Advertisement

Chamarajanagar ಆ. 6 ರಂದು ಅಶ್ವಘೋಷ ನಾಟಕ ಪ್ರದರ್ಶನ

09:38 PM Aug 05, 2023 | Team Udayavani |

ಚಾಮರಾಜನಗರ: ನಗರದ ಶಾಂತಲಾ ಕಲಾವಿದರು ತಂಡದಿಂದ ಅಶ್ವಘೋಷ ನಾಟಕ ಪ್ರದರ್ಶನ ನಗರದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಆ. 6 ರ ಭಾನುವಾರ ಸಂಜೆ 6.30ಕ್ಕೆ ನಡೆಯಲಿದೆ.

Advertisement

ಶಾಂತಲಾ ಕಲಾವಿದರು ತಂಡದ 50 ವರ್ಷಾಚರಣೆ ಅಂಗವಾಗಿ ಈ ನಾಟಕ ಪ್ರದರ್ಶನ ಏರ್ಪಾಟಾಗಿದೆ. ನಾಟಕವನ್ನು ಬಿ.ಎಸ್. ವಿನಯ್ ರಚಿಸಿದ್ದು, ಚಿತ್ರಾ ವೆಂಕಟರಾಜು ನಿರ್ದೇಶನ ಮಾಡಿದ್ದಾರೆ. ಭಿನ್ನಷಡ್ಜ ಸಂಗೀತವಿದೆ. ನಗರದ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.

ಅಶ್ವಘೋಷ ಕ್ರಿ.ಶ.1 ನೇ ಶತಮಾನದಲ್ಲಿ ಬದುಕಿ ಬಾಳಿದ ಒಬ್ಬ ಮಹಾಕವಿ, ನಾಟಕಕಾರ, ದಾರ್ಶನಿಕನಾಗಿದ್ದು, ಈತ ರಚಿಸಿದ ಬುದ್ಧಚರಿತ ಕೃತಿಯು ಬುದ್ಧನ ಕುರಿತು ರಚಿತವಾದ ಮೊದಲ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೆ ಸಾರೀಪುತ್ರ ಪ್ರಕರಣ, ಊರ್ವಶೀ ವಿಯೋಗ ಮೊದಲಾದ ಹಲವು ಕೃತಿಗಳು ಅಶ್ವಘೋಷನಿಂದ ರಚಿತವಾಗಿವೆ.

ಇಂತಹ ವ್ಯಕ್ತಿಯ ಬದುಕಿನ ಕುರಿತು ಅಧ್ಯಾಪಕ ಬಿ.ಎಸ್. ವಿನಯ್ ರಚಿಸಿದ ನಾಟಕ ಅಶ್ವಘೋಷ. ಇದು ಅವರ ಮೊದಲ ಪ್ರಕಟಿತ ಕೃತಿ.

ಈ ಪುಸ್ತಕದ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸಹಾಯಧನ ಲಭಿಸಿತ್ತು. ಈ ಕೃತಿಗೆ ಧಾರವಾಡದ ಬೇಂದ್ರೆ ಟ್ರಸ್‌ಟ್ ನಿಂದ ಬಹುಮಾನ ದೊರೆತಿದೆ.

Advertisement

ಕರ್ನಾಟಕ ನಾಟಕ ಅಕಾಡೆಮಿಯಿಂದ ನಡೆದ ಮುದೇನೂರು ಸಂಗಣ್ಣ ನೆನಪಿನ ನಾಟಕ ರಚನಾ ಕಮ್ಮಟದಲ್ಲಿ ರಚಿತವಾದ ನಾಟಕ ಇದು. ಹಾಗಾಗಿ ಅಕಾಡೆಮಿಯಿಂದಲೂ ಇದಕ್ಕೆ ಗೌರವ ಲಭಿಸಿದೆ.

ಈ ನಾಟಕ ಈಗ ಮೊದಲ ಬಾರಿಗೆ ರಂಗದ ಮೇಲೆ ಬರುತ್ತಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸಬೇಕೆಂದು ಶಾಂತಲಾ ಕಲಾವಿದರು ತಂಡದ ಕೆ. ವೆಂಕಟರಾಜು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next