Advertisement

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

06:46 PM Jan 02, 2025 | Team Udayavani |

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜ. 26 ರಿಂದ 30 ರ ವರೆಗೆ ಜರಗಲಿದೆ. ಈ ಸಾಲಿನ ಮಹೋತ್ಸವದ ಸಂದೇಶ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” ಎಂಬುವುದಾಗಿದೆ.

Advertisement

ಜ 26ರ ಬೆಳಗ್ಗೆ 10.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದ್ದು, ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ.

ಜ 27ರಂದು ಬೆಳಗ್ಗೆ 10 ಗಂಟೆಗೆ ಬಲಿಪೂಜೆಯನ್ನು, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರು ಅ.ವಂ.ಫರ್ಡಿನಾಂಡ್ ಗೋನ್ಸಾಲ್ವಿಸ್ ನೆರವೇರಿಸಲಿದ್ದಾರೆ.

ಜ 28ರಂದು ಸಾಯಂಕಾಲ 5.30ಕ್ಕೆ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಾಧ್ಯಕ್ಷ ಲೋರೆನ್ಸ್ ಮುಕ್ಕುಝೀ ನೆರವೇರಿಸಲಿದ್ದಾರೆ.ಜ 29ರಂದು ಬೆಳಗ್ಗೆ 10 ಗಂಟೆಗೆ ಬಲಿಪೂಜೆಯನ್ನು ಮಂಗಳೂರು ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಸೊಜ್ ನೆರವೇರಿಸಲಿದ್ದಾರೆ.ಜ 30ರಂದು ಬೆಳಗ್ಗೆ 10 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು. ಬಾರುಯಿಪುರ್ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಸಾಲ್ವದೊರ್ ಲೋಬೋ ನೆರವೇರಿಸಲಿದ್ದಾರೆ,

ಸಂತ ಲಾರೆನ್ಸರ ಗೌರವಾರ್ಥ ನವೇನ ಪ್ರಾರ್ಥನೆಯು ಜನವರಿ 17 ರಿಂದ ಆರಂಭಗೊಳ್ಳಲಿದೆ.ಜನವರಿ 26ರಂದು ರವಿವಾರ ಮಕ್ಕಳಿಗೋಸ್ಕರ ವಿಶೇಷ ಬಲಿಪೂಜೆ ಇರುವುದು. ಆ ದಿನದ ಪ್ರಥಮ ಪೂಜೆ ಬೆಳಗ್ಗೆ 7.30ಕ್ಕೆ ಕೊನೆಯ ಪೂಜೆ ರಾತ್ರಿ 8ಗಂಟೆಗೆ ನೆರವೇರಲಿದೆ.

Advertisement

ಜ 27ರಂದು ಸೋಮವಾರ ಬೆಳಗ್ಗೆ 10 ಕ್ಕೆ, ಮಧ್ಯಾಹ್ನ 3ಕ್ಕೆ ಹಾಗೂ ಸಂಜೆ 6 ಕ್ಕೆ ದಿವ್ಯಬಲಿಪೂಜೆನಡೆಯಲಿದೆ. ಆ ದಿನದಂದು ರೋಗಿಗಳಿಗಾಗಿ ವಿಶೇಷ ಪೂಜೆ ಹಾಗೂ ಆ ದಿನ ಮಾತ್ರ ರೋಗಿಗಳ ವಾಹನಗಳನ್ನು ಇಗರ್ಜಿಯ ವಠಾರಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಬೇರೆ ದಿನಗಳಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ಜ 28ರಂದು ಹಾಗೂ ಜ 29ರಂದು ಪ್ರಥಮ ಪೂಜೆ ಬೆಳಗ್ಗೆ 8 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 10 ಗಂಟೆಗೆ ನೆರವೇರಲಿದೆ.ಜ 30ರಂದು ಪ್ರಥಮ ಪೂಜೆ ಬೆಳಗ್ಗೆ 8 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 8.30ಕ್ಕೆ ನೆರವೇರಲಿದೆ.

ಹರಕೆಯ ಮೊಂಬತ್ತಿ ಹಾಗೂ ಧಾರ್ಮಿಕ ವಸ್ತುಗಳು ಪುಣ್ಯಕ್ಷೇತ್ರದ ಸ್ಟಾಲ್ ನಲ್ಲಿ ಸಿಗಲಿದ್ದು, ಹರಕೆಯ ಪೂಜೆಗಳನ್ನು ಸ್ವೀಕರಿಸುವ ವ್ಯವಸ್ಥೆ ಇದೆ. ನವೇನದ ದಿನಗಳಲ್ಲಿ ಹಾಗೂ ಹಬ್ಬದ ದಿನಗಳಲ್ಲಿ ಭಕ್ತಾದಿಗಳಿಗೆ ವಿಶೇಷ ಪಾಪ ನಿವೇದನೆಯ ವ್ಯವಸ್ಥೆ ಇರುವುದು ಎಂದು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ, ಸಂತ ಲಾರೆನ್ಸ್‌ ಬಸಿಲಿಕಾ ಆಡಳಿತ ಸಮಿತಿಯ ರೆಕ್ಟರ್ ಅ.ವಂ.ಅಲ್ಬನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next