Advertisement

ಗಮನ ಸೆಳೆದ ಜೋಡೆತ್ತಿನ ಗಾಡಿ ಸ್ಪರ್ಧೆ

05:09 PM Apr 30, 2018 | Team Udayavani |

ಚಿಕ್ಕೋಡಿ: ಉಮರಾಣಿ ಗ್ರಾಮದ ಭಾವೇಶ್ವರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜೋಡೆತ್ತಿನ ಗಾಡಿ ಸ್ಪರ್ಧೆ ಹಾಗೂ ಜೋಡು ಕುದುರೆ ಗಾಡಿ ಸ್ಪರ್ಧೆ ನೋಡುಗರ ಗಮನ ಸೆಳೆದವು.

Advertisement

ಸ್ಪರ್ಧೆಗಳಿಗೆ ಅಪ್ಪಾಸಾಬಗೌಡಾ ಪಾಟೀಲ ಮತ್ತು ಜಾತ್ರಾ ಕಮಿಟಿ ಮುಖಂಡರು ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಉಮರಾಣಿ ಗ್ರಾಮದ ಕರೆಪ್ಪಾ ದಶರಥ ಕರೆನ್ನವರ ಅವರ ಗಾಡಿ ಪ್ರಥಮ, ಕರ್ನಾಳವರ ಗಾಡಿ ದ್ವಿತೀಯ, ಉಮರಾಣಿ ಗ್ರಾಮದ ರಾಜು ಕರೆನ್ನವರ ಗಾಡಿ ತೃತೀಯ ಹಾಗೂ ಆಲಕನೂರಿನ ಪರಸು ಸಿದ್ರಾಮ ಕರಿಗಾರವರ ಗಾಡಿ ನಾಲ್ಕನೇ ಬಹುಮಾನ ಪಡೆದುಕೊಂಡವು.

ಜೋಡು ಕುದುರೆ ಗಾಡಿ ಸ್ಪರ್ಧೆಯಲ್ಲಿ ಉಮರಾಣಿ ಗ್ರಾಮದ ರಾಜು ಕರೆನ್ನವರ ಗಾಡಿ ಪ್ರಥಮ, ಕರೆಪ್ಪಾ ಕರೆನ್ನವರ ಗಾಡಿ ದ್ವಿತೀಯ ಹಾಗೂ ಅಬ್ದುಲಾಟದ ಗಾಡಿ ತೃತೀಯ ಬಹುಮಾನ ಪಡೆದುಕೊಂಡವು. ಜಾತ್ರಾ ಮಹೋತ್ಸವದ ಅಂಗವಾಡಿ ವಿವಿಧ ಸಂಘಟನೆಗಳಿಂದ ವಾಲಿಬಾಲ್‌ ಪಂದ್ಯಾವಳಿ, ಕಬಡ್ಡಿ ಪಂದ್ಯಾವಳಿ ಮತ್ತು ಕ್ರಿಕೆಟ್‌ ಪಂದ್ಯಾಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸ್ಪರ್ಧಾ ವಿಜೇತರಿಗೆ ಜಾತ್ರಾ ಕಮಿಟಿ ಸದಸ್ಯರಾದ ಪರಗೌಡ ಪಾಟೀಲ, ಕೇದಾರಿಗೌಡ ಪಾಟೀಲ, ಮಹಾದೇವಗೌಡ ಪಾಟೀಲ, ಲಕ್ಷ್ಮಣ ಅಂಬಲೆ, ಸಿದಗೌಡ ಪಾಟೀಲ, ಈಶ್ವರಗೌಡ ಪಾಟೀಲ ಮತ್ತು ಗ್ರಾಪಂ ಸದಸ್ಯರಾದ ಎಂ.ಎನ್‌.ಅಡಿಸೇರಿ, ಡಿ.ಎಂ. ಭೀಮನಾಯಿಕ, ಎಸ್‌.ವೈ. ಪಾಟೀಲ, ಲಕ್ಷ್ಮಣ ಪೂಜೇರಿ,ಬಸಗೌಡ ಪಾಟೀಲ, ಮಹೇಶ ಪಾಟೀಲ, ಜಯಾನಂದ ವಂಟೆಮುತ್ತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next