Advertisement

ಆಗಸ್ಟಾ: ಭ್ರಷ್ಟಾಚಾರ  ನಡೆದಿಲ್ಲ ಎಂದ ಇಟೆಲಿ ಕೋರ್ಟ್‌

06:55 AM Jan 09, 2018 | Team Udayavani |

ಹೊಸದಿಲ್ಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟೆಲಿಯ ಕೋರ್ಟ್‌ ಇಬ್ಬರನ್ನು ದೋಷಮುಕ್ತಗೊಳಿಸಿದೆ. ಫಿನ್‌ಮೆಕಾನಿಕಾ ಕಂಪೆನಿಯ ಮಾಜಿ ಸಿಇಒ ಗಿಸೆಪ್ಪೆ ಓರ್ಸಿ ಮತ್ತು ಫಿನ್‌ಮೆಕಾನಿಕಾ ಕಂಪೆನಿಯ ಹೆಲಿಕಾಪ್ಟರ್‌ ವಿಭಾಗ ಮುಖ್ಯಸ್ಥ ಬರ್ನೋ ಸ್ಪಾಂಗೋಲಿನಿ ಅವರನ್ನು ಖುಲಾಸೆಗೊಳಿಸಿ ಇಟೆಲಿಯ ಮಿಲಾನ್‌ನಲ್ಲಿರುವ ಕೋರ್ಟ್‌ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು 2014ರಲ್ಲಿ ಬಂಧಿಸಲಾಗಿತ್ತು. ಜತೆಗೆ ಅವರಿಬ್ಬರಿಗೆ ನಾಲ್ಕೂವರೆ ವರ್ಷಗಳ ಕಾಲ ಕಾರಾಗೃಹವಾಸ ಶಿಕ್ಷೆ ನೀಡಿದೆ. ತೀರ್ಪಿನಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. 

Advertisement

ಮಿಲಾನ್‌ಲ್ಲಿರುವ ಸಿಬಿಐ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿ, ಕೋರ್ಟ್‌ನ ಆದೇಶವನ್ನು ವಿವರವಾಗಿ ಪರಿಶೀಲಿಸಿದ ಬಳಿಕ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದಿದ್ದಾರೆ. ಇಟೆಲಿ ಅಧಿಕಾರಿಗಳು ಅದರ ಬಗ್ಗೆ ಮೇಲ್ಮನವಿ ಸಲ್ಲಿಸುತ್ತಾರೆಯೋ ಎಂಬ ಬಗ್ಗೆ ಕಾದುನೋಡಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next