Advertisement
ಆಕಸ್ ಪದ ಈಗ ಜಗತ್ತಿನ ರಾಜಕೀಯ ವಿದ್ಯಮಾನದಲ್ಲಿ ಕೇಳಿಬರುತ್ತಿದೆ. ಹಾಗೆಂದರೇನು?:
Advertisement
ಹಾಗಾದರೆ ಆಕಸ್ ಉದ್ದೇಶವೇನು?:
ಇದುವರೆಗೆ ಅಮೆರಿಕವಾಗಲಿ, ಯುಕೆಯಾಗಲಿ ಅಥವಾ ಆಸ್ಟ್ರೇಲಿಯವಾಗಲಿ ಈ ಒಕ್ಕೂಟದ ಉದ್ದೇಶವನ್ನು ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಮೂಲಗಳು ಹೇಳಿದಂತೆ ಈ ಒಕ್ಕೂಟದ ಪ್ರಮುಖ ಉದ್ದೇಶವೇ ಚೀನವನ್ನು ಮಣಿಸುವುದು. ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಚೀನ ನಡೆಸುತ್ತಿರುವ ಆಟೋಟಗಳನ್ನು ನಿಲ್ಲಿಸುವುದು. ಅಲ್ಲದೇ ಚೀನವೇ ಈ ಒಕ್ಕೂಟದ ಬಗ್ಗೆ ಮಾತನಾಡಿದ್ದು, ತನ್ನನ್ನು ಗಮನದಲ್ಲಿಟ್ಟುಕೊಂಡೇ ಈ ಒಕ್ಕೂಟ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ಅಲ್ಲದೆ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿನ ಶಾಂತಿಯನ್ನು ಕದಡಲು ಅಮೆರಿಕ ನೋಡುತ್ತಿದೆ ಎಂದು ಆರೋಪಿಸಿದೆ.
ಫ್ರಾನ್ಸ್‌ಗೇಕೆ ಸಿಟ್ಟು?:
ನಿಜವಾಗಿ ಹೇಳಬೇಕು ಎಂದರೆ ಆಕಸ್ ರಚನೆ ಮಾಡಿಕೊಂಡಿದ್ದರ ಬಗ್ಗೆ ಫ್ರಾನ್ಸ್‌ನ ಆಕ್ಷೇಪವೇನೂ ಇಲ್ಲ. ಆದರೆ ಸಬ್‌ಮೆರಿನ್‌ಗಳನ್ನು ಒದಗಿಸುವ ಸಂಬಂಧ ಆಸ್ಟ್ರೇಲಿಯಾ, ತನ್ನ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿಕೊಂಡಿದ್ದರ ಬಗ್ಗೆ ಫ್ರಾನ್ಸ್‌ಗೆ ಸಿಟ್ಟು ಬಂದಿದೆ. ಏಕೆಂದರೆ 2016ರಲ್ಲಿ ಆಸ್ಟ್ರೇಲಿಯಾ ಫ್ರಾನ್ಸ್ ಜತೆಗೆ ಸುಮಾರು 90 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿತ್ತು. ಈಗ ಈ ಒಪ್ಪಂದವನ್ನು ಆಸ್ಟ್ರೇಲಿಯಾ ರದ್ದು ಮಾಡಿತು. ಇದರಿಂದಾಗಿ ಫ್ರಾನ್ಸ್‌ನ ನೌಕಾ ಸಂಸ್ಥೆಗೆ ಬಹುದೊಡ್ಡ ನಷ್ಟವಾದಂತಾಗಿದೆ. ಇದು ಒಂದು ರೀತಿಯಲ್ಲಿ ಬೆನ್ನಿಗೆ ಚೂರಿ ಇರಿದ ಹಾಗೆ ಎಂದು ಫ್ರಾನ್ಸ್ ಪ್ರತಿಕ್ರಿಯೆ ನೀಡಿದೆ. ಅಷ್ಟೇ ಅಲ್ಲ, ಅಮೆರಿಕ ಮತ್ತು ಆಸ್ಟ್ರೇಲಿಯಾದಿಂದ ತನ್ನ ರಾಯಭಾರಿಗಳನ್ನೂ ಹಿಂದಕ್ಕೆ ಕರೆಸಿಕೊಂಡಿದೆ. ಆದರೂ ಈಗ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ.
