Advertisement

Australia; ಮದುವೆಗೆ ಬಾರದ್ದಕ್ಕೆ ಅತಿಥಿಗಳಿಗೆ ದಂಡ!

01:02 AM Dec 19, 2023 | Team Udayavani |

ಕ್ಯಾನ್ಬೆರಾ: ಮದುವೆಗೆ ಬರುತ್ತೇವೆಂದು ಮಾತುಕೊಟ್ಟು, ಅನಂತರ ಬರಲಾಗು ವುದಿಲ್ಲ ಎಂದು ನೆಪ ಹೇಳಿದ ಅತಿಥಿಗಳಿಗೆ “ನೋ ಶೋ ಫೀಸ್‌’ ವಿಧಿಸಲು ಆಸ್ಟ್ರೇಲಿಯದ ವಧು ಒಬ್ಬರು ಮುಂದಾಗಿದ್ದಾರೆ. ಈ ವಿಚಾರ ಇದೀಗ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. “ಶೀ ಇಸ್‌ ಆನ್‌ ದಿ ಮನಿ’ ಪಾಡ್‌ಕಾಸ್ಟ್‌ನಲ್ಲಿ ವಧು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅತಿಥಿಗಳ ವ್ಯವಸ್ಥೆಗೆಂದು 12,426 ಡಾಲರ್‌ (10.32 ಲಕ್ಷ ರೂ) ಗಳನ್ನು ಖರ್ಚು ಮಾಡಿ ವಿವಾ ಹ ಸ್ಥಳವನ್ನು ವಧು ಬುಕ್‌ ಮಾಡಿದ್ದಾರೆ. 6 ತಿಂಗಳ ಹಿಂದೆಯೇ ಅತಿಥಿಗಳ ಆಗಮನ ದೃಢಪಡಿಸಿಕೊಂಡಿದ್ದಾರೆ. ಆದಾಗ್ಯೂ ಮದುವೆಗೆ ಬರುತ್ತಿಲ್ಲವೆಂದು 10 ಅತಿಥಿಗಳು ಸಬೂಬು ನೀಡಿದ ಹಿನ್ನೆಲೆ ಅವರಿಗೆ “ನೋ ಶೋ ಫೀಸ್‌’ ವಿಧಿಸಲು ವಧು ಯೋಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next