Advertisement
ಆಕ್ಲೆಂಡ್‌ನಲ್ಲಿ ನಡೆದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 6 ವಿಕೆಟಿಗೆ 243 ರನ್ ಪೇರಿಸಿದರೆ, ಆಸ್ಟ್ರೇಲಿಯ 18.5 ಓವರ್‌ಗಳಲ್ಲಿ 5ಕ್ಕೆ 245 ರನ್ ಬಾರಿಸಿ ಸಂಭ್ರಮಿಸಿತು.
Related Articles
Advertisement
ಗಪ್ಟಿಲ್, ಮುನ್ರೊ ಮಿಂಚಿನಾಟನ್ಯೂಜಿಲ್ಯಾಂಡಿಗೆ ಮಾರ್ಟಿನ್ ಗಪ್ಟಿಲ್-ಕಾಲಿನ್ ಮುನ್ರೊ ಮಿಂಚಿನ ಆರಂಭ ಒದಗಿಸಿದ್ದರು. ಕೇವಲ 10.4 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 132 ರನ್ ಸೂರೆಗೈದು ಮೆರೆದರು. ಈ ಬ್ಯಾಟಿಂಗ್ ಅಬ್ಬರದ ವೇಳೆ ಗಪ್ಟಿಲ್ 105 ರನ್, ಮುನ್ರೊ 76 ರನ್ ಹೊಡೆದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವಿತ್ತ ಗಪ್ಟಿಲ್ ಕೇವಲ 49 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಒಟ್ಟು 54 ಎಸೆತಗಳಲ್ಲಿ 105 ರನ್ ಪೇರಿಸಿದರು. ಇದರಲ್ಲಿ 9 ಪ್ರಚಂಡ ಸಿಕ್ಸರ್ ಹಾಗೂ 6 ಬೌಂಡರಿ ಒಳಗೊಂಡಿತ್ತು. ಇದು ಗಪ್ಟಿಲ್ ಅವರ 2ನೇ ಟಿ20 ಅಂತಾರಾಷ್ಟ್ರೀಯ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. ಗಪ್ಟಿಲ್ 17ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಕಾಂಗರೂ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. ಸರ್ವಾಧಿಕ ರನ್ ದಾಖಲೆ
ಈ ಬ್ಯಾಟಿಂಗ್ ಸಾಹಸದ ವೇಳೆ ಗಪ್ಟಿಲ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸರ್ವಾಧಿಕ ರನ್ ಪೇರಿಸಿದ ವಿಶ್ವದಾಖಲೆಗೂ ಪಾತ್ರರಾದರು (73 ಪಂದ್ಯ, 2,145 ರನ್). ತಮ್ಮದೇ ದೇಶದ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದರು (71 ಪಂದ್ಯ, 2,140 ರನ್). 1,956 ರನ್ ಗಳಿಸಿರುವ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಮುನ್ರೊ ಬರೀ 33 ಎಸೆತಗಳಿಂದ 76 ರನ್ ಚಚ್ಚಿದರು. ಸಿಡಿಸಿದ್ದು 6 ಬೌಂಡರಿ ಹಾಗೂ 6 ಸಿಕ್ಸರ್. ಆದರೆ ಇವರ ಸಿಡಿಲಬ್ಬರದ ಆಟದ ಹೊರತಾಗಿಯೂ ತಂಡ ಸೋಲು ಕಾಣಬೇಕಾಯಿತು. ಆಸ್ಟ್ರೇಲಿಯವೀಗ ಸತತ 4 ಗೆಲುವಿನೊಂದಿಗೆ ಅಜೇಯ ಓಟ ಬೆಳೆಸಿದೆ. ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-6 ವಿಕೆಟಿಗೆ 243 (ಗಪ್ಟಿಲ್ 105, ಮುನ್ರೊ 76, ರಿಚರ್ಡ್‌ಸನ್ 40ಕ್ಕೆ 2, ಟೈ 64ಕ್ಕೆ 2). ಆಸ್ಟ್ರೇಲಿಯ-18.5 ಓವರ್‌ಗಳಲ್ಲಿ 5 ವಿಕೆಟಿಗೆ 245 (ಶಾರ್ಟ್ 76, ವಾರ್ನರ್ 59, ಫಿಂಚ್ ಅಜೇಯ 36, ಮ್ಯಾಕ್ಸ್‌ವೆಲ್ 31, ಸೋಧಿ 35ಕ್ಕೆ 1, ಬೌಲ್ಟ್ 42ಕ್ಕೆ 1). ಪಂದ್ಯಶ್ರೇಷ್ಠ: ಡಿ’ಆರ್ಸಿ ಶಾರ್ಟ್.