Advertisement
ಜೀವನಶ್ರೇಷ್ಠ 4ನೇ ರ್‍ಯಾಂಕಿಂಗ್ ಹೊಂದಿರುವ ಸೋಫಿಯಾ ಕೆನಿನ್ ಕಳೆದ ವರ್ಷದ “ಮೆಲ್ಬರ್ನ್ ಪಾರ್ಕ್’ ಫೈನಲ್‌ನಲ್ಲಿ ಗಾರ್ಬಿನ್ ಮುಗುರುಜಾ ಅವರನ್ನು ಮಣಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎತ್ತಿದ್ದರು. ಕೆನಿನ್ ಸೋಲಿನೊಂದಿಗೆ ಟಾಪ್-10 ರ್‍ಯಾಂಕಿಂಗ್‌ನ ಮೂವರು ಕೂಟದಿಂದ ಹೊರಬಿದ್ದಂತಾಯಿತು. ಉಳಿದಿಬ್ಬರೆಂದರೆ ಬಿಯಾಂಕಾ ಆ್ಯಂಡ್ರಿಸ್ಕೂ (8) ಮತ್ತು ಪೆಟ್ರಾ ಕ್ವಿಟೋವಾ (9). ಇನ್ನೊಂದೆಡೆ ಕಯಾ ಕನೆಪಿ ಟಾಪ್-10 ಆಟಗಾರರೆದುರು 13-29 ಗೆಲುವಿನ ದಾಖಲೆ ನಿರ್ಮಿಸಿದರು.
ವಿಶ್ವದ ನಂ.1 ಆಟಗಾರ್ತಿಯಾಗಿರುವ ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ ತಮ್ಮದೇ ದೇಶದ ಡರಿಯಾ ಗವ್ರಿಲೋವಾ ವಿರುದ್ಧ 6-1, 7-6 (9-7) ಅಂತರದ ಜಯ ಸಾಧಿಸಿ ದ್ವಿತೀಯ ಸುತ್ತು ದಾಟಿದರು. ಮಾಜಿ ನಂ.1 ಆಟಗಾರ್ತಿ, ಜೆಕೊಸ್ಲೊವಾಕಿಯಾದ ಕ್ಯಾರೋಲಿನಾ ಪ್ಲಿಸ್ಕೋವಾ 7-5, 6-2 ಅಂತರದಿಂದ ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು ಮಣಿಸಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಶೆಲ್ಲಿ ರೋಜರ್ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ವಿರುದ್ಧ 6-2, 6-3ರಿಂದ ಗೆದ್ದು ಬಂದರು.
Related Articles
Advertisement
ಲೋಪೆಜ್ ದಾಖಲೆಪುರುಷರ ವಿಭಾಗದ ಅತೀ ಹಿರಿಯ ಆಟಗಾರ, ಸ್ಪೇನಿನ 39 ವರ್ಷದ ಫೆಲಿಶಿಯಾನೊ ಲೋಪೆಜ್ 5 ಸೆಟ್‌ಗಳ ಜಿದ್ದಾಜಿದ್ದಿ ಕಾದಾಟದ ಬಳಿಕ ಇಟಲಿಯ ಲೊರೆಂಜೊ ಸೊನೆಗೊ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಅಂತರ 5-7, 3-6, 6-3, 7-5, 6-4. ಇದು ಫೆಲಿಶಿಯಾನೊ ಅವರ ಸತತ 75ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಸ್ಪರ್ಧೆಯಾಗಿದ್ದು, ಇದೊಂದು ದಾಖಲೆಯಾಗಿದೆ. ಮೂರಕ್ಕೇರಿದ ನಡಾಲ್
ಕೂಟದ ನೆಚ್ಚಿನ ಆಟಗಾರ ರಫೆಲ್ ನಡಾಲ್ ಅಮೆರಿಕದ ಮೈಕಲ್ ಮೋಹ್ ವಿರುದ್ಧ 6-1, 6-4, 6-2 ಅಂತರದಿಂದ ಮಣಿಸಿ 3ನೇ ಸುತ್ತು ತಲುಪಿದರು. “ಆಲ್ ಇಟಾಲಿಯನ್’ ಸ್ಪರ್ಧೆಯೊಂದರಲ್ಲಿ ಫ್ಯಾಬಿಯೊ ಫೊಗಿನಿ 4-6, 6-2, 2-6, 6-3, 7-6 (14-12) ಅಂತರದಿಂದ ಸಾಲ್ವಟೋರ್ ಕಾರುಸೊ ವಿರುದ್ಧ ಗೆದ್ದು ಬಂದರು. ಗ್ರೀಸ್‌ನ ಸ್ಟೆಫನಸ್ ಸಿಸಿಪಸ್ ಪಟ್ಟು ಸಡಿಲಿಸದೆ ಹೋರಾಡಿ ಆತಿಥೇಯ ದೇಶದ ಥನಾಸಿ ಕೋಕಿನಾಕಿಸ್ ವಿರುದ್ಧ 6-7 (5-7), 6-4, 6-1, 6-7 (5-7), 6-4 ಅಂತರದ ಗೆಲುವು ಸಾಧಿಸಿದರು.