ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಬೌಲಿಂಗ್ ದಾಳಿಯು ಆಸ್ಟ್ರೇಲಿಯಾದ ಬೌಲಿಂಗ್ ಲೈನಪ್ ಗೆ ಸಮನಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಹೇಳಿದ್ದಾರೆ.
ಜೂನ್ 7ರಂದು ಆಸ್ಟ್ರೇಲಿಯಾ ಮತ್ತ ಭಾರತ ತಂಡಗಳು ಓವಲ್ ಸ್ಟೇಡಿಯಂನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯದ ಬ್ಯಾಟರ್ ಗಳಿಗೆ ಬೆದರಿಕೆ ಒಡ್ಡುತ್ತಾರೆ ಎಂದು ಚಾಪೆಲ್ ನಂಬಿದ್ದಾರೆ.
“ಭಾರತೀಯ ಬೌಲಿಂಗ್ ದಾಳಿಯು ಆಸ್ಟ್ರೇಲಿಯಾಕ್ಕೆ ಕಡಿಮೆಯಿಲ್ಲ ಎಂದು ನಾನು ಭಾವಿಸುತ್ತೇನೆ. ಶಮಿ ಉತ್ತಮ ಬೌಲರ್ ಮತ್ತು ಸಿರಾಜ್ ಐಪಿಎಲ್ ನಲ್ಲಿ ಉತ್ತಮ ಲಯದಲ್ಲಿದ್ದಾರೆ. ಅವರು ಆಸ್ಟ್ರೇಲಿಯನ್ನರು ಭಾರತೀಯರಿಗೆ ಎಷ್ಟು ಕಷ್ಟವನ್ನು ಒಡ್ಡುತ್ತಾರೆ” ಎಂದರು.
ಭಾರತ ತಂಡವು ಇಬ್ಬರು ಸ್ಪಿನ್ನರ್ ಗಳೊಂದಿಗೆ ಆಡಬೇಕು ಎಂದು ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.
“ನೀವು ನನ್ನನ್ನು ಕೇಳಿದರೆ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಹೋಗಬೇಕು ಎಂದು ನಾನು ಭಾವಿಸುತ್ತೇನೆ. ಅಶ್ವಿನ್ ಮತ್ತು ಜಡೇಜಾ ಇಬ್ಬರೂ ಅದ್ಭುತವಾಗಿದ್ದಾರೆ. ನೀವು ನಿಮ್ಮ ಅತ್ಯುತ್ತಮ ಬೌಲರ್ ಗಳೊಂದಿಗೆ ಹೋಗಬೇಕಾಗಿದೆ. ಜಡೇಜಾ ಹೆಚ್ಚು ವಿಕೆಟ್ ಗಳನ್ನು ತೆಗೆದುಕೊಳ್ಳದಿದ್ದರೂ ಸಹ ಅವರು ರನ್ ಬಿಟ್ಟುಕೊಡುವುದಿಲ್ಲ. ಅದು ವೇಗದ ಬೌಲರ್ ಗಳಿಗೆ ಅಗತ್ಯವಾದ ಬಲ ನೀಡುತ್ತದೆ. ಅಲ್ಲದೆ ಜಡೇಜಾ ಅವರ ಬ್ಯಾಟಿಂಗ್ ಕಳೆದ ಕೆಲವು ವರ್ಷಗಳಲ್ಲಿ ಟೆಸ್ಟ್ ಮಟ್ಟದಲ್ಲಿ ಅದ್ಭುತವಾಗಿದೆ. ಅಶ್ವಿನ್‌ಗೆ ಬಂದರೆ ಅವರು ಈ ಪೀಳಿಗೆಯ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆಳವಾಗಿ ಯೋಚಿಸುತ್ತಾರೆ” ಎಂದರು.