Advertisement

ಸಂಸ್ಕಾರದಿಂದ ವ್ಯಕ್ತಿಗತ ಪರಿವರ್ತನೆ 

04:17 PM Oct 25, 2018 | Team Udayavani |

ಮುಂಡರಗಿ: ವ್ಯಕ್ತಿಯು ಉತ್ತಮವಾದ ಸಂಸ್ಕಾರ ಹೊಂದುವುದರಿಂದ ವ್ಯಕ್ತಿಗತವಾಗಿ ಪರಿವರ್ತನೆಗೊಳ್ಳುತ್ತಾನೆ. ಸಮಾಜದಲ್ಲೂ ಬದಲಾವಣೆಯನ್ನು ತರಬಹುದಾಗಿದೆ ಎಂದು ಜಗದ್ಗುರು ನಾಡೋಜ ಡಾ| ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು. ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ನಡೆದ ಸ್ವಯಂ ಸೇವಕರ ಪಥಸಂಚಲನದ ನಂತರ ಅನ್ನದಾನೀಶ್ವರ ಮಠದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಗುರಿ ತಲುಪಲು ಉತ್ತಮವಾದ ಗುರುವಿನ ಮಾರ್ಗದರ್ಶನವಿರಬೇಕು. ವ್ಯಕ್ತಿಗತ ಗುರಿ ಸಾಧನೆಯಿಂದ ಸಮಾಜ ಮತ್ತು ದೇಶದ ಅಭಿವೃದ್ಧಿ ಸಾಧಿಸಬಹುದಾಗಿದೆ ಎಂದು ಹೇಳಿದರು. ಪ್ರಾಂತ ಸಹ ಸೇವಾ ಪ್ರಮುಖ ದುರ್ಗಣ್ಣ ಮಾತನಾಡಿದರು. ಯಲ್ಲಪ್ಪ ಅಕ್ಕಸಾಲಿ, ಪ್ರವೀಣ ಅಕ್ಕಸಾಲಿ, ಶಿವು ನವಲಗುಂದ, ಕೃಷ್ಣ ಗಾರವಾಡ, ಮಲ್ಲೇಶ ಬಾರಕೇರ, ದೇವಪ್ಪ ಇಟಗಿ, ನಾಗರಾಜ ಮುರುಡಿ, ಟಿ.ಬಿ. ಡಂಡಿನ್‌, ಶಿವು ನಾಡಗೌಡ, ಮುದುಕನಗೌಡ ಮರಡ್ಡಿ, ಮಂಜುನಾಥ ಮುಧೋಳ, ಪವನರಡ್ಡಿ ಇದ್ದರು. ಪವನ ಮೇಟಿ ಸ್ವಾಗತಿಸಿದರು. ಮಂಜುನಾಥ ಇಟಗಿ ನಿರೂಪಿಸಿದರು. ನಾಗರಾಜ ಪತ್ತಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next