ಲಿ 15 ರನ್‌ ತೆಗೆಯುವ ಗುರಿ ಇಂಗ್ಲೆಂಡ್‌ಗೆ ಎದುರಾಗಿತ್ತು. ಬ್ರಂಟ್‌ ಮತ್ತು ಸಾರಾ ಗ್ಲೆನ್‌ ಕೊನೆಯ ತನಕ ಬ್ಯಾಟಿಂಗ್‌ ಕಾಯ್ದುಕೊಂಡು ಬಂದರೂ ತಂಡವನ್ನು ದಡ ಸೇರಿಸಲು ವಿಫ‌ಲರಾದರು.
ಬ್ರಂಟ್‌ ಅವರ 111 ರನ್‌ 99 ಎಸೆತಗಳಿಂದ ದಾಖಲಾಯಿತು. ಹೊಡೆದದ್ದು 10 ಬೌಂಡರಿ. ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಂಟ್‌ 60, ಕೀಪರ್‌ ಅÂಮಿ ಜೋನ್ಸ್‌ 37 ರನ್‌ ಹೊಡೆದರು.

ಆಸೀಸ್‌ ಸರದಿಯಲ್ಲಿ ಎಲ್ಲಿಸ್‌ ಪೆರ್ರಿ 91 ರನ್‌ ಬಾರಿಸಿ ಮಿಂಚಿದರು (124 ಎಸೆತ, 9 ಬೌಂಡರಿ, 1 ಸಿಕ್ಸರ್‌). ಅನ್ನಾಬೆಲ್‌ ಸದರ್‌ಲ್ಯಾಂಡ್‌ 50, ಆ್ಯಶ್ಲಿ ಗಾರ್ಡನರ್‌ 33 ಹಾಗೂ ಜಾರ್ಜಿಯಾ ವೇರ್‌ಹ್ಯಾಮ್‌ ಅಜೇಯ 37 ರನ್‌ ಹೊಡೆದು ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.
ಇದು “ಮಲ್ಟಿ ಫಾರ್ಮೆಟ್‌’ ಸರಣಿ ಆಗಿದ್ದು, ಆಸ್ಟ್ರೇಲಿಯ 8-6 ಅಂಕಗಳ ಮುನ್ನಡೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next