Advertisement

ಆಸ್ಟ್ರೇಲಿಯಾಕ್ಕೆ ಚಿನ್ನ, ಅರ್ಜೆಂಟೀನಾಗೆ ಬೆಳ್ಳಿ

06:40 AM Dec 11, 2017 | Team Udayavani |

ಭುವನೇಶ್ವರ: ಹಾಕಿ ವಿಶ್ವ ಲೀಗ್‌ ಫೈನಲ್‌ ಕೂಟದ ಅಂತಿಮ ಕದನದಲ್ಲಿ ಅರ್ಜೆಂಟೀನಾ ತಂಡವನ್ನು 1-2 ಗೋಲುಗಳಿಂದ ಮಣಿಸಿದ ಆಸ್ಟ್ರೇಲಿಯಾ ಚಿನ್ನದ ಪದಕ ಗೆದ್ದುಕೊಂಡಿದೆ.

Advertisement

ಏಕೈಕ ಗೋಲುಗಳಿಸಿದ ಅರ್ಜೆಂಟೀನಾ ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿತು. ಆಸ್ಟ್ರೇಲಿಯಾ ಪರ ಬ್ಲೆಕ್‌ ಕವರ್ ಹಾಗೂ ಜೆರ್ಮಿ ಹಾವರ್ಡ್‌ ಗೋಲು ದಾಖಲಿಸಿ ಗೆಲುವಿನ ರೂವಾರಿಗಳಾದರು. ಪಂದ್ಯದ 17ನೇ ನಿಮಿಷದಲ್ಲಿ ಆಸೀಸ್‌ ಪರ ಜೆರ್ಮಿ ಹಾವರ್ಡ್‌ ಮೊದಲ ಗೋಲು ದಾಖಲಿಸಿದರು.

ಆಸೀಸ್‌ಗೆ 1-0 ಗೋಲಿನ ಮುನ್ನಡೆ ತಂದುಕೊಟ್ಟರು. ಆದರೆ ಇದಕ್ಕೆ ಅರ್ಜೆಂಟೀನಾ ತಂಡ ಆಗಸ್ಟಿನ್‌ ಬುಗಾಲೊ ಮೂಲಕ ಗೋಲು ದಾಖಲಿಸಿ 1-1 ಸಮಸಾಧಿಸಿಕೊಂಡಿತು. ಆದರೆ ಪಂದ್ಯ ಮುಗಿಯಲು 3 ನಿಮಿಷ ಬಾಕಿ ಇದ್ದಾಗ ಬ್ಲೆಕ್‌ ಕವರ್  ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು. ತಂಡಕ್ಕೆ 2-0 ಅಂತರದ ಜಯ ತಂದುಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next