ಬೆಂಗಳೂರು:ಜ್ಞಾನವನ್ನು ಉದ್ದೀಪಿಸುವ ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣರಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಹಿಜಾಬ್ ವಿವಾದ: ಹೈಕೋರ್ಟ್ ನಲ್ಲಿ ಒಂದೂವರೆ ಗಂಟೆ ಕಾಲ ವಾದ- ಪ್ರತಿವಾದ; ವಿಚಾರಣೆ ಮುಂದೂಡಿಕೆ
ಸುದ್ದಿಗಾರರ ಜತೆ ಮಾತನಾಡಿದ ಅವರು ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆಯ ಕೇಂದ್ರ ಬಿಂದುಗಳು.ರಾಷ್ಟ್ರದ ಆಸ್ತಿಯಾಗಬೇಕಾದ ವಿಧ್ಯಾರ್ಥಿಗಳು ಮತೀಯ ಶಕ್ತಿಗಳ ಕೈಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಅಸ್ತ್ರಗಳಾಗದಂತೆ ಪೋಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಶೈಕ್ಷಣಿಕ ಕೇಂದ್ರಗಳು, ವಿದ್ಯೆ ಕಲಿಯುವ ಹಾಗೂ ಭೋದನೆಯ ದೇಗುಲ ಗಳಾಗಿಯೇ ಉಳಿಯಬೇಕು. ಶಾಲಾ ಕಾಲೇಜುಗಳಲ್ಲಿ ಶಾಂತಿಮಯ ವಾತಾವರಣ ಕಾಪಾಡಲು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಮನವಿ ಮಾಡಿದ್ದಾರೆ.
ಉಡುಪಿ ಕಾಲೇಜಿನಲ್ಲಿ ಸೃಷ್ಟಿಯಾಗಿದ್ದ ಹಿಜಾಬ್ ವಿವಾದ ಈಗ ರಾಜ್ಯಾದ್ಯಂತ ವಿಸ್ತರಣೆಯಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಪೋಷಕರ ಬಳಿ ಮನವಿ ಮಾಡಿದ್ದಾರೆ.