Advertisement

ಮೋದಿಗಾಗಿ ಸಮೋಸಾ, ಚಟ್ನಿ ಮಾಡಿದ ಆಸೀಸ್‌ ಪ್ರಧಾನಿ

11:11 AM Jun 01, 2020 | mahesh |

ಕ್ಯಾನ್‌ಬೆರಾ: ಲಾಕ್‌ಡೌನ್‌ನ ಬಿಡುವಿನಲ್ಲಿ ಎಲ್ಲರೂ ಅಡುಗೆಮನೆಯಲ್ಲಿ ಒಂದಲ್ಲಾ ಒಂದು ಪಾಕಪ್ರಯೋಗ ಮಾಡಿದ್ದಾರೆ. ಇದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಕೂಡ ಹೊರತಲ್ಲ. ಅವರು ಸಮೋಸಾ, ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿ, ಅದರ ಫೋಟೋಗಳನ್ನು ಟ್ವಿಟ್ಟರಿನಲ್ಲಿ ಹಂಚಿ ಕೊಂಡಿದ್ದಾರೆ. “ರವಿವಾರ ವಿಶೇಷವಾಗಿ ವೆಜಿಟೇರಿಯನ್‌ ಸಮೋಸಾ, ಮಾವಿನ ಕಾಯಿ ಚಟ್ನಿಯನ್ನು ನಾನೇ ಖುದ್ದಾಗಿ ತಯಾರಿಸಿದ್ದೇನೆ. ಮೋದಿ ಅವರೂ ಸಸ್ಯಾಹಾರಿ. ಇದನ್ನು ಮೋದಿ ಜೊತೆಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ’ ಎಂದು ಸ್ಕಾಟ್‌ ಹೇಳಿಕೊಂಡಿದ್ದಾರೆ. ಜೂ.4ರಂದು ಪ್ರಧಾನಿ ಮೋದಿ - ಸ್ಕಾಟ್‌ ನಡುವೆ ವರ್ಚುವಲ್‌ ಸಭೆ ಆಯೋಜನೆಗೊಂಡಿದೆ. ಅದಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ “ಎರಡೂ ದೇಶಗಳು ಹಿಂದೂ ಮಹಾಸಾಗರದಿಂದ ಸಂಪರ್ಕ ಬೆಸೆದುಕೊಂಡಿವೆ ಮತ್ತು ಸಮೋಸಾದಿಂದ ಒಂದೇ ಎಂಬ ಭಾವನೆಯನ್ನು ಹೊಂದಿವೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಇತ್ತೀಚೆಗಷ್ಟೇ ಚೀನದ ಮಾಧ್ಯಮಗಳಿಂದ “ಅಮೆರಿಕದ ಸಾಕು ನಾಯಿ’ ಎಂದು ನಿಂದಿಸಿಕೊಂಡಿರುವ ಆಸ್ಟ್ರೇಲಿಯಾ, ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next