ಆಸ್ಟ್ರೇಲಿಯಾಕ್ಕೆ ಇದರಿಂದ ಏನು ಲಾಭ?:
ಮೊದಲಿಗೆ ಆಸ್ಟ್ರೇಲಿಯಾ ಮತ್ತು ಚೀನ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ ದಕ್ಷಿಣ ಸಮುದ್ರದಲ್ಲಿ ಚೀನದ ಅಟಾಟೋಪ ಹೆಚ್ಚಾಗಿದ್ದು, ಪದೇ ಪದೆ ತನ್ನ ವ್ಯಾಪ್ತಿಯನ್ನು ಮೀರಿ ಚೀನ ಮುಂದಕ್ಕೆ ಬರುತ್ತಿದೆ. ಇದು ಆಸ್ಟ್ರೇಲಿಯಾಕ್ಕೆ ಸಹಿಸಲು ಆಗುತ್ತಿಲ್ಲ. ಅಲ್ಲದೆ, ಇಂಡೋ-ಫೆಸಿಫಿಕ್ ವಲಯದಲ್ಲಿ ಚೀನ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ನೋಡುತ್ತಿದೆ. ಒಂದು ಲೆಕ್ಕಾಚಾರದಲ್ಲಿ ಈ ಪ್ರದೇಶದಲ್ಲಿನ ಶಾಂತ ಸ್ಥಿತಿಯನ್ನು ಕದಡುವ ಲೆಕ್ಕಾಚಾರದಲ್ಲಿದೆ ಚೀನ. ಹೀಗಾಗಿ ಚೀನವನ್ನು ಸುಮ್ಮನಾಗಿಸಲು ಅಮೆರಿಕ ಹೂಡಿರುವ ತಂತ್ರಗಾರಿಕೆಯೇ ಈ ಆಕಸ್. ಅಮೆರಿಕ ನೇರವಾಗಿ ದಕ್ಷಿಣ ಸಮುದ್ರಕ್ಕೆ ಇಳಿದು, ಚೀನದೊಂದಿಗೆ ಯುದ್ಧ ಮಾಡುವುದಿಲ್ಲ. ಬದಲಾಗಿ ಚೀನದಿಂದ ಕೆಳಭಾಗದಲ್ಲಿರುವ ಆಸ್ಟ್ರೇಲಿಯಾವನ್ನು ಬಲಗೊಳಿಸಿದರೆ ಲಾಭ ಹೆಚ್ಚು. ಆಸ್ಟ್ರೇಲಿಯಾ ಇದುವರೆಗೆ ಅಣ್ವಸ್ತ್ರ ಆಧರಿತ ಸಬ್‌ಮೆರಿನ್ ಹೊಂದಿಲ್ಲ. ಅಮೆರಿಕ ಅಥವಾ ಬ್ರಿಟನ್ ಕೊಡುವ ಸಬ್‌ಮೆರಿನ್‌ನಿಂದ ಚೀನದ ಶಕ್ತಿ ಹೆಚ್ಚಾಗಿ, ಚೀನವನ್ನು ಕಟ್ಟಿ ಹಾಕಿದಂತೆ ಆಗುತ್ತದೆ. ಅಲ್ಲದೆ ಆಸ್ಟ್ರೇಲಿಯಾಕ್ಕೂ ಚೀನ ವಿರುದ್ಧ ದಿಟ್ಟವಾಗಿ ನಿಲ್ಲುವ ಶಕ್ತಿ ಬಂದಂತೆ ಆಗುತ್ತದೆ.
ಆಕಸ್ ಜನ್ಮ ತಳೆದಿರುವುದರಿಂದ ಕ್ವಾಡ್ ಒಕ್ಕೂಟ ಮಹತ್ವ ಕಳೆದು ಕೊಂಡೀತೇ?:
ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಸೇರಿಕೊಂಡು ಮಾಡಿಕೊಂಡಿರುವ ಒಕ್ಕೂಟ ಕ್ವಾಡ್. ಇದರಲ್ಲಿ ರಕ್ಷಣಾತ್ಮಕ ಸಂಬಂಧಗಳ ಜತೆಗೆ ಬೇರೆ ಬೇರೆ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆಯೂ ಚರ್ಚೆ ನಡೆಯುತ್ತದೆ, ಒಪ್ಪಂದಗಳಾಗುತ್ತವೆ. ಈ ನಾಲ್ಕೂ ದೇಶಗಳಿಗೂ ಚೀನವೇ ಪ್ರಮುಖ ಎದುರಾಳಿ. ಹೀಗಾಗಿ ಎಲ್ಲ ದಿಕ್ಕುಗಳಿಂದಲೂ ಚೀನವನ್ನು ಎದುರಿಸಲು ವ್ಯೂಹಾತ್ಮಕವಾಗಿ ಚಿಂತನೆ ನಡೆಸಿ ಈ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಆದರೆ ಆಕಸ್‌ನ ಪ್ರಮುಖ ಉದ್ದೇಶವೇ ರಕ್ಷಣ ಒಪ್ಪಂದಗಳು. ಇದರಲ್ಲಿ ಹೆಚ್ಚು ಉಪಯೋಗವಾಗುವುದು ಆಸ್ಟ್ರೇಲಿಯಾಕ್ಕೆ.
ಆಕಸ್ ಬಗ್ಗೆ ಭಾರತ ಹೇಳುವುದೇನು? :
ಆಕಸ್ ಅನ್ನು ರಕ್ಷಣ ಉದ್ದೇಶಕ್ಕಾಗಿಯೇ ಮೂರು ದೇಶಗಳು ಮಾಡಿಕೊಂಡಿವೆ. ಕ್ವಾಡ್‌ಅನ್ನು ಎಲ್ಲ ರೀತಿಯ ವ್ಯವಹಾರಗಳಿಗಾಗಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಅದಕ್ಕೂ ಇದಕ್ಕೂ ಹೋಲಿಕೆ ಸಲ್ಲದು. ಹಾಗಾಗಿ ಆಕಸ್ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.