Advertisement

“ಗಂಧದ ಕುಡಿ’ಚಿತ್ರದ ಆಡಿಯೋ ಬಿಡುಗಡೆ ಇಂದು

05:19 AM Feb 23, 2019 | |

ಬಹು ನಿರೀಕ್ಷಿತ “ಗಂಧದ ಕುಡಿ’ ಚಿತ್ರದ ಹಾಡುಗಳು ಮತ್ತು ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ ಫೆ.23ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ರೇಣುಕಾಂಬಾ ಆಡಿಟೋರಿಯಂನಲ್ಲಿ ನಡೆಯಲಿದೆ. ಇನ್ವೆಂಜರ್‌ ಟೆಕ್ನಾಲಜೀಸ್‌ ಬ್ಯಾನರ್‌ ಅಡಿ ಕೆ.ಸತ್ಯೇಂದ್ರ ಪೈ, ಕೆ.ಕೃಷ್ಣ ಮೋಹನ್‌ ಪೈ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸಂತೋಷ್‌ ಶೆಟ್ಟಿ ಕಟೀಲು ನಿರ್ದೇಶಿಸಿದ್ದಾರೆ.

Advertisement

ಈಗಾಗಲೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಈ ಚಿತ್ರ, ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಝಾಕ್‌ ಪುತ್ತೂರು ಸಾಹಿತ್ಯ ಬರೆದಿದ್ದಾರೆ. ಪ್ರಸಾದ್‌ ಕೆ.ಶೆಟ್ಟಿ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಸುಮಧುರವಾಗಿ ಮೂಡಿ ಬಂದಿವೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಗೀತೆಯನ್ನು ದಕ್ಷಿಣ ಭಾರತದ ಖ್ಯಾತ ಗಾಯಕ ವಿಜಯ ಪ್ರಕಾಶ್‌ ಹಾಡಿದ್ದಾರೆ.

ಉಳಿದ ಹಾಡುಗಳಿಗೆ ಪ್ರಕಾಶ್‌ ಮಹದೇವ್‌, ಶ್ರೇಯಾ ಜೈದೀಪ್‌, ರವಿ ಮಿಶ್ರಾ, ಸಾತ್ವಿ ಜೈನ್‌, ವಿದ್ಯಾ ಸುವರ್ಣ ಮುಂತಾದವರು ಧ್ವನಿ ನೀಡಿದ್ದಾರೆ. ಚಿತ್ರವು ಮಾರ್ಚ್‌ ಕೊನೆಯ ವಾರದಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದೆ. ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ ಎಂದು ಚಿತ್ರ ತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